ಮೇಕೆಯನ್ನು ಕದಿಯಲು ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು…!

goat
ಸಾಂದರ್ಭಿಕ ಚಿತ್ರ
Published on

ಪ್ರಯಾಗ್​ರಾಜ್​: ವಿಲಕ್ಷಣ ಘಟನೆಯೊಂದರಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಮೇಕೆಯನ್ನು ಕದ್ದು ವೇಗವಾಗಿ ಪರಾರಿಯಾಗಿರುವ ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ.

ಕಸರಿಮಸಾರಿ ಪ್ರದೇಶದಲ್ಲಿ ವಾಸವಾಗಿರುವ ಮನ್ಸೂರ್​ ಅಲಿ ಎಂಬುವರಿಗೆ ಸೇರಿದ್ದ ಮೇಕೆಯನ್ನು ಮನೆಯ ಹೊರಗಿನ ಗೇಟಿಗೆ ಕಟ್ಟಲಾಗಿತ್ತು. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಐಷಾರಾಮಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು, ಕಾರಿನಿಂದ ಹೊರಬಂದು ಮೇಕೆಯನ್ನು ಕದ್ದಿದ್ದಾರೆ.

ಕೂಡಲೇ ಮನೆಯ ಮಾಲೀಕ ಮನ್ಸೂರ್ ಆಲಂ ಹಾಗೂ ಸ್ಥಳೀಯರು ಕಾರನ್ನು ಬೆನ್ನಟ್ಟಿದ್ದಾರೆ. ಆದರೆ ಕಳ್ಳರು ರಸ್ತೆ ಕ್ರಾಸ್​ ಮಾಡಿದ್ದರಿಂದ ಅವರನ್ನು ಹಿಡಿಯಲು ಮನ್ಸೂರ್​ ವಿಫಲರಾಗಿದ್ದಾರೆ. ಮನ್ಸೂರ್ ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಕಳ್ಳರ ಈ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೇಕೆಯನ್ನು ಕದ್ದ ಕಾರು ವೇಗವಾಗಿ ಚಲಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಮೇಕೆಯ ಮಾಲೀಕರು ಈ ಕುರಿತು ದೂರು ದಾಖಲಿಸಿದ್ದು, ತನಿಖೆಯ ನಂತರ ಈ ಸಂಬಂಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಧುಮನಗಂಜ್ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net