ರಿವೀಲ್​ ಆಯ್ತು ಬಹುನಿರೀಕ್ಷಿತ 'ಕಾಂತಾರ 2' ಚಿತ್ರದ ಬಜೆಟ್!​

Untitled design (46)
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ನಿರ್ದೇಶಕ, ನಟ ರಿಷಭ್​ ಶೆಟ್ಟಿ ಅಭಿನಯಿಸಿದ 'ಕಾಂತಾರ 1' ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಇತಿಹಾಸ ನಿರ್ಮಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಭಾರೀ ಸಂಚಲನವನ್ನು ಸೃಷ್ಟಿಸಿತು.

ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದ್ದ ಪಾರ್ಟ್​ 1 ಚಿತ್ರ, ವಿಶ್ವಾದ್ಯಂತ ಸುಮಾರು 400 ಕೋಟಿ ರೂ. ಗಳಿಕೆಯನ್ನು ಕಂಡಿತ್ತು. ಇದೀಗ ಪಾರ್ಟ್​ 2 ಎಷ್ಟು ಬಜೆಟ್​ನಲ್ಲಿ ನಿರ್ಮಾಣವಾಗಲಿದೆ ಎಂಬ ಮಾಹಿತಿ ರಿವೀಲ್​ ಆಗಿದೆ.

'ಕಾಂತಾರ 2' ಚಿತ್ರದ ಸದ್ಯಕ್ಕೆ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ. ಇತ್ತೀಚಿನ ವರದಿ ಪ್ರಕಾರ, ರಿಷಭ್​ ಶೆಟ್ಟಿ ನಟನೆಯ ಈ ಸಿನಿಮಾವನ್ನು 125 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರೀಕರಣ ನವೆಂಬರ್​ನಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ.

'ಕಾಂತಾರ 1' ನಿರೀಕ್ಷೆಗೂ ಮೀರಿ ಭಾರಿ ಹಿಟ್​ ಆಗಿತ್ತು. ಇದೀಗ ಚಿತ್ರದ ಎರಡನೇ ಭಾಗದ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗಿದ್ದು, ಸಿನಿಮಾದ ಕಥೆ ಹೇಗಿರಲಿದೆ ಎಂಬ ಹಲವು ಲೆಕ್ಕಾಚಾರಗಳು ಪ್ರೇಕ್ಷಕರು ಮತ್ತು ಅಭಿಮಾನಿಗಳಲ್ಲಿ ಮೂಡಿದೆ ಎಂದೇ ಹೇಳಬಹುದು. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನು ಪೂರ್ಣಗೊಳಿಸಿರುವ ರಿಷಭ್​, ಚಿತ್ರೀಕರಣದ ಪ್ರಾರಂಭಕ್ಕೆ ಎದುರು ನೋಡುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net