VIDEO | ಹೀಗೆ ಮಾಡಿ ನೋಡಿ ನಿಮ್ಮ ಚಪ್ಪಲಿಗಳು ಎಂದಿಗೂ ಕಳ್ಳತನವಾಗುವುದಿಲ್ಲ!

slipper
Published on

ಬೆಂಗಳೂರು: ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ ಕೆಲವು ವಿಡಿಯೋಗಳು ಮಾತ್ರ ಸಂದೇಶ ನೀಡುತ್ತವೆ, ಕೆಲವೊಮ್ಮೆ ತಮಾಷೆಯಾಗಿಯು ಇರುತ್ತವೆ. ಇಂಥಹ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತದೆ. ಸದ್ಯ ಅಂತಹ ವಿಡಿಯೋವೊಂದು ವೈರಲ್ ಆಗುತ್ತಿದೆ.

ದೇವಸ್ಥಾನ, ಕಾರ್ಯಕ್ರಮ ಹಾಗೂ ಹೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಜನರಿಗೆ ಚಪ್ಪಲಿ ಕಳ್ಳತನವಾಗುವ ಚಿಂತೆ ಹೆಚ್ಚಾಗಿ ಕಾಡುತ್ತದೆ. ಈ ಸಮ್ಯೆಗೆ ಏನು ಮಾಡುವುದು ಎಂದು ಯೋಚಿಸುವ ನಿಮಗೆ ಒಬ್ಬ ವ್ಯಕ್ತಿಯು ತನ್ನ ಚಪ್ಪಲಿಗಳನ್ನು ಕಳ್ಳತನದಿಂದ ರಕ್ಷಿಸಲು ತನ್ನದೇ ಆದ ತಂತ್ರವನ್ನು ಬಳಸುತ್ತಿರುವುದು ಹೇಗೆ ಎಂದು ವಿಡಿಯೋ ಮೂಲಕವಾಗಿ ತೋರಿಸಿದ್ದಾನೆ.

ವಿಡಿಯೋದಲ್ಲಿ ಏನಿದೆ?: ವೈರಲ್ ಆಗುತ್ತಿರುವ ವೀಡಿಯೊದಲ್ಲಿ ವ್ಯಕ್ತಿ, ದೇವಸ್ಥಾನಕ್ಕೆ ಬಂದಿದ್ದಾನೆ. ಒಳಗೆ ಹೋಗುವ ಮೊದಲು ತನ್ನ ಚಪ್ಪಲಿಯನ್ನು ತೆಗೆದಿದ್ದಾನೆ. ಈಗ ತನ್ನ ಚಪ್ಪಲಿ ಕಳ್ಳತನವಾಗಬಹುದೆಂದು ಎರಡೂ ಚಪ್ಪಲಿಗಳ ಲೇಸ್‌ಗಳನ್ನು ತೆಗೆದುಹಾಕಿದ್ದಾನೆ. ಇದಾದ ನಂತರ ಆ ಲೇಸ್ ಗಳನ್ನು ಜೇಬಿನಲ್ಲಿ ಇಟ್ಟುಕೊಂಡು ಮುಂದೆ ಸಾಗುತ್ತಾನೆ. ವ್ಯಕ್ತಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಈ ವೀಡಿಯೊವನ್ನು ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದ್ದು, ಸುದ್ದಿ ಬರೆಯುವ ತನಕ 36 ಮಿಲಿಯನ್ ಮಂದಿ ವಿಡಿಯೋ ವೀಕ್ಷಿಸಿದ್ದು, ನಾನು ಈ ಪ್ರಯತ್ನ ಮಾಡಿದ್ದೇನೆ, ನಾನು ಹೀಗೆ ಮಾಡಿ ನೋಡುತ್ತೇನೆ ಹೇಗೆ ವರ್ಕ್​​ ಆಗುತ್ತದೆ ಎನ್ನುವುದನ್ನು ನೋಡೋಣ, ತಲೆ ಅಂದ್ರೆ ನಿಂದು ಗುರು ಎಂದು ಕಾಮೆಂಟ್​​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net