

Zodiac Signs : ಜೀವನ ಅಂದ ಮೇಲೆ ಏರಿಳಿತಗಳು ಸಹಜ. ಅದೇ ರೀತಿ ಸೋಲು ಮತ್ತು ಗೆಲುವು ಕೂಡ ನಮ್ಮ ಜೀವನದ ಒಂದು ಭಾಗ. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿದರೆ ಆ ಬದುಕು ಬಂಗಾರವಾಗುತ್ತದೆ. ಅದೇ ರೀತಿ ಸೋಲಿಗೆ ಶರಣಾಗದೇ ಗೆಲ್ಲುವವರೆಗೂ ಪ್ರಯತ್ನ ಪಟ್ಟರೆ ಖಂಡಿತ ಗೆಲುವು ಕೂಡ ಒಲಿಯುತ್ತದೆ.
ಜೀವನದಲ್ಲಿ ಏನಾದರೂ ಸೋಲಾದಾಗ ಕೆಲವರು ಕುಗ್ಗಿಬಿಡುತ್ತಾರೆ. ಆದರೆ, ಇನ್ನು ಕೆಲವರು ಎಷ್ಟೇ ಸೋಲುಗಳು ಎದುರಾದರು ಕೂಡ ಅದನ್ನು ಖಂಡಿತ ಒಪ್ಪಿಕೊಳ್ಳುವುದಿಲ್ಲ. ಗೆಲುವಿಗಾಗಿ ನಿರಂತರವಾಗಿ ಶ್ರಮಿಸುತ್ತಲೇ ಇರುತ್ತದೆ. ಗೆಲ್ಲುವವರೆಗೂ ಸುಮ್ಮನೇ ಕೂರುವುದಿಲ್ಲ. ಅಂಥವರು ಜೀವನದಲ್ಲಿ ಖಂಡಿತ ಯಶಸ್ಸು ಗಳಿಸುತ್ತಾರೆ.
ಅಂದಹಾಗೆ, ಒಬ್ಬ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ, ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಯಾವಾಗಲೂ ಯಶಸ್ಸಿನತ್ತ ಗಮನ ಹರಿಸುತ್ತಾರೆ. ಅವರು ಸಣ್ಣ ಸೋಲನ್ನು ಸಹ ಸಹಿಸುವುದಿಲ್ಲ.
ಹಾಗಾದರೆ, ಯಾವ ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಸೋಲನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮೇಷ ರಾಶಿಯಲ್ಲಿ ಜನಿಸಿದವರು ಯುದ್ಧ ಗ್ರಹವಾದ ಮಂಗಳನ ಆಳ್ವಿಕೆಗೆ ಒಳಪಡುವುದರಿಂದ, ಅವರು ಸ್ವಾಭಾವಿಕವಾಗಿಯೇ ಇತರರಿಗಿಂತ ಸ್ವಲ್ಪ ಹೆಚ್ಚು ಸ್ಪರ್ಧಾತ್ಮಕರು. ಈ ಸ್ಪರ್ಧಾತ್ಮಕ ಸ್ವಭಾವದಿಂದಾಗಿ, ಅವರು ಸೋಲನ್ನು ದ್ವೇಷಿಸುತ್ತಾರೆ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಯಾವುದೇ ಮಿತಿಗಳನ್ನು ಸಹ ಮೀರಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಜೀವನದಲ್ಲಿ ಹಿನ್ನಡೆಗಳನ್ನು ಎದುರಿಸಿದರು ಕೂಡ ಅವರು ಹೆಚ್ಚಿನ ಶಕ್ತಿ ಮತ್ತು ಧೈರ್ಯದಿಂದ ಬೇಗನೆ ಪುಟಿದೇಳುತ್ತಾರೆ. ಏಕೆಂದರೆ, ಅವರು ಎಂದಿಗೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.
ವೃಷಭ ರಾಶಿಯಲ್ಲಿ ಜನಿಸಿದ ಜನರು ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರು ಇತರರಿಗೆ ಶಾಂತವಾಗಿ ಕಾಣಿಸಬಹುದು, ಆದರೆ ಅವರು ತಮ್ಮ ಗುರಿಗಳಿಗಾಗಿ ತುಂಬಾ ಹೋರಾಡುತ್ತಾರೆ. ಅವರಿಗೆ ವೈಫಲ್ಯದ ಭಯ ತುಂಬಾ ಇರುತ್ತದೆ. ಅವರು ಯಾವುದನ್ನೂ ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅವರ ಮೊಂಡುತನದ ಸ್ವಭಾವವನ್ನು ಹೆಚ್ಚಾಗಿ ನ್ಯೂನತೆ ಎಂದು ಪರಿಗಣಿಸಲಾಗುತ್ತದೆ ಆದರೆ, ವಾಸ್ತವದಲ್ಲಿ ಅವರ ಮೊಂಡುತನ ಕಷ್ಟದ ಸಮಯದಲ್ಲಿ ಅವರನ್ನು ಸತತ ಪ್ರಯತ್ನ ಮಾಡಲು ಸಹಾಯ ಮಾಡುತ್ತದೆ.
ಸಿಂಹ ರಾಶಿಯಲ್ಲಿ ಜನಿಸಿದವರು ಸೂರ್ಯನ ಆಳ್ವಿಕೆಗೆ ಒಳಪಟ್ಟಿರುವುದರಿಂದ, ಅವರು ಸ್ವಾಭಾವಿಕವಾಗಿ ಎಲ್ಲದರಲ್ಲೂ ಮೊದಲಿಗರಾಗಲು ದೃಢನಿಶ್ಚಯ ಹೊಂದಿರುತ್ತಾರೆ. ಸೋಲು ಅವರ ಹೆಮ್ಮೆ ಮತ್ತು ಸ್ವ-ಇಮೇಜಿಗೆ ಸವಾಲು ಹಾಕುವುದರಿಂದ ಅವರು ಸೋಲನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿಯನ್ನು ಎಂದಿಗೂ ಸೃಷ್ಟಿಸುವುದಿಲ್ಲ. ಅವರು ಜೀವನದಲ್ಲಿ ಯಾವ ಹಂತದಲ್ಲಾದರೂ ಬಿದ್ದಾಗ, ಸೋಲಿನ ಭಯವು ಅವರಿಗೆ ಇನ್ನಷ್ಟು ಶಕ್ತಿಯುತವಾಗಿ ಮೇಲೇರಲು ಒಂದು ದೊಡ್ಡ ಶಕ್ತಿಯಾಗಬಹುದು.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.