ಮಂತ್ರಾಲಯದ ಪುಷ್ಕರಣಿಯಲ್ಲಿ ಅದ್ದೂರಿಯಾಗಿ ಜರುಗಿದ 'ದುರ್ಗಾ ತೆಪ್ಪೋತ್ಸವ'| mantralaya

mantralaya
Published on

mantralaya; ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು (ಸೆ.30) ಸಂಜೆ ದುರ್ಗಾಷ್ಟಮಿಯ ಅಂಗವಾಗಿ ದುರ್ಗಾ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು.

ಶ್ರೀಮಠದಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಹಲವಾರು ಪವಿತ್ರ ವಿಧಿವಿಧಾನಗಳನ್ನು ನಡೆಸಲಾಯಿತು. ಶ್ರೀಗಳು ಶ್ರೀ ಮಂಚಲಮ್ಮ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿ, ಮಂಚಲಮ್ಮ ಉತ್ಸವ ಮೂರ್ತಿಯೊಂದಿಗೆ ಪರಿಮಳ ತೀರ್ಥ ಪುಷ್ಕರಿಣಿವರೆಗೆ ತೆರಳಿ ಶ್ರೀ ದುರ್ಗಾ ತೆಪ್ಪೋತ್ಸವವನ್ನು ಭಕ್ತಿ ಮತ್ತು ವೈಭವದಿಂದ ಅದ್ಧೂರಿಯಾಗಿ ನಡೆಸಿದರು. ನಂತರ ಶ್ರೀ ಮದ್ವಮಾರ್ಗದ ಉದ್ದಕ್ಕೂ ಪಲ್ಲಕಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಹಾಮಹೋಪಾಧ್ಯಾಯ ರಾಜಾ ಗಿರಿಯಾಚಾರ್ಯ, ವ್ಯವಸ್ಥಾಪಕ ಎಸ್. ಕೆ. ಶ್ರೀನಿವಾಸರಾವ್, ಗೌತಮಾಚಾರ್ಯ, ಮಾಧವಶೆಟ್ಟಿ, ಐ.ಪಿ.ನರಸಿಂಹಮೂರ್ತಿ ಸೇರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net