ಗೂಗಲ್ ಪೇ ಇಲ್ಲ, ಎಟಿಎಂಗೆ ನಿಲ್ಸಲ್ಲ! ಕ್ಯಾಶ್​ ಇಲ್ಲದೆ ಇವರ ಆಟೋಗೆ ಹತ್ತಿದ್ರೆ ಅದೋಗತಿ…

WhatsApp-Image-2024-04-04-at-1.26.23-PM
Published on

ಚೆನ್ನೈ: ಬಿರು ಬೇಸಿಗೆ ಅಂದಮೇಲೆ ಆಟೋದಲ್ಲಿ ಹೋಗುವ ಮಜಾನೇ ಬೇರೆ. ಹೆಚ್ಚಿನ ಸಂಖ್ಯೆಯ ಜನ ತಾವೀರುವ ಸ್ಥಳಕ್ಕೆ ಆಟೋ ಬುಕ್ ಮಾಡಿ, ಅಲ್ಲಿಂದಲೇ ತಲುಪಬೇಕಾದ ಜಾಗಕ್ಕೆ ಹೋಗುತ್ತಾರೆ. ಇದು ಡಿಜಿಟಲ್ ಯುಗ! ಆಗಿರುವ ಕಾರಣ, ಬಹುತೇಕರು ಯುಪಿಐ ಮೂಲಕವೇ ಹಣ ಪಾವತಿ ಮಾಡ್ತಾರೆ. ಗೂಗಲ್ ಪೇ, ಫೋನ್​ ಪೇ ಹೀಗೆ ಇತರೆ ಆ್ಯಪ್​ನಿಂದ ಪೇಮೆಂಟ್ ಮಾಡುತ್ತಾರೆ. ಇದ್ಯಾವುದು ಇಲ್ಲ ಎಂದರೆ ಹಣ ಕೊಡಬೇಕಾಗುತ್ತದೆ. ಅದರೆ, ಅದು ಇಲ್ಲವೆಂದರೆ ಎಟಿಎಂ ಬಳಿ ಸಿಲ್ಲಿಸಿ ಚಿಲ್ಲರೆ ಪಡೆದು ಪಾವತಿಸಬೇಕಾಗುತ್ತದೆ. ಆದ್ರೆ, ಇದ್ಯಾವುದಕ್ಕೂ ಅವಕಾಶವೇ ಇಲ್ಲ ಎಂದಾಗ ಪರಿಸ್ಥಿತಿ ಏನಾಗಬಹುದು? ಮುಂದೇನು? ಎಂಬ ಯೋಚನೆ ಬರುವುದು ಈ ಆಟೋ ಚಾಲಕನ ವಿಚಿತ್ರ ಬೋರ್ಡ್​ ನೋಡಿದಾಗ ಮಾತ್ರ.

ಇಲ್ಲೊಬ್ಬ ಆಟೋ ಚಾಲಕ ತನ್ನ ಆಟೋದೊಳಗೆ ಹತ್ತುವ ಗ್ರಾಹಕರಿಗೆ ವಿಶೇಷ ಹಾಗೂ ವಿಚಿತ್ರ ಬೋರ್ಡ್​ವೊಂದನ್ನು ಪ್ರದರ್ಶಿಸಿದ್ದಾರೆ. ಇದನ್ನು ಓದಿಯೇ ಅವರು ಆಟೋ ಹತ್ತಿದ್ರೆ, ಅವರಿಗೂ ಒಳಿತು, ಇವರಿಗೂ ಒಳಿತು ಎನ್ನುವಂತಿದೆ. ಸ್ಟಿಕರ್​ನಲ್ಲಿ ಗೂಗಲ್ ಪೇ ಲಭ್ಯವಿಲ್ಲ. ಎಟಿಎಂಗೆ ನಿಲುಗಡೆ ಇಲ್ಲ ಎಂದು ತಿಳಿಸಿದ್ದಾರೆ. ಸದ್ಯ ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಹೀಗೆಲ್ಲಾ ಮಾಡಿದ್ರೆ ಕಡೆಗೆ 'ಉಚಿತ ಸವಾರಿ' ಕೊಡ್ತಾರಾ? ಎಂದು ಲೇವಡಿ ಮಾಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿ ಚಾಲ್ತಿಯಲ್ಲಿದೆ. ಆದರೆ, ಈ ಆಟೋ ಚಾಲಕನ ಉದ್ದೇಶ ಏನು ಎಂಬುದನ್ನು ಅರಿಯುವುದೇ ಹಲವರಿಗೆ ಯಕ್ಷ ಪ್ರಶ್ನೆಯಾಗಿದೆ. ಡಿಜಿಟಲ್ ಯುಗದಲ್ಲಿ ಈ ವ್ಯಕ್ತಿ ಯಾಕೆ ಹೀಗಿದ್ದಾರೆ? ಆನ್​ಲೈನ್​ ಪೇಮೆಂಟ್ಸ್​ನ ಏಕೆ ಒಪ್ಪಿಕೊಳ್ತಿಲ್ಲ ಎಂದ ನೆಟ್ಟಿಗರು ವ್ಯಾಪಕವಾಗಿ ಟೀಕಿಸಿದ್ದಾರೆ. ಕೆಲವರು ಎಟಿಎಂ ಬಳಿಯೂ ನಿಲ್ಲಿಸದಿದ್ದರೆ, ಇನ್ನೇನು ಉಚಿತ ರೈಡ್ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಈ ಆಟೋದಲ್ಲಿ ಕುಳಿತ್ತಿದ್ದ ಪ್ರಯಾಣಿಕರೊಬ್ಬರು ಆಟೋದೊಳಗಿನ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಒಂದೇ ಒಂದು ಪೋಸ್ಟ್​ನಿಂದ ನೆಟ್ಟಿಗರ ಗಮನಸೆಳೆದಿದ್ದಾರೆ. ಸದ್ಯ ಈ ಪೋಸ್ಟ್​ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net