More

    ತನ್ನ ಪ್ರಿಯಕರನನ್ನು ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಯುವತಿ, ಆಮೇಲಾಗಿದ್ದೇನು?

    ಬಿಹಾರ: ಬಿಹಾರದಲ್ಲಿ ನಡೆದ ಪ್ರೇಮಕಥೆಯೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೌದು, ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ರಾತ್ರಿ ಇಡೀ ಗ್ರಾಮದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾಳೆ. ಕೊನೆಗೆ ಈ ವಿಷಯ ತಿಳಿದ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. ಮುಂದೇನಾಯ್ತು? ಓದಿ…

    ಘಟನೆಯ ವಿವರ

    ಜುಲೈ 14 ರ ರಾತ್ರಿ ಯುವತಿ ಟ್ರಾನ್ಸ್‌ಫಾರ್ಮರ್‌ನಿಂದ ಗ್ರಾಮದ ವಿದ್ಯುತ್ ಕಡಿತಗೊಳಿಸಿ, ಪ್ರಿಯಕರನ ಭೇಟಿಯಾಗಲು ಕರೆ ಮಾಡಿದಳು. ಆಗ ಆ ಗ್ರಾಮದ ಯುವಕರು ಆಕೆಯನ್ನು ಹಿಡಿದಿದ್ದಾರೆ. ಇದಾದ ಬಳಿಕ ಯುವಕರು ಥಳಿಸಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಾಳೆ.

    ಗ್ರಾಮಸ್ಥರ ಆರೋಪ

    ಯುವತಿ ತನ್ನ ಪ್ರಿಯಕರನನ್ನು ಮನೆಗೆ ಆಹ್ವಾನಿಸಲು ಟ್ರಾನ್ಸ್‌ಫಾರ್ಮರ್‌ನಿಂದ ಇಡೀ ಗ್ರಾಮದ ವಿದ್ಯುತ್ ಕಡಿತಗೊಳಿಸಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗ್ರಾಮದಲ್ಲಿ ಕತ್ತಲಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿವೆ ಎನ್ನಲಾಗಿದೆ.

    ಮದುವೆ ಮಾಡಿಸಿದ ಪೊಲೀಸರು

    ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಪ್ರಿಯಕರ ತನ್ನ ಸಹಚರರೊಂದಿಗೆ ಸೇಡು ತೀರಿಸಿಕೊಳ್ಳಲು ಎರಡನೇ ದಿನ ಯುವತಿಯ ಗ್ರಾಮಕ್ಕೆ ತಲುಪಿ ಅವರನ್ನು ಥಳಿಸಿದ ಯುವಕರೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಿಯಕರ ಸೇರಿದಂತೆ ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಯುವತಿಯನ್ನು ಕೂಡ ಠಾಣೆಗೆ ಕರೆಸಲಾಗಿತ್ತು. ಇದಾದ ಬಳಿಕ ಇಬ್ಬರೂ ಪೊಲೀಸರ ಸಮ್ಮುಖದಲ್ಲಿ ಮದುವೆಯಾಗಲು ಒಪ್ಪಿದ್ದರು. ಬಳಿಕ ಎರಡೂ ಕಡೆಯವರ ಒಪ್ಪಿಗೆ ಮೇರೆಗೆ ಮದುವೆ ಮಾಡಲಾಯಿತು. ಇಬ್ಬರೂ ವಯಸ್ಕರು ಗುರುವಾರ ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಬೈರಿಯಾದ ಪಟ್ಜಿರ್ವಾ ದೇವಿ ದೇವಸ್ಥಾನದಲ್ಲಿ ವಿವಾಹ ಮಾಡಲಾಯಿತು. ಇಬ್ಬರ ಸಂಬಂಧಿಕರು ಸೇರಿದಂತೆ ಗ್ರಾಮದ ಮುಖ್ಯಸ್ಥರು ಮದುವೆಯಲ್ಲಿ ಪಾಲ್ಗೊಂಡಿದ್ದರು.

    ಇಬ್ಬರೂ ವಯಸ್ಕರು

    ಎಂದು ಪೊಲೀಸ್ ಠಾಣೆಯ ಅಧ್ಯಕ್ಷ ಖಾಲಿದ್ ಅಖ್ತರ್ ತಿಳಿಸಿದ್ದಾರೆ. ಮದುವೆಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದರು.

    ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ತಟ್ಟಿದ ದಂಡದ‌ ಬಿಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts