ಪವನ್​ ಕಲ್ಯಾಣ್-ಶ್ರೀಲೀಲಾ​ ನಟನೆಯ 'ಉಸ್ತಾದ್​ ಭಗತ್​ ಸಿಂಗ್'​ ಚಿತ್ರಕ್ಕೆ ಇವರೇ ವಿಲನ್​?

Untitled design - 2023-09-27T132000.254
Published on

ಆಂಧ್ರಪ್ರದೇಶ: ಟಾಲಿವುಡ್​ನ ಪವರ್ ಸ್ಟಾರ್, ನಟ ಪವನ್ ಕಲ್ಯಾಣ್ ಮತ್ತು ಸ್ಯಾಂಡಲ್​ವುಡ್​ನ ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಉಸ್ತಾದ್​ ಭಗತ್ ಸಿಂಗ್' ಚಿತ್ರಕ್ಕೆ ಹೆಸರಾಂತ ನಟರೊಬ್ಬರು ವಿಲನ್​ ಆಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್​ ಭಗತ್​ ಸಿಂಗ್​' ಸಿನಿಮಾ ಕುರಿತು ಪವನ್​ ಕಲ್ಯಾಣ್​ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದು, ಚಿತ್ರದಲ್ಲಿ ವಿಲನ್​ ಪಾತ್ರವನ್ನು ತಮಿಳು ನಟ, ನಿರ್ದೇಶಕ ಪಾರ್ಥಿಬನ್ ನಿರ್ವಹಿಸಲಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಕೇಳಿಬಂದಿದೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದೆ.

ಸದ್ಯದ ವರದಿ ಪ್ರಕಾರ, ಸಿನಿಮಾದ ಮಧ್ಯಂತರ ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ಚಿತ್ರದ​ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. ಸಿನಿಮಾದಲ್ಲಿ ಸಾಕ್ಷಿ ವೈದ್ಯ, ಪೂಜಾ ಹೆಗ್ಡೆ, ಆಶುತೋಶ್​ ರಾಣಾ, ಗೌತಮಿ, ಬಿ.ಎಸ್​. ಅವಿನಾಶ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net