ಈ ಮಗ ತನ್ನ ತಂದೆಯನ್ನೇ ಮನೆಯೊಳಗೆ ಸೇರಿಸಲಿಲ್ಲ!

Coronavirus 23 april 20
Published on

ಶಿರಸಿ: ಕರೊನಾ ವೈರಸ್ ಕೆಲವು ಸಂದರ್ಭಗಳಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತಿದ್ದರೆ, ಇನ್ನು ಕೆಲ ಸನ್ನಿವೇಶಗಳಲ್ಲಿ ಸಂಬಂಧಗಳನ್ನೇ ಹಾಳುಗೆಡವುತ್ತಿದೆ.

ಮಹಾರಾಷ್ಟ್ರದ ಥಾಣೆಯಿಂದ ಬೆಂಗಳೂರು ಮಾರ್ಗವಾಗಿ ಶಿರಸಿ ಸಮೀಪದ ಹಳ್ಳಿಗೆ ಬಂದ ವೃದ್ಧ ತಂದೆಯನ್ನು ಮಗನೇ ಮನೆಯೊಳಗೆ ಸೇರಿಸದ ಘಟನೆ ವರದಿಯಾಗಿದೆ.

ಶಿರಸಿಯಿಂದ ಕೆಲ ತಿಂಗಳ ಹಿಂದಷ್ಟೇ ಮುಂಬೈಗೆ ಹೋಗಿದ್ದ ವೃದ್ಧ ಅಲ್ಲಿಂದ ಬೆಂಗಳೂರಿಗೆ ಮೇ 21ರಂದು ರೈಲಿನ ಮೂಲಕ ಆಗಮಿಸಿದ್ದ. ಅಲ್ಲಿಂದ ಮೇ 22ರಂದು ಶಿವಮೊಗ್ಗ ಮಾರ್ಗವಾಗಿ ಶಿರಸಿ ಸಮೀಪದ ಹಳ್ಳಿಯಲ್ಲಿರುವ ಮಗನ ಮನೆ ಬಳಿ ಆಗಮಿಸಿದ್ದ.

ವಿಷಯ ತಿಳಿದ ಮಗ ತಂದೆಯನ್ನು ಮನೆಯೊಳಗೆ ಸೇರಿಸದೆ ಸಮೀಪದ ತೋಟದಲ್ಲಿರುವಂತೆ ಸೂಚಿಸಿದ! ಅಷ್ಟೇ ಅಲ್ಲ, ತನ್ನ ಅಪ್ಪ ಮುಂಬೈಯಿಂದ ಬಂದ ವಿಷಯವನ್ನು ಇಸಳೂರು ಗ್ರಾಮ ಪಂಚಾಯಿತಿಗೆ ತಿಳಿಸಿದ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಪೊಲೀಸರು ತಂದೆ-ಮಗ ಇಬ್ಬರಿಗೂ ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಾಕೀತು ಮಾಡಿದರು.

ವೃದ್ಧ ಮತ್ತು ಆತನ ಮಗ ಇಬ್ಬರೂ ಅವರದೇ ಕಾರಿನಲ್ಲಿ ನಗರದ ಸರ್ಕಾರಿ ಆಸ್ಪತ್ರೆಗೆ ಬಂದರು. ಇಬ್ಬರದೂ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net