More

    ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಜನವಾದಿ ಮಹಿಳಾ ಸಂಘಟನೆಯಿಂದ ಬೈಕ್ ರ್ಯಾಲಿ

    ಮಂಡ್ಯ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಬೈಕ್ ರ‌್ಯಾಲಿ ನಡೆಸಿದರು.
    ಸಿಲ್ವರ್ ಜ್ಯೂಬಿಲ್ ಉದ್ಯಾನದಲ್ಲಿ ಜಮಾವಣೆಗೊಂಡ ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಬೈಕ್ ರ‌್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆ ರಾಜ್ಯಾಧ್ಯಕ್ಷೆ ದೇವಿ ಮಾತನಾಡಿ, ಅ.5ರಂದು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿನ ಮಹಾರ‌್ಯಾಲಿ ಅಂಗವಾಗಿ ನಗರದಲ್ಲಿ ರ‌್ಯಾಲಿ ನಡೆಸಲಾಗಿದೆ. ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆ, ನಿರುದ್ಯೋಗ, ಬಡತನ, ದೌರ್ಜನ್ಯ ಹೆಚ್ಚಳಕ್ಕೆ ಕಾರಣವಾಗಿದೆ. ದೇಶದಲ್ಲಿ ಕೋಮುವಾದ ಉಲ್ಬಣವಾಗುತ್ತಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
    ವರ್ಷಕ್ಕೆ 2 ಕೋಟಿ ಉದ್ಯೋಗ, ವಿದೇಶದಲ್ಲಿರುವ ದೇಶಿಯರ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ರೂ ಹಾಕುತ್ತೇವೆ. ಭೇಟಿ ಬಚಾವ್-ಭೇಟಿ ಪಢಾವ್ ಎಂದು ಘೋಷಣೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಆರ್ಥಿಕ ಬದುಕನ್ನೇ ಬುಡಮೇಲು ಮಾಡಿದೆ. ದೇಶದಲ್ಲಿ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತಿದ್ದಾರೆ. ಆದರೆ ಬಡವರು ಮತ್ತಷ್ಟು ಬಡತನದ ಕೂಪಕ್ಕೆ ಬೀಳುತ್ತಿದ್ದಾರೆಂದು ಆರೋಪಿಸಿದರು.
    ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಖಜಾಂಚಿ ರಾಣಿ, ಕಾರ್ಯದರ್ಶಿ ಸುಶೀಲಾ, ಅಂಬ್ರನ್ ತಾಜ್, ಶಶಿಕಲಾ, ಮಹದೇವಮ್ಮ, ಮಹದೇವಿ, ರಾಜಲಕ್ಷ್ಮೀ, ಸುರೇಶ್, ಗೌರಮ್ಮ, ಜ್ಯೋತಿ, ಮಹಾದೇವಿ, ಲತಾ, ಶಿವಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts