ತೆಂಗಿನಕಾಯಿಯಲ್ಲಿ ಹೊಡೆದಿದ್ದರು ಆ ನಿರ್ದೇಶಕ… ಕಷ್ಟದ ದಿನಗಳನ್ನು ಬಿಚ್ಚಿಟ್ಟ ನಟಿ ತಾಪ್ಸಿ ಪನ್ನು

WhatsApp Image 2024-04-19 at 3.58.54 PM
Published on

ಮುಂಬೈ: ಬಹುಭಾಷಾ ನಟಿ ತಾಪ್ಸಿ ಪನ್ನು ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಸ್ನೇಹಿತ ಡೆನ್​ಮಾರ್ಕ್​ನ ಹೆಸರಾಂತ ಬ್ಯಾಡ್ಮಿಂಟನ್​ ಆಟಗಾರ ಮಥಿಯಾಸ್​ ಬೋ ಅವರೊಂದಿಗೆ ಕ್ರಿಶ್ಚಿಯನ್​ ಹಾಗೂ ಸಿಖ್​ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟಿಯ ಮದುವೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟೀಕಿಸಿದ್ದು, ತಾಪ್ಸಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ವ್ಯಾಪಕವಾಗಿ ಟ್ರೋಲ್​ ಮಾಡಿದ್ದರು. ಆದರೆ, ಬೋಲ್ಡ್​ ನಟಿ ಇದ್ಯಾವುದಕ್ಕೂ ಕಿಂಚಿತ್ತು ತಲೆಕೆಡಿಸಿಕೊಳ್ಳಲಿಲ್ಲ.

ಚಿತ್ರರಂಗಕ್ಕೆ ಬಂದ ಪ್ರಾರಂಭದಲ್ಲಿ ಅನೇಕ ಕಲಾವಿದರು ತೀವ್ರ ಕಷ್ಟಕರ ದಿನಗಳನ್ನು ನೋಡಿ ಇಂದು ಯಶಸ್ಸಿನ ಹಾದಿಯನ್ನು ನೋಡಿದ್ದಾರೆ. ಆ ಸಾಧನೆ ಮೆಟ್ಟಿಲು ನೋಡಿದವರಲ್ಲಿ ನಟಿ ತಾಪ್ಸಿ ಪನ್ನು ಕೂಡ ಒಬ್ಬರು. ಯಶಸ್ಸನ್ನು ಸಾಧಿಸುವ ಮೊದಲು ನಡೆದುಬಂದ ಕಷ್ಟಕರ ದಿನಗಳನ್ನು, ಆ ಅನುಭವಗಳನ್ನು ಮೆಲುಕು ಹಾಕಿದಾಗ ಎಂಥವರಿಗಾದರೂ ಕಣ್ಣೀರು ಮೂಡುವುದು ಸಹಜ. ಯಾಕಂದ್ರೆ ಅಷ್ಟು ಅವಮಾನ, ಅಪಹಾಸ್ಯಗಳನ್ನು ಎದುರಿಸಿರುತ್ತಾರೆ.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಾರಂಭದ ದಿನಗಳಲ್ಲಿ ಇಂತಹದ್ದೇ ಕಷ್ಟಕರ, ಸಹಿಸಲಾದ ಘಟನೆಗಳನ್ನು ತಾಪ್ಸಿ ಎದುರಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಸಂದರ್ಶನವೊಂದರಲ್ಲಿ ಈ ವಿಷಯ ಹಂಚಿಕೊಂಡಿದ್ದ ನಟಿಯ ಹೇಳಿಕೆಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಸಲಿಗೆ ವೃತ್ತಿಜೀವನದ ಆರಂಭಿಕ ದಿನದಲ್ಲಿ ನಿರ್ದೇಶಕರೊಬ್ಬರು ತನ್ನ ಮೇಲೆ ತೆಂಗಿನಕಾಯಿ ಬಿಸಾಡಿದ ಘಟನೆ ಬಗ್ಗೆ ತಾಪ್ಸಿ ಮನಬಿಚ್ಚಿ ಮಾತನಾಡಿದ್ದಾರೆ.

ದಕ್ಷಿಣ ಭಾರತದ ನಿರ್ದೇಶಕರೊಬ್ಬರು ತನ್ನ ಮೇಲೆ ತೆಂಗಿನಕಾಯಿ ಎಸೆದ ಅನುಭವವನ್ನು ವಿವರಿಸಿದ ತಾಪ್ಸಿ, "ಆ ಕ್ಷಣದಲ್ಲಿ ನಿರ್ದೇಶಕರು ಆ ರೀತಿ ನಡೆದುಕೊಂಡಿದ್ದರ ಹಿಂದಿರುವ ಉದ್ದೇಶ ಅಥವಾ ಕಾರಣವೇನು ಎಂಬುದರ ಬಗ್ಗೆ ನನಗೆ ಅಷ್ಟಾಗಿ ಖಚಿತ ಮಾಹಿತಿ ಇಲ್ಲ. ಆದರೆ ನಾನಂತೂ ತುಂಬ ಗೊಂದಲಕ್ಕೊಳಗಾಗಿದ್ದೆ. ಈ ಹಿಂದೆ ಎಂದೂ ನೋಡದ ಪ್ರಸಂಗ ಅದು. ಹಾಗಾಗಿ ಆ ಸಮಯದಲ್ಲಿ ಬಹಳ ಶಾಕ್ ಆಗಿದ್ದೆ. ನಿರ್ದೇಶಕರನ್ನು ಅರ್ಥಮಾಡಿಕೊಳ್ಳುವುದು ನನಗೆ ತುಂಬಾ ಕಷ್ಟವಾಗಿತ್ತು" ಎಂದಿದ್ದಾರೆ.

"ಆ ಸಮಯದಲ್ಲಿ ನಾನು ದಕ್ಷಿಣ ಭಾರತದ ಪ್ರಮುಖ ಭಾಷೆಗಳಲ್ಲಿನ ಚಲನಚಿತ್ರಗಳಲ್ಲಿ ಕೆಲಸ ಮಾಡಿದೆ. ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲಿಲ್ಲ. ಹೀನಾಯ ಸೋಲನ್ನು ಕಂಡಿತು. ಅದಕ್ಕೆ ನನಗೆ ಸಿಕ್ಕಿದ್ದು, 'ಬ್ಯಾಡ್ ಲಕ್' ಲೇಬಲ್ ಎಂದು ನಟಿ ಹೇಳಿಕೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net