

ಮುಂಬೈ: ಮ್ಯಾನ್ ಇಂಡಸ್ಟ್ರೀಸ್ (ಇಂಡಿಯಾ) ಲಿಮಿಟೆಡ್ ಕಂಪನಿಯು ಸರಿಸುಮಾರು 400 ಕೋಟಿ ರೂಪಾಯಿಗಳ ಹೊಸ ವ್ಯಾಪಾರ ಒಪ್ಪಂದಗಳು ದೊರೆತಿವೆ ಎಂಬ ಮಾಹಿತಿ ಇದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಗ್ರಾಹಕರಿಗೆ ವಿವಿಧ ರೀತಿಯ ಪೈಪ್ಗಳ ಪೂರೈಕೆಯನ್ನು ಇದು ಒಳಗೊಂಡಿದ್ದು, ಮುಂದಿನ 6 ತಿಂಗಳೊಳಗೆ ಇದು ಪೂರ್ಣಗೊಳ್ಳಲಿದೆ. ಇದಲ್ಲದೆ, ಇಂದಿನವರೆಗೆ ಚಾಲ್ತಿಯಲ್ಲಿರು ಒಟ್ಟು ವ್ಯಾಪಾರ ಒಪ್ಪಂದ (ಆರ್ಡರ್ ಬುಕ್) ಮೊತ್ತವು ಸರಿಸುಮಾರು 1,300 ಕೋಟಿ ರೂಪಾಯಿಗಳಷ್ಟಿದ್ದು, ಇದನ್ನು 6 ತಿಂಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.
ಮ್ಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ LSAW ಮತ್ತು HSAW ಪೈಪ್ಗಳ ಅತಿದೊಡ್ಡ ತಯಾರಿಸುವ ಮತ್ತು ರಫ್ತು ಮಾಡುವ ದೊಡ್ಡ ಕಂಪನಿಯಾಗಿದೆ. ಒಟ್ಟು 10 ಲಕ್ಷ ಟನ್ಗಳ ಸ್ಥಾಪಿತ ಸಾಮರ್ಥ್ಯ ಹೊಂದಿದೆ. ಕಂಪನಿಯು ಪೈಪ್ ಉದ್ಯಮದಲ್ಲಿ 3 ದಶಕಗಳ ಉಪಸ್ಥಿತಿಯೊಂದಿಗೆ ದೊಡ್ಡ ಗಾತ್ರದ ಪೈಪ್ಗಳ ಪ್ರಮುಖ ತಯಾರಕರಲ್ಲಿ ಒಂದಾಗಿದೆ.
ಇಂದು, ಮ್ಯಾನ್ ಇಂಡಸ್ಟ್ರೀಸ್ ಲಿಮಿಟೆಡ್ನ ಷೇರುಗಳು ಬುಧವಾರ ರೂ 387.95ಕ್ಕೆ ತಲುಪಿದ್ದು, ಒಂದೇ ದಿನದಲ್ಲಿ ಶೇಕಡಾ 3.59ರಷ್ಟು ಹೆಚ್ಚಳವನ್ನು ಕಂಡಿವೆ. ಪ್ರತಿ ಷೇರಿಗೆ ಶೇಕಡಾ 5.12ರಷ್ಟು ಏರಿಕೆಯೊಂದಿಗೆ 52 ವಾರಗಳ ಇಂಟ್ರಾಡೇ ಗರಿಷ್ಠ ಮಟ್ಟವಾದ ರೂ 397.05 ಗೆ ತಲುಪಿದ್ದವು.
ಈ ಕಂಪನಿಯ ಪ್ರಸ್ತುತ ಹಣಕಾಸಿನ ತ್ರೈಮಾಸಿಕ ಫಲಿತಾಂಶಗಳ ಪ್ರಕಾರ, ನಿವ್ವಳ ಮಾರಾಟವು ಶೇಕಡಾ 119ರಷ್ಟು ಹೆಚ್ಚಳದೊಂದಿಗೆ 1,018 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಲ್ಲದೆ, ನಿವ್ವಳ ಲಾಭವು ಹಿಂದಿನ ತ್ರೈಮಾಸಿಕಕ್ಕಿಂತ ಶೇಕಡಾ 880ರಷ್ಟು ಹೆಚ್ಚಳ ಕಂಡು, 39 ಕೋಟಿ ರೂಪಾಯಿಗಳಿಗೆ ಏರಿದೆ.
ಸ್ಮಾಲ್ ಕ್ಯಾಪ್ ಆಗಿರುವ ಈ ಕಂಪನಿಯ ಷೇರು ಬೆಲೆಯು ಕೇವಲ 1 ವರ್ಷದಲ್ಲಿ 375 ಪ್ರತಿಶತದಷ್ಟು ಲಾಭವನ್ನು ನೀಡಿದ್ದು, ಈ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಪರಿಗಣಿತವಾಗಿದೆ. ಇದೇ ಅವಧಿಯಲ್ಲಿ ಬಿಎಸ್ಇ ಸ್ಮಾಲ್-ಕ್ಯಾಪ್ ಸೂಚ್ಯಂಕವು ಶೇಕಡಾ 52ರಷ್ಟು ಏರಿಕೆಯಾಗಿರುವುದು ಗಮನಾರ್ಹವಾಗಿದೆ.
ಹೂಡಿಕೆದಾರರು ಈ ಸ್ಮಾಲ್ ಕ್ಯಾಪ್ ಷೇರುಗಳ ಮೇಲೆ ಗಮನವನ್ನು ನೀಡಿ, ಹೂಡಿಕೆ ಪರಿಣಿತರ ಸಲಹೆ ಮೇರೆಗೆ ಹಣವನ್ನು ತೊಡಗಿಸಿದರೆ ಉತ್ತಮ ಅದಾಯವನ್ನು ನಿರೀಕ್ಷಿಸಬಹುದಾಗಿದೆ.