

ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚುವುದು ಬಲುಕಷ್ಟ! ಸಕ್ಸಸ್ ಸ್ಥಾನ ಏರಿದ ಮೇಲಂತೂ ಮುಂದಿನ ಹಾದಿ ಅತೀ ಸುಲಭ. ಅದರಲ್ಲಿ ಎರಡನೇ ಮಾತೇ ಇಲ್ಲ. ಯಾಕಂದ್ರೆ, ಪ್ರಾರಂಭದ ಹಂತದಲ್ಲಿ ಗುರುತಿಸಿಕೊಳ್ಳುವುದು, ಪ್ರತಿಭೆಯನ್ನು ಪ್ರೇಕ್ಷಕರ ಮುಂದೆ ಪರಿಚಯಿಸುವುದು, ಅಭಿಮಾನ, ಪ್ರೀತಿ ಸಂಪಾದಿಸುವುದು ಕಷ್ಟಕರ. ಇದಿಷ್ಟನ್ನು ಯಾವ ಕಲಾವಿದರು ಸಾಧಿಸುತ್ತಾರೆಯೋ ಅವರೆಲ್ಲಾ ಇಂದು ಅತ್ಯಂತ ಯಶಸ್ವಿ ನಟ-ನಟಿಯರಾಗಿ ಹೊರಹೊಮ್ಮಿದ್ದಾರೆ.
ಆರಂಭಿಕ ದಿನಗಳಲ್ಲಿ ಹೆಸರು ಗಳಿಸುವ ಮೊದಲು ಕೊಟ್ಟಷ್ಟೇ ಸಂಬಳ, ನಿಗದಿಪಡಿಸಿದ್ದೇ ಪೇಮೆಂಟ್ ಪಡೆಯಬೇಕು. ಇದು ಕೆಲವರಿಗೆ ಕಷ್ಟವೇ ನಿಜ. ಆದರೆ, ಇದನ್ನೇ ಸವಾಲಾಗಿ ಸ್ವೀಕರಿಸಿ, ಸಿಕ್ಕ ಹಣಕ್ಕೆ ಖುಷಿಪಟ್ಟು, ಪ್ರತಿಭೆ ಪ್ರದರ್ಶಿಸಿ, ಹೆಚ್ಚೆಚ್ಚು ಅವಕಾಶ ಪಡೆದು ಇಂದು ಭಾರೀ ಸಂಭಾವನೆ ಗಿಟ್ಟಿಸಿಕೊಳ್ಳುವ ನಟಿಮಣಿಯರ ಪೈಕಿ ಬಾಲಿವುಡ್ ಈ ಹೀರೋಯಿನ್ ಸದ್ಯ ಮುಂಚೂಣಿಯಲ್ಲಿದ್ದಾರೆ.
ನಟಿಮಣಿಯರು ಹೆಸರು ಮಾಡುತ್ತಾರೆ. ಆದರೆ, ಭಾರೀ ಮೊತ್ತದ ಸಂಭಾವನೆ ಪಡೆಯುವಲ್ಲಿ ಕೊಂಚ ಹಿಂದಿರುತ್ತಾರೆ. ಆದರೆ ಈ ಬಾಲಿವುಡ್ ನಟಿ ಮಾತ್ರ ಒಂದು ನಿಮಿಷದ ನಟನೆಗೆ ಬರೋಬ್ಬರಿ ಒಂದು ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದರೆ ನಂಬ್ತೀರಾ? ಆಶ್ಚರ್ಯವಾದರು ನಂಬಲೇಬೇಕು. ಈಕೆ ಬೇರಾರು ಅಲ್ಲ ನಟಿ ಊರ್ವಶಿ ರೌಟೇಲಾ! ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಊರ್ವಶಿ ಸದ್ಯ ಟ್ರೆಂಡಿಂಗ್ ಪಟ್ಟಿಯಲ್ಲಿಯೂ ಇದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಷಯಗಳಿಂದ ಭಾರೀ ಚರ್ಚೆಗೆ ಗ್ರಾಸವಾಗುವ ಊರ್ವಶಿ, ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗಷ್ಟೇ ನಟಿ 1 ನಿಮಿಷಕ್ಕೆ 1 ಕೋಟಿ ರೂಪಾಯಿ ಪೇಮೆಂಟ್ ಪಡೆದಿರುವ ಬಗ್ಗೆ ವರದಿಯಾಗಿತ್ತು. ಬೋಯಪತಿ ಶ್ರೀನು-ರಾಮ್ ಪೋತಿನೇನಿ ಅಭಿನಯದ 'ಸ್ಕಂದ' ಚಿತ್ರದಲ್ಲಿ 'ಕಲ್ಟ್ ಮಾಮಾ' ಎಂಬ ಐಟಂ ಸಾಂಗ್ನಲ್ಲಿ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದರು. ಈ ಹಾಡಿನಲ್ಲಿ ಮೂರು ನಿಮಿಷಗಳ ಅಭಿನಯಕ್ಕಾಗಿ ಬರೋಬ್ಬರಿ 3 ಕೋಟಿ ರೂ.ಗಳನ್ನು ನಟಿ ಸಂಭಾವನೆಯಾಗಿ ಪಡೆದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).