ಮಗುವಿಗೆ ಅಮ್ಮನ ಮಮತೆ ನೀಡುವ ಶ್ವಾನ; ಪೂರ್ತಿ ವಿಡಿಯೋ ನೋಡದೇ ಇರಲ್ಲ...!

Dog- child
Published on

ಲಂಡನ್​: ನಾಯಿಯಷ್ಟು ನಿಷ್ಠೆ ತೋರುವ ಪ್ರಾಣಿ ಇನ್ನೊಂದಿಲ್ಲ. ಆದರೆ, ಪ್ರೀತಿ, ಮಮತೆಯಲ್ಲೂ ಇದಕ್ಕೆ ಸರಿಸಾಟಿಯಲ್ಲವೇನೋ ಎಂಬುದಕ್ಕೆ ಇಲ್ಲೊಂದು ಸಾಕ್ಷಿಯಿದೆ.

ಹುಟ್ಟುವಾಗಲೇ ಹಲವು ಅನಾರೋಗ್ಯಕ್ಕೆ ತುತ್ತಾಗಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಗುವಿದು. ಇದರ ಆರೈಕೆಗೆ ಕೊಂಚ ಹೆಚ್ಚೇ ಜಾಗೃತೆ ವಹಿಸಬೇಕಾಗಿತ್ತು. ಹೀಗಾಗಿ ಮಗುವಿನ ಮೇಲೆ ಕಣ್ಣಿಟ್ಟಿರಲು ಸದಾ ಪಾಲಕರು ಅದರ ಕೋಣೆಯಲ್ಲಿ ಕ್ಯಾಮರಾ ಅಳವಡಿಸಿದ್ದರು.

ಈ ಮಗುವಿಗೆ ಮನೆಯಲ್ಲಿದ್ದ ಬಾಕ್ಸರ್​ ತಳಿಯ ಶ್ವಾನ ಬ್ರೂಟಸ್​ಗೆ ಎಲ್ಲಿಲ್ಲದ ಪ್ರೀತಿ. ಮಗುವಿನ ಕೋಣೆಯಲ್ಲಿಯೇ ಅದು ಕೂಡ ಮಲಗುತ್ತಿತ್ತು. ಆರಂಭದಲ್ಲಿ ನಾಯಿ ಅಲ್ಲಿ ಮಲಗುವುದು ಪಾಲಕರಿಗೆ ಕೊಂಚ ಆತಂಕವನ್ನೇ ಮೂಡಿಸಿತ್ತು.

ಈಗ ಮಗು ಹಾಗೂ ನಾಯಿಯ ನಡುವಿನ ಬಾಂಧವ್ಯ ಅಗಲಿ ಇರಲಾದಷ್ಟು ಗಾಢವಾಗಿದೆ. ಇಬ್ಬರ ನಡುವಿನ ಪ್ರೀತಿ ಹೇಗಿದೆ ಎಂದರೆ ಮಗು ಸಲೀಸಾಗಿ ಮಂಚದ ಮೇಲಿಂದ ಇಳಿದು ಬಂದು ನಾಯಿ ಪಕ್ಕದಲ್ಲಿಯೇ ಮಲಗುತ್ತದೆ. ನಿದ್ದೆಗಣ್ಣಲ್ಲಿಯೇ ಅದರ ಮೇಲೆ ಹತ್ತಿಳಿಯುತ್ತದೆ. ಮಗುವಿನ ಚೇಷ್ಟೆಗಳಿಗೆ ನಾಯಿ ಒಂಚೂರು ತಕರಾರು ಮಾಡುವುದಿಲ್ಲ. ತನಗೆ ಮಲಗಲು ಸರಿಯಾದ ಜಾಗ ಸಿಗುವವರೆಗೂ ನಾಯಿಯನ್ನು ಇನ್ನಿಲ್ಲದಂತೆ ಕಾಡುತ್ತದೆ. ಕೊನೆಗೆ ಅದರ ಪಕ್ಕದಲ್ಲಿಯೇ ನಿದ್ದೆಗೆ ಜಾರುತ್ತದೆ.

ಇದು ಒಂದು ದಿನದ ಕಾರ್ಯವಲ್ಲ. ಈಗ ನಿತ್ಯವೂ ನಾಯಿ ಪಕ್ಕದಲ್ಲಿಯೇ ಮಗು ಪವಡಿಸುತ್ತದೆ. ಸದ್ಯ ಇಬ್ಬರಿಗೂ ಮಲಗಲು ಅನುವಾಗುವಂತೆ ನಾಯಿಗೆ ದೊಡ್ಡ ಹಾಸಿಗೆಯನ್ನೇ ಮಾಡಿಸಿದ್ದಾರೆ ಪಾಲಕರು....! ಮಗುವಿಗೆ ತಾಯಿಯ ಮಮತೆಯನ್ನೇ ನೀಡುವ, ನಾಯಿ ಪಕ್ಕದಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ ಮಗ ಮಲಗುವ ಭಾವನಾತ್ಮಕ ವಿಡಿಯೋ ಇಲ್ಲಿದೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net