More

    ಪಾಕ್ ಪ್ರಜೆ ಸೀಮಾ ಹೈದರ್​​​ಗೆ ಭಾರತದ ಪೌರತ್ವ ನೀಡುವಂತೆ ಸಚಿನ್ ತಂದೆ ಒತ್ತಾಯ

    ಉತ್ತರಪ್ರದೇಶ: ಸೀಮಾ ಹೈದರ್ ಪ್ರಕರಣವು ರಾಷ್ಟ್ರಪತಿ ಭವನ ತಲುಪಿದೆ. ಹೌದು, ಸಚಿನ್ ಅವರ ತಂದೆ ಸೀಮಾ ಹೈದರ್​​ಗೆ ಭಾರತೀಯ ಪೌರತ್ವ ನೀಡುವಂತೆ ಒತ್ತಾಯಿಸಿದ್ದಾರೆ.

    ಸೀಮಾ ಹೈದರ್ ಪ್ರೇಮಿ ಸಚಿನ್ ಮೀನಾ ಅವರ ತಂದೆ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ್ದು, ಅವರಿಗೆ ಭಾರತೀಯ ಪೌರತ್ವ ನೀಡುವಂತೆ ಕೋರಿದ್ದಾರೆ. ಸಚಿನ್ ತಂದೆ ತಮ್ಮ ವಕೀಲರೊಂದಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಮೊದಲು ಸೀಮಾ ಹೈದರ್ ಸಚಿನ್​​​ನನ್ನು ಭೇಟಿ ಮಾಡಲು ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದಳು.

    ಇದನ್ನೂ ಓದಿ: ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಯುವತಿ, ಆಮೇಲಾಗಿದ್ದೇನು? 

    ಸೀಮಾ ಹೈದರ್ (30) ಮತ್ತು ಸಚಿನ್ ಮೀನಾ (22) ಅವರನ್ನು ಜುಲೈ 4 ರಂದು ಗ್ರೇಟರ್ ನೋಯ್ಡಾದಿಂದ ಸ್ಥಳೀಯ ಪೊಲೀಸರು ಮೊದಲು ಬಂಧಿಸಿದರು. ಆದರೆ ಜುಲೈ 7 ರಂದು ನ್ಯಾಯಾಲಯದಿಂದ ಜಾಮೀನು ನೀಡಲಾಯಿತು. ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಮೇ ತಿಂಗಳಲ್ಲಿ ನೇಪಾಳದ ಮೂಲಕ ಭಾರತವನ್ನು ಪ್ರವೇಶಿಸಿದರು. ಈ ವರ್ಷದ ಆರಂಭದಲ್ಲಿ ನೇಪಾಳದಲ್ಲಿ ವಿವಾಹವಾಗಿರುವುದಾಗಿ ಹೇಳಿಕೊಂಡ ಸೀಮಾ ಹೈದರ್ ಹಾಗೂ ಸಚಿನ್ 2019 ರಲ್ಲಿ ಆನ್‌ಲೈನ್ ಗೇಮ್ PUBG ಮೂಲಕ ಮೊದಲು ಪರಿಚಯವಾದರು.

    ಇದನ್ನೂ ಓದಿ:ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ತಟ್ಟಿದ ದಂಡದ‌ ಬಿಸಿ! 

    ಏತನ್ಮಧ್ಯೆ, ಉತ್ತರ ಪ್ರದೇಶ ಪೊಲೀಸರು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜೊತೆಗೆ ಸೀಮಾ ಹೈದರ್ ಅವರನ್ನು ಇನ್ನೂ ವಿಚಾರಣೆ ನಡೆಸುತ್ತಲಿದ್ದಾರೆ. ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ನಮಗೆ ಈ ವಿಷಯ ತಿಳಿದಿದೆ. ನ್ಯಾಯಾಲಯಕ್ಕೆ ಹಾಜರಾದ ಆಕೆ (ಸೀಮಾ ಹೈದರ್) ನ್ಯಾಯಾಲಯದಿಂದ ಜಾಮೀನು ಪಡೆದು ಜಾಮೀನಿನ ಮೇಲೆ ಹೊರಗಿದ್ದಾಳೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಇದು ನ್ಯಾಯಾಂಗ ವಿಷಯವಾಗಿದೆ ಮತ್ತು ತನಿಖೆ ನಡೆಯುತ್ತಿದೆ, ಆದ್ದರಿಂದ ನಾನು ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ” ಎಂದರು.

    ಅಜ್ಜನ ಮಡಿಲಿಂದ ಜಾರಿ ಚರಂಡಿಗೆ ಬಿದ್ದ 6 ತಿಂಗಳ ಮಗು; ಮಗಳಿಗಾಗಿ ಕಾದು ಕೂತ ತಾಯಿ, ಇದು ಹೃದಯ ಕಲಕುವ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts