

astrology; ಟ್ರಿಪ್ಗೆ ಹೋಗುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೊರಗೆ ಹೋಗಿ ಸುತ್ತಾಡಬೇಕು, ಭಿನ್ನ-ವಿಭಿನ್ನವಾದ ಸ್ಥಳಗಳನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂದು ಸಾಕಷ್ಟು ಜನರು ಹಂಬಲಿಸುತ್ತಿರುತ್ತಾರೆ. ಕುಟುಂಬದ ಸದಸ್ಯರ ಜೊತೆ ಪ್ರವಾಸ ಹೋಗುವುದಕ್ಕಿಂತ ಸ್ನೇಹಿತರ ಒಟ್ಟಿಗೆ ಪ್ರವಾಸಕ್ಕೆ ಹೋಗಿ ಸಂಭ್ರಮಿಸುವ ಖುಷಿಯೇ ಬೇರೆ ಎಂಬುದು ಹಲವರ ಅಭಿಪ್ರಾಯ. ಹೀಗಾಗಿಯೇ ವೀಕೆಂಡ್ಗಳಲ್ಲಿ ಅಥವಾ ರಜಾ ದಿನಗಳಲ್ಲಿ ಸ್ನೇಹಿತರೆಲ್ಲರೂ ಸೇರಿಕೊಂಡು ಟ್ರಿಪ್ ಪ್ಲಾನ್ ಮಾಡುತ್ತಾರೆ. ಆದರೆ ಇನ್ನೇನೊ ಹೊರಡಬೇಕು ಅನ್ನವಷ್ಟರಲ್ಲಿ ತಾವು ಮಾಡಿದ್ದ ಟ್ರಿಪ್ ಕ್ಯಾನ್ಸಲ್ ಆಗಿಬಿಡುತ್ತದೆ. ಅಂದಹಾಗೆ ಈ ಟ್ರಿಪ್ ಎಲ್ಲಾ ಸದಸ್ಯರಿಂದ ಕ್ಯಾನ್ಸಲ್ ಆಗುವುದಿಲ್ಲ. ಬದಲಿಗೆ ಗುಂಪಿನ ಕೆಲವು ವ್ಯಕ್ತಿಯಿಂದ ಹೀಗೆ ಆಗುತ್ತೆ. ಒಂದಾ ಬಾರಿ ಆದರೆ ಸರಿ, ಆದರೆ ಪದೇ ಪದೇ ಈ ಟ್ರಿಪ್ ಕ್ಯಾನ್ಸಲ್ ಆಗುತ್ತಿದೆ ಎಂದರೆ ಇದಕ್ಕೆ ಕೆಲ ರಾಶಿಚಕ್ರದವರೇ ಕಾರಣ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ.
ಜ್ಯೋತಿಷ್ಯ ತಜ್ಞರ ಪ್ರಕಾರ, ಪ್ರತಿಯೊಂದು ರಾಶಿಚಕ್ರವು ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾದರೆ, ಹಾಗಿದ್ರೆ ಯಾವ ರಾಶಿಚಕ್ರ ಚಿಹ್ನೆಗಳು ಪ್ರಯಾಣವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಯಾರು ಈ ಪ್ರವಾಸಕ್ಕೆ ಪ್ಲಾನ್ ಮಾಡಿ ಕೊನೆಯ ಸಮಯದಲ್ಲಿ ರದ್ದುಗೊಳಿಸುತ್ತಾರೆ ಎಂಬುದನ್ನು ನೋಡೋಣ.
ಮಿಥುನ ರಾಶಿಯವರು ಬುದ್ಧಿವಂತ, ಚಂಚಲ, ಜನಪ್ರಿಯ, ಮತ್ತು ಹೊಂದಿಕೊಳ್ಳುವ ಸ್ವಭಾವದವರಾಗಿದ್ದಾರೆ. ಇವರು ತ್ವರಿತವಾಗಿ ಆಲೋಚನೆ ಬದಲಾಯಿಸುವವರಾಗಿದ್ದು, ಹೊಸ ಅನುಭವಗಳನ್ನು ಇಷ್ಟಪಡುತ್ತಾರೆ. ಆದರೆ, ಒಂದೇ ಸ್ಥಳದಲ್ಲಿ ಗಮನ ಕೇಂದ್ರೀಕರಿಸುವುದು ಇವರಿಗೆ ಕಷ್ಟವಾಗಬಹುದು. ಮಿಥುನ ರಾಶಿಯವರಿಗೆ ಒಂದಕ್ಕಿಂತ ಹೆಚ್ಚು ಆಯ್ಕೆಗಳು ಆಕರ್ಷಕವೆನಿಸಬಹುದು ಹಾಗಾಗಿ ಕೊನೆಯ ಕ್ಷಣದಲ್ಲಿ ತಮ್ಮ ಯೋಜನೆಗಳನ್ನು ಬದಲಾಯಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಿಥುನ ರಾಶಿ
ತುಲಾ ರಾಶಿಯವರು ಟ್ರಿಪ್ ಯೋಜನೆಯ ಸ್ಥಳ, ಸಮಯ ಅಥವಾ ಸಹಪ್ರಯಾಣಿಕರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ತಡವರಿಸುತ್ತಾರೆ. ಇದು ಕೊನೆಯ ಕ್ಷಣದಲ್ಲಿ ಟ್ರಿಪ್ ಕ್ಯಾನ್ಸಲ್‌ಗೆ ಕಾರಣವಾಗಬಹುದು. ಟ್ರಿಪ್‌ನಲ್ಲಿ ತಮ್ಮ ಗೆಳೆಯರು ಅಥವಾ ಕುಟುಂಬದವರು ಒಪ್ಪದಿದ್ದರೆ, ತುಲಾ ರಾಶಿಯವರು ಯೋಜನೆಯನ್ನು ರದ್ದುಗೊಳಿಸಬಹುದು. ಏಕೆಂದರೆ ಇವರು ಇತರರ ಸಂತೋಷವನ್ನು ತಮ್ಮದಕ್ಕಿಂತ ಮುಖ್ಯವೆಂದು ಭಾವಿಸುತ್ತಾರೆ. ತುಲಾ ರಾಶಿಯವರು ಪ್ರಯಾಣದ ಸ್ಥಳ ಅಥವಾ ಯೋಜನೆಯು ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಭಾವಿಸುವುದರಿಂದ ಆಸಕ್ತಿಯನ್ನು ಕಳೆದುಕೊಂಡು ಟ್ರಿಪ್ ಕ್ಯಾನ್ಸಲ್ ಮಾಡಬಹುದು.
ತುಲಾ ರಾಶಿ
ಇದನ್ನೂ ಓದಿ: ವಿಧಾನಸೌಧದಲ್ಲಿ ಆಯುದ್ಧ ಪೂಜೆ ಸಡಗರ
ಕುಂಭ ರಾಶಿಯವರು ತಮ್ಮ ಅಭಿಪ್ರಾಯಗಳು ಮತ್ತು ಆದ್ಯತೆಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಸ್ನೇಹವನ್ನು ಹುಡುಕುತ್ತಾರೆ. ಹೊಸಬರೊಂದಿಗೆ ಯೋಜಿತ ಗುಂಪು ಚರ್ಚೆಗಳನ್ನು ತಪ್ಪಿಸುತ್ತಾರೆ. ಆಕಸ್ಮಿಕವಾಗಿ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಯೋಜನೆ ಅಥವಾ ಆಲೋಚನೆಯನ್ನು ಕಂಡುಕೊಂಡರೆ ಇವರು ಟ್ರಿಪ್ ಕ್ಯಾನ್ಸಲ್ ಮಾಡಬಹುದು. ಟ್ರಿಪ್‌ನ ಯೋಜನೆಯು ತುಂಬಾ ಕಟ್ಟುನಿಟ್ಟಾಗಿದ್ದರೆ ಅಥವಾ ಇತರರ ಒತ್ತಡದಿಂದ ಕೂಡಿದ್ದರೆ, ಕುಂಭ ರಾಶಿಯವರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ರದ್ದುಗೊಳಿಸಬಹುದು.
ಕುಂಭ ರಾಶಿ
(ಏಜೆನ್ಸೀಸ್)
ಧನು ರಾಶಿಯವರು ಸಾಹಸಪ್ರಿಯ ಮತ್ತು ಸ್ವತಂತ್ರ ವ್ಯಕ್ತಿಗಳಾಗಿದ್ದು, ಇವರು ಯಾವಾಗಲೂ ಹೊಸ ಅನುಭವಗಳು ಮತ್ತು ಜ್ಞಾನವನ್ನು ಹುಡುಕುತ್ತಿರುತ್ತಾರೆ. ಆದರೆ ಇವರಿಗೆ ಒಮ್ಮೊಮ್ಮೆ ಯೋಜನೆಗಳಿಗೆ ಬದ್ಧರಾಗಿರಲು ಕಷ್ಟವಾಗಬಹುದು. ಉದಾಹರಣೆಗೆ, ಆಕಸ್ಮಿಕ ಸಾಹಸ, ದೂರದ ಯಾತ್ರೆ, ಅಥವಾ ಕಲಿಕೆಯ ಅವಕಾಶ ಕಂಡುಬಂದರೆ, ಕೊನೆಯ ಕ್ಷಣದಲ್ಲಿ ಯೋಜನೆ ಬದಲಾಯಿಸುತ್ತಾರೆ. ಇವರು ಯೋಜನೆಯನ್ನು ಸರಿಯಾಗಿ ಆಯೋಜಿಸದೇ ಇರಬಹುದು, ಮತ್ತು ಕೊನೆಯ ಕ್ಷಣದಲ್ಲಿ , ಹಣಕಾಸಿನ ಕೊರತೆಯಿಂದ ಟ್ರಿಪ್ ಕ್ಯಾನ್ಸಲ್ ಮಾಡಬಹುದು ಎನ್ನಲಾಗಿದೆ.
ಧನು ರಾಶಿ
ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.