ಚಂದ್ರಯಾನ 3; ಮರಳಶಿಲ್ಪದಲ್ಲಿ ‘ಜೈ ಹೋ ಇಸ್ರೋ’, ದೇಶಾದ್ಯಂತ ಶುಭ ಹಾರೈಸುತ್ತಿರುವ ಜನರು

.6
Published on

ಮರಳುಶಿಲ್ಪ ಕಲಾವಿದ ಸುದರ್ಶನ ಪಟ್ನಾಯಕ ತಮ್ಮ ಕಲೆಯ ಮೂಲಕ ನೋಡುಗರ ಹುಬ್ಬೇರಿಸುವಂತಹ ಮರಳು ಶಿಲ್ಪವನ್ನ ತಯಾರಿಸುತ್ತಲೇ ಇರ್ತಾರೆ. ಒಡಿಶಾದ ಕಡಲದಂಡೆಯ ಮೇಲೆ ಅವರ ಬೃಹದ್ಗಾತ್ರದ ಮರಳಶಿಲ್ಪಗಳನ್ನು ವಿವಿಧ ಸಂದರ್ಭಗಳಲ್ಲಿ ಮಾಡುತ್ತಲೇ ಬಂದಿದ್ದಾರೆ.

ಇದೀಗ ಚಂದ್ರಯಾನ 3 ಥೀಮ್​ನ ಮರಳು ಶಿಲ್ಪವನ್ನ ಒಡಿಶಾದ ಪುರಿ ಬೀಚ್​ನಲ್ಲಿ ಸುದರ್ಶನ ಪಟ್ನಾಯಕ ಅವರ ವಿದ್ಯಾರ್ಥಿಗಳು ಮಾಡಿದ್ದಾರೆ.
ನೀಲಿ ಬಣ್ಣದ ಬಾಹ್ಯಾಕಾಶದ ಮೇಲೆ ರಚಿಸಲಾದ ಕಾಲಾಕೃತಿಯು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿ ಚಂದ್ರನ ಮೇಲ್ಮೈನಲ್ಲಿರುವ ಕುಳಿಗಳ ನೈಜತೆ, ಆಕಾಶದ ಹಿನ್ನೆಲೆ ಮತ್ತು ಒಟ್ಟಾರೆ ಕಲಾಕೃತಿ ಬಹಳ ಸುಂದರವಾಗಿ ಮೂಡಿ ಬಂದಿದೆ.


ಆ. 22ರಂದು ಪೋಸ್ಟ್ ಮಾಡಿದ ಈ ಚಿತ್ರವನ್ನು ಈತನಕ ಸುಮಾರು 16,000 ಜನರು ನೋಡಿದ್ದಾರೆ. ಸುಮಾರು 900 ಜನರು ಲೈಕ್ ಮಾಡಿದ್ದಾರೆ. 120 ಜನರು ರೀಪೋಸ್ಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದರ್ಶನ ತಮ್ಮ ವಿದ್ಯಾರ್ಥಿಗಳ ಈ ಕಲಾಕೃತಿಯ ಚಿತ್ರವನ್ನು X (ಟ್ವಿಟರ್​) ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net