More

    ಹಸಿವಿನಿಂದ ಕಂಗೆಟ್ಟು ಸತ್ತ ನಾಯಿಯ ಮಾಂಸವನ್ನೇ ತಿಂದ!

    ಜೈಪುರ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ತನ್ನ ಊರಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬ ಹಸಿವು ತಾಳಲಾರದೆ, ರಸ್ತೆಯಲ್ಲಿ ಬಿದ್ದಿದ್ದ ನಾಯಿಯ ಶವವನ್ನೇ ಭಕ್ಷಿಸಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

    ಈ ಕುರಿತ ವಿಡಿಯೋ ಈಗಾಗಲೇ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ನಡೆದಿರುವ ಸ್ಥಳವನ್ನು ನಿರ್ದಿಷ್ಟವಾಗಿ ಗುರುತಿಸಲು ಆ ವಿಡಿಯೋದಲ್ಲಿ ಸಾಧ್ಯವಾಗುತ್ತಿಲ್ಲ.

    ಇದನ್ನೂ ಓದಿ   ಪ್ರಧಾನಿ ಕರೊನಾ ಪ್ಯಾಕೇಜ್ ಕ್ರೂರ ಜೋಕ್: ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೋನಿಯಾ

    ಆದರೆ ಸುತ್ತಮುತ್ತಲಿನ ಅಂಗಡಿಗಳನ್ನು ಗಮನಿಸಿದರೆ, ಈ ಆಘಾತಕಾರಿ ಘಟನೆಯು ನವದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಅದೇ ಮಾರ್ಗದ ಮೂಲಕ ದೆಹಲಿಗೆ ಹೋಗುತ್ತಿದ್ದ ಪ್ರದ್ಯುಮ್ನಸಿಂಗ್ ನರುಕಾ ಎಂಬಾತ ಈ ವಿಡಿಯೋ ತೆಗೆದು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

    ‘‘ಇಲ್ಲೊಬ್ಬ ರಸ್ತೆ ಮೇಲೆ ಬಿದ್ದ ನಾಯಿ ಮಾಂಸ ತಿಂತಿದ್ದಾನೆ ನೋಡಿ… ಓಯ್, ಏನ್ ತಿಂತಿದೀಯಾ, ಹೀಗೆ ಏನೇನೋ ತಿಂದರೆ ಸತ್ತೋಗ್ತೀಯಾ’’ ಎಂಬ ಹಿಂದಿ ಭಾಷೆಯ ಮಾತುಗಳು ಆ ವಿಡಿಯೋದಲ್ಲಿ ಕೇಳಿಸುತ್ತವೆ. ತಾನಿದ್ದ ಊರಿನಲ್ಲಿ ಕೆಲಸವೂ ಸಿಗದೆ, ಊಟವೂ ಸಿಗದೆ ತೀವ್ರ ಕಂಗೆಟ್ಟಿದ್ದ ಈತ ಒಬ್ಬನೇ ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದ ಎನ್ನಲಾಗಿದೆ. ಆತನ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

    ಪ್ರಧಾನಿ ಕರೊನಾ ಪ್ಯಾಕೇಜ್ ಕ್ರೂರ ಜೋಕ್: ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸೋನಿಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts