

ಗೋವಾ: ವಿದೇಶಿ ದಂಪತಿ ಕುಡಿದ ಅಮಲಿನಲ್ಲಿ ರೆಸ್ಟೋರೆಂಟ್ ಕ್ಯಾಷಿಯರ್ಗೆ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಉತ್ತರ ಗೋವಾದಲ್ಲಿ ವರದಿಯಾಗಿದೆ.
ಗೋವಾದ ಪೊರ್ವೊರಿಮ್ನಲ್ಲಿರುವ ವೈನ್ ಅಂಡ್ ಡೈನ್ ಎಂಬ ರೆಸ್ಟೋರೆಂಟ್ನಲ್ಲಿ ವಿದೇಶಿ ದಂಪತಿ ಕುಡಿದ ಮತ್ತಿನಲ್ಲಿ ಕ್ಯಾಷಿಯರ್ಗೆ ಅವಾಚ್ಯ ಪದಗಳಲ್ಲಿ ನಿಂದಿಸಿ, ಆತನಿಗೆ ಮನಬಂದಂತೆ ಥಳಿಸಿದ್ದಾರೆ. ಹಲ್ಲೆಗೆ ಒಳಗಾದ ವ್ಯಕ್ತಿಯು ಘಟನೆಯ ಬಗ್ಗೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಡಿಯೋ ಪರಿಶೀಲಿಸಿದ ಪೊಲೀಸರು, ಹಲ್ಲೆಗೈದವರ ವಿರುದ್ಧ ಎಫ್ಐಆರ್ ದಾಖಲಸಿಕೊಂಡಿದ್ದಾರೆ.
ರೆಸ್ಟೋರೆಂಟ್ ಕ್ಯಾಷಿಯರ್ ಮೇಲೆ ದಂಪತಿಗಳ ಅಶಿಸ್ತಿನ ವರ್ತನೆಗಾಗಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಉತ್ತರ ಗೋವಾ ಎಸ್ಪಿ ನಿಧಿನ್ ವಲ್ಸನ್ ಸುದ್ದಿಪತ್ರಿಕೆಗೆ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).