

Zodiac Signs : ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಎಂದಿಗೂ ಇದರ ಬೇಡಿಕೆಯಂತೂ ಕಡಿಮೆಯಾಗುವುದಿಲ್ಲ. ಹಣವಿದ್ದರೆ ಸಾಕು ಈ ಜಗತ್ತಿನಲ್ಲಿ ಏನು ಮಾಡಬೇಕಾದರೂ ಮಾಡಬಹುದು ಎಂದರೆ ಅತಿಶಯೋಕ್ತಿಯಲ್ಲ. ಪ್ರಪಂಚದಾದ್ಯಂತ ಹಣವೇ ಪ್ರಮುಖ ಶಕ್ತಿಯಾಗಿದೆ. ವ್ಯಕ್ತಿಗಿಂತ ಹಣಕ್ಕೆ ಬೆಲೆ ಕೊಡುವವರ ಸಂಖ್ಯೆಯೇ ಹೆಚ್ಚು.
ಸಾಮಾನ್ಯವಾಗಿ, ಹುಟ್ಟಿನಿಂದಲೇ ಎಲ್ಲ ಮನುಷ್ಯರು ತಮ್ಮ ಇಡೀ ಜೀವನವನ್ನು ಸಂಪತ್ತು ಮತ್ತು ಸಮೃದ್ಧಿಯೊಂದಿಗೆ ಹಾಗೂ ಯಾವುದೇ ಆರ್ಥಿಕ ಸಮಸ್ಯೆಗಳಿಲ್ಲದೆ ಬದುಕಲು ಬಯಸುತ್ತಾರೆ. ಆದರೆ, ಅಂತಹ ಜೀವನವನ್ನು ಬಯಸುವ ಎಲ್ಲರಿಗೂ ಆ ರೀತಿಯ ಭಾಗ್ಯವಿರುವುದಿಲ್ಲ. ಈ ಪ್ರಪಂಚದಲ್ಲಿ ಎಷ್ಟೊಂದು ಮಂದಿ ಅದ್ಧೂರಿಯಾಗಿ ಬದುಕು ನಡೆಸುತ್ತಿದ್ದಾರೋ ಅದಕ್ಕಿಂತಲೂ ಹೆಚ್ಚಿನ ಮಂದಿ ಹಣಕ್ಕಾಗಿ ನಿತ್ಯವು ಪರದಾಡುತ್ತಿದ್ದಾರೆ. ಶ್ರಮದಿಂದ ಹಣ ಬರುತ್ತದೆ ನಿಜ ಆದರೆ, ಶ್ರಮದ ಜತೆಗೆ ಅದೃಷ್ಟವೂ ಸೇರಿದಂತೆ ಶ್ರೀಮಂತಿಕೆಯು ಬರುತ್ತದೆ ಅನ್ನೋದು ಕೂಡ ಅಷ್ಟೇ ಸತ್ಯ.
ಅದೃಷ್ಟ ಅಂತ ಬಂದಾಗ ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ, ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರಿಗೆ ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.
ಹಾಗಾದರೆ, ಯಾವ ರಾಶಿಚಕ್ರ ಚಿಹ್ನೆಗಳು ಹುಟ್ಟಿನಿಂದಲೇ ಹಣವನ್ನು ಆಕರ್ಷಿಸುವ ಸಾಮರ್ಥ್ಯ ಮತ್ತು ಕೋಟ್ಯಂತರ ಹಣವನ್ನು ಗಳಿಸುವ ರಾಜಯೋಗದೊಂದಿಗೆ ಜನಿಸುತ್ತವೆ ಎಂಬುದನ್ನು ನಾವೀಗ ತಿಳಿಯೋಣ.
ವೃಷಭ ರಾಶಿಯಲ್ಲಿ ಜನಿಸಿದವರನ್ನು ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಅಧಿಪತಿ ಶುಕ್ರ ಆಳುತ್ತಾನೆ. ಆದ್ದರಿಂದ, ಅವರು ಸ್ವಾಭಾವಿಕವಾಗಿ ಎಲ್ಲ ಸಂಪತ್ತನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೆ, ಅವರು ತಮ್ಮ ಅದೃಷ್ಟವನ್ನು ಎಂದಿಗೂ ಅವಲಂಬಿಸುವುದಿಲ್ಲ ಬದಲಿಗೆ, ಕಠಿಣ ಪರಿಶ್ರಮವನ್ನು ಹೆಚ್ಚು ಅವಲಂಬಿಸುತ್ತಾರೆ. ಆದಾಗ್ಯೂ, ಅವರ ಅದೃಷ್ಟವು ಅವರನ್ನು ಯಾವಾಗಲೂ ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿರಿಸುತ್ತದೆ. ಆದಾಯವನ್ನು ದ್ವಿಗುಣಗೊಳಿಸುವ ಕಲೆಯಲ್ಲಿ ಅವರು ಚೆನ್ನಾಗಿ ಪರಿಣತರಾಗಿದ್ದಾರೆ. ಸಂಪತ್ತನ್ನು ಸಂಗ್ರಹಿಸಲು ಯಾವ ಕ್ಷೇತ್ರಗಳಲ್ಲಿ ಹಣವನ್ನು ಹೂಡಿಕೆ ಮಾಡಬೇಕೆಂದು ಈ ರಾಶಿಯವರಿಗೆ ಚೆನ್ನಾಗಿ ತಿಳಿದಿರುತ್ತದೆ.
ಕನ್ಯಾ ರಾಶಿಯವರು ಬುಧನ ಆಳ್ವಿಕೆಯಲ್ಲಿ ಜನಿಸಿರುವುದರಿಂದ, ಅವರಿಗೆ ಪ್ರಪಂಚದ ಬಗ್ಗೆ ಮತ್ತು ಹಣಕಾಸು ನಿರ್ವಹಣೆಯ ಬಗ್ಗೆ ಇತರರಿಗಿಂತ ಸ್ವಲ್ಪ ಹೆಚ್ಚಿನ ಜ್ಞಾನವಿರುತ್ತದೆ. ಅದಕ್ಕಾಗಿಯೇ ಕನ್ಯಾ ರಾಶಿಯವರು ವಿವರವಾದ ಮತ್ತು ತರ್ಕಬದ್ಧವಾಗಿರುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಈ ವ್ಯಕ್ತಿತ್ವವು ಅವರು ಹೆಚ್ಚು ಸಮೃದ್ಧ ಜೀವನವನ್ನು ನಡೆಸಲು ಪ್ರಮುಖ ಕಾರಣವಾಗಿದೆ. ಈ ರಾಶಿಚಕ್ರ ಚಿಹ್ನೆಗಳು ಐಷಾರಾಮಿಗಳನ್ನು ಇಷ್ಟಪಡುತ್ತವೆ ಮತ್ತು ಯಾವುದೇ ಕೆಲಸವನ್ನು ಸಂಪೂರ್ಣತೆ ಮತ್ತು ನಿಖರತೆಯಿಂದ ಪೂರ್ಣಗೊಳಿಸುತ್ತವೆ. ಅವರ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ.
ಮಕರ ರಾಶಿಯಲ್ಲಿ ಜನಿಸಿದ ಜನರು ಶನಿಯಿಂದ ಆಳಲ್ಪಡುವುದರಿಂದ, ಅವರು ಶಿಸ್ತುಬದ್ಧರು, ಶ್ರದ್ಧೆಯುಳ್ಳವರು, ಮಹತ್ವಾಕಾಂಕ್ಷೆಯುಳ್ಳವರು ಮತ್ತು ಜವಾಬ್ದಾರಿಯುತರ. ಅವರು ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅವರು ಯಶಸ್ಸನ್ನು ಗುರಿಯಾಗಿಟ್ಟುಕೊಂಡು ಕಠಿಣ ಪರಿಶ್ರಮ ಪಡುವ ವ್ಯಕ್ತಿಗಳು. ಆದಾಗ್ಯೂ, ಅವರ ಅದೃಷ್ಟವು ಕಡಿಮೆ ಪ್ರಯತ್ನದಿಂದ ಅವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು. ಅವರು ವಾಸಿಸುವ ಸ್ಥಳದಲ್ಲಿ, ಹಣದ ಕೊರತೆ ಇರುವುದಿಲ್ಲ. ಅವರು ತಮ್ಮ ಇಡೀ ಜೀವನವನ್ನು ಆರ್ಥಿಕ ಸಂಕಷ್ಟವನ್ನು ಅನುಭವಿಸದೆ ಬದುಕುವಷ್ಟು ಅದೃಷ್ಟಶಾಲಿಯಾಗಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.