More

    ಬರೋಬ್ಬರಿ ಒಂದು ವರ್ಷ ನಂತರ ಮೊದಲ ಬಾರಿಗೆ ಮಕ್ಕಳ ಫೋಟೋ ಹಂಚಿಕೊಂಡ ನಯನತಾರ ದಂಪತಿ!

    – ಮೊದಲ ವರ್ಷದ ಬರ್ತ್​ಡೇ ಸಂಭ್ರಮದಲ್ಲಿ ನಯನತಾರ ಮಕ್ಕಳು

    ಮುಂಬೈ: ನಟಿ ನಯನತಾರಾ, ವಿಘ್ನೇಶ್ ಶಿವನ್ ಅವರ ಮಕ್ಕಳಾದ ಉಯರ್ ಮತ್ತು ಉಲಗ್ ಅವರು ತಮ್ಮ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮುದ್ದು ಮಕ್ಕಳ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದಂಪತಿ ಮೊದಲ ಬಾರಿಗೆ ಮಕ್ಕಳ ಫೋಟೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಮಲೇಷ್ಯಾದಲ್ಲಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಯನ್ ವಿಘ್ನೇಶ್ ತಮ್ಮ ಅವಳಿ ಮಕ್ಕಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಸ್ಟಾರ್​​ ದಂಪತಿಯ ಮಕ್ಕಳ ಫೋಟೋವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಹುಟ್ಟುಹಬ್ಬದ ಶುಭಕೋರಿದ್ದಾರೆ.

    2022 ಸೆಪ್ಟೆಂಬರ್ 26ರಂದು ವಿಘ್ನೇಶ್ ಶಿವನ್ ಮತ್ತು ನಯನತಾರಾ ತಮ್ಮ ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಈ ವರ್ಷದ ಮಕ್ಕಳ ಮೊದಲ ಹುಟ್ಟುಹಬ್ಬದ ಸಂದರ್ಭದಲ್ಲಿ, ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಪತ್ನಿ ನಯನತಾರಾ ಮತ್ತು ಪುತ್ರರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಲು ಮಲೇಷ್ಯಾಕ್ಕೆ ತೆರಳಿದ್ದಾರೆ.

    ನಯನತಾರಾ ಅವರು ಹಲವು ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಶಾಸ್ತ್ರಬದ್ಧವಾಗಿ ಕಳೆದ ವರ್ಷ ಮದುವೆ ಆದರು. ಆರೇ ತಿಂಗಳಿಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದರು. ನಯನತಾರಾ ಅವರು ಮಕ್ಕಳಿಗೆ ಉಯಿರ್​ ಮತ್ತು ಉಳಗಂ ಎಂದು ಹೆಸರು ಇಟ್ಟಿದ್ದಾರೆ. ಇತ್ತೀಚೆಗೆ ಈ ವಿಚಾರ ರಿವೀಲ್ ಮಾಡಲಾಗಿತ್ತು. ಈಗ ಮಕ್ಕಳ ಮೊದಲ ವರ್ಷದ ಬರ್ತ್​ಡೇನ ಆಚರಿಸಲಾಗಿದೆ. ಈ ಫೋಟೋಗಳನ್ನು ವಿಘ್ನೇಶ್ ಪೋಸ್ಟ್ ಮಾಡಿದ್ದಾರೆ.

    18 ತಿಂಗಳಲ್ಲಿ 108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ!; ಫಿಟ್ನೆಸ್ ಟ್ರೈನರ್​ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts