VIDEOS| ಬಡತನದಲ್ಲೂ ಅರಳಿದ ಪ್ರತಿಭೆ: ಅಣ್ಣ-ತಂಗಿ ಡ್ಯಾನ್ಸ್​ಗೆ​ ಲಕ್ಷಾಂತರ ಮಂದಿ ಫಿದಾ!

Sanatan
Published on

ರಾಂಚಿ: ಈಗಾಗಲೇ ಟಿಕ್​ಟಾಕ್​ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಜಾರ್ಖಂಡ್ ಮೂಲದ ಅಣ್ಣ-ತಂಗಿ ತಮ್ಮ ಬಹುಮುಖ ಪ್ರತಿಭೆಯ ಮೂಲಕ ಸೋಶಿಯಲ್​ ಮಿಡಿಯಾ ಸ್ಟಾರ್ಸ್​ ಆಗಿದ್ದಾರೆ. ಟಿಕ್​ಟಾಕ್​ ಮಾತ್ರವಲ್ಲದೇ ಇದೀಗ ಟ್ವಿಟರ್​ನಲ್ಲೂ ಅಣ್ಣ-ತಂಗಿಯ ಡ್ಯಾನ್ಸ್​ ಮೋಡಿ ಮಾಡಿದ್ದು, ಬಹುತೇಕರು ಫಿದಾ ಆಗಿದ್ದಾರೆ.

ಸಾಮಾಜಿಕ ಜಾಲತಾಣ ವೇದಿಕೆ ಸಿಕ್ಕಮೇಲೆ ಅಸಂಖ್ಯಾತ ಪ್ರತಿಭೆಗಳು ಹೊರಜಗತ್ತಿಗೆ ತೆರದುಕೊಳ್ಳುತ್ತಿವೆ. ಅವರಲ್ಲಿ ಜಾರ್ಖಂಡ್​ನ ಸನಾತನ್​ ಕುಮಾರ್​ ಮಹತೊ ಮತ್ತು ಆತನ ತಂಗಿ ಸಹ ಒಬ್ಬರು. ಟಿಕ್​ಟಾಕ್​ ವಿಡಿಯೋ ಮೂಲಕ ಲಕ್ಷಾಂತರ ಮಂದಿಯನ್ನು ರಂಜಿಸುತ್ತಿದ್ದಾರೆ.

ಪುಟ್ಟದಾದ ಮನೆಯ ಮುಂದೆ ನಿಂತು ಯಾವ ಸ್ಟಾರ್​ಗಳಿಗೂ ಕಮ್ಮಿ ಇಲ್ಲವೆಂಬಂತೆ ಡ್ಯಾನ್ಸ್​ ಮಾಡುವ ಅಣ್ಣ-ತಂಗಿಯ ಪ್ರತಿಭೆಗೆ ಎಲ್ಲರು ಮರುಳಾಗಿದ್ದಾರೆ. ಮೇಕಪ್​, ಫ್ಯಾನ್ಸಿ ಹಾಗೂ ವಿಡಿಯೋ ಎಫೆಕ್ಟ್ಸ್​ನ ಅರಿವೇ ಇಲ್ಲದೇ ಸಹಜ ಸೌಂದರ್ಯದಿಂದಲೇ ಎಲ್ಲರನ್ನು ರಂಜಿಸುವ ಅಣ್ಣ-ತಂಗಿಯ ಮುಗ್ಧತೆಯನ್ನು ಎಚ್ಚರು ಮೆಚ್ಚಿಕೊಂಡಿದ್ದಾರೆ.

ಅನೇಕ ಸೆಲಿಬ್ರಿಟಿಗಳು ಸಹ ಅಣ್ಣ-ತಂಗಿಯ ವಿಡಿಯೋಗೆ ಫಿದಾ ಆಗಿದ್ದು, ಸನಾತನ್​ ಕುಮಾರ್​ ಮಹತೊ ಅವರ ನೃತ್ಯದ ಪರಿಗೆ ತಲೆಬಾಗಿದ್ದರೆ, ಹಲವರು ಬಡತನದಲ್ಲಿ ಅರಳಿದ ಪ್ರತಿಭೆ ಎಂದು ಕೊಂಡಾಡಿದ್ದಾರೆ. ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದಾ ಅವರು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಮಹತೊ ಅವರ ಒಂದೊಂದು ವಿಡಿಯೋ ಲಕ್ಷಾಂತರ ವೀವ್ಸ್​ಗಳ ಬಾಚಿಕೊಳ್ಳುತ್ತಿರುವುದು ಅವರ ಪ್ರಖ್ಯಾತಿಗೆ ಕಾರಣವಾಗಿದೆ.

ಟಿಕ್​ಟಾಕ್​ ಪ್ರೊಫೈಲ್​ ಪ್ರಕಾರ ಮಹತೊ ಮತ್ತು ಆತನ ತಂಗಿ ಜಾರ್ಖಂಡ್​ನ ಧನಬಾದ್​ ಜಿಲ್ಲೆಯವರು. ಡ್ಯಾನ್ಸ್​ ಜತೆಗೆ ಅನೇಕ ಕಾಮಿಡಿ ವಿಡಿಯೋಗಳನ್ನು ಸಹ ಶೇರ್​ ಮಾಡಿದ್ದು, ಈವರೆಗೆ ಟಿಕ್​ಟಾಕ್​ನಲ್ಲಿ 24 ಮಿಲಿಯನ್ಸ್​ ಲೈಕ್ಸ್​ಗಳನ್ನು ಮಹತೊ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net