More

    ವಿದೇಶಿ ನೌಕರಿ ನಂಬಿಸಿ ಪರಾರಿ!

    | ಕೀರ್ತಿನಾರಾಯಣ ಸಿ. ಬೆಂಗಳೂರು

    ಸಾಗರೋತ್ತರ ದೇಶಗಳಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಅಮಾಯಕರಿಂದ ಲಕ್ಷಾಂತರ ರೂ. ವಸೂಲಿ ಮಾಡುವ ನಕಲಿ ಏಜೆಂಟ್​ಗಳು ಹಾಗೂ ಟ್ರಾವೆಲ್ ಏಜೆನ್ಸಿಗಳ ಉಪಟಳ ಮುಂದುವರಿದಿದೆ. 2023ರ ಅ.30ರವರೆಗೆ ವಿದೇಶಿ ಉದ್ಯೋಗದ ಹೆಸರಲ್ಲಿ ವಂಚಿಸಿರುವ 2925 ನಕಲಿ ಏಜೆಂಟ್​ಗಳು ಹಾಗೂ ಟ್ರಾವೆಲ್ ಏಜೆನ್ಸಿಗಳನ್ನು ಗುರುತಿಸಲಾಗಿದ್ದು, ಅದರ ಮಾಹಿತಿಯನ್ನು ಎಮಿಗ್ರೇಟ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ.

    ನಕಲಿ ಉದ್ಯೋಗ ಜಾಲವು ಜಮ್ಮು-ಕಾಶ್ಮೀರ ಸೇರಿ ದೇಶದ 27 ರಾಜ್ಯಗಳಲ್ಲಿ ಸಕ್ರಿಯವಾಗಿರುವ ಬಗ್ಗೆ ಕೇಂದ್ರ ಗೃಹಸಚಿವಾಲಯ ಆಯಾ ರಾಜ್ಯಗಳಲ್ಲಿ ಪತ್ತೆಯಾಗಿರುವ ನಕಲಿ ಏಜೆಂಟ್​ಗಳ ಪಟ್ಟಿ ಮಾಡಿದೆ. ವಿದೇಶದಲ್ಲಿ ಉದ್ಯೋಗ ನೇಮಕಾತಿ ವ್ಯವಹಾರ ನಡೆಸುವ ಸಂಸ್ಥೆಗಳು ಕಡ್ಡಾಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಣಿ ಮಾಡಿಸಿ, ಪರವಾನಗಿ ಪಡೆಯಬೇಕು. ಅಧಿಕೃತವಾಗಿ ಪರ್ವಿುಟ್ ಪಡೆದ ಸಂಸ್ಥೆ, ವಿದೇಶದಲ್ಲಿ ಉದ್ಯೋಗ ಕೊಡಿಸುವ ಸೇವೆಗಳಿಗೆ ಸಂಬಂಧಿಸಿದಂತೆ ಉದ್ಯೋಗಾಕಾಂಕ್ಷಿಯಿಂದ 30 ಸಾವಿರ ರೂ. ಹಾಗೂ ಶೇ.18 ಜಿಎಸ್​ಟಿ ಶುಲ್ಕ ಪಡೆಯಲು ಸರ್ಕಾರವೇ ನಿಗದಿಪಡಿಸಿದೆ. ಆದರೆ, ಪರವಾನಗಿ ಪಡೆಯದ ಏಜೆಂಟ್​ಗಳು, ಉದ್ಯೋಗದ ಆಮಿಷವೊಡ್ಡಿ ತಲಾ ಅಭ್ಯರ್ಥಿಯಿಂದ 2 ರಿಂದ 3 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿರುವುದು ಬಹಿರಂಗವಾಗಿದೆ.

    ಎಲ್ಲೆಲ್ಲಿಗೆ ಆಫರ್?: ಪೂರ್ವ ಯುರೋಪಿಯನ್ ದೇಶಗಳು, ಕೆಲವು ಗಲ್ಪ್ ದೇಶಗಳು, ಮಧ್ಯ ಏಷ್ಯಾ ದೇಶಗಳು, ಇಸ್ರೇಲ್, ಕೆನಡಾ, ಮಾಯನ್ಮಾರ್ ಮತ್ತು ಲಾವೋ ಪೀಪಲ್ಸ್ ಡೆಮಾಕ್ರೆಟಿಕ್ ರಿಪಬ್ಲಿಕ್​ನಲ್ಲಿ ಕೆಲಸ ಮಾಡಲು ಆಮಿಷವೊಡ್ಡಿರುವ ಪ್ರಕರಣಗಳು ವರದಿಯಾಗಿವೆ.

    ಸರ್ಕಾರದ ಸಲಹೆ ಏನು?

    . ಉದ್ಯೋಗ ಸಿಕ್ಕಿತೆಂದು ವಿದೇಶಕ್ಕೆ ಹೋಗುವ ಮುನ್ನ ಆ ದೇಶದ ಸ್ಥಳೀಯ ನಿಯಮ, ಪರಿಸ್ಥಿತಿಗಳ ಬಗ್ಗೆ ತಿಳಿಯಬೇಕು.

    . ನಿರ್ಗಮನ ಪೂರ್ವ ಓರಿಯಂಟೇಶನ್ ತರಬೇತಿ (ಪಿಡಿಓಟಿ) ಕೇಂದ್ರ ಅಥವಾ ಭಾರತೀಯ ರಾಯಭಾರ ಕಚೇರಿಯಿಂದ ಮಾಹಿತಿ ಪಡೆಯಬೇಕು.

    . ವಲಸೆ ಕಾರ್ವಿುಕರು ಪ್ರವಾಸಿ ಭಾರತೀಯ ಬಿಮಾ ಯೋಜನೆ (ಪಿಬಿಬಿಐ) ಕಡ್ಡಾಯವಾಗಿ ಪಡೆಯಬೇಕು.

    . ಪಿಬಿಬಿಐ ಪಡೆದರೆ ಒಂದು ವೇಳೆ ಮೃತಪಟ್ಟರೆ 10 ಲಕ್ಷ ರೂ. ವಿಮಾ ಮೊತ್ತ ಹಾಗೂ ಗಾಯಗೊಂಡರೆ ವೈದ್ಯಕೀಯ ವೆಚ್ಚ ಸಿಗುತ್ತದೆ.

    ಹೇಗೆಲ್ಲ ವಂಚಿಸ್ತಾರೆ?

    . ವಿದೇಶಿ ಉದ್ಯೋಗ ಕುರಿತು ಫೇಸ್​ಬುಕ್, ವಾಟ್ಸ್​ಆಪ್, ಟೆಕ್ಸ್್ಟ ಮೆಸೇಜ್​ನಲ್ಲಿ ಆಫರ್

    . ಏಜೆನ್ಸಿಗಳ ಇರುವಿಕೆಯ ವಿಳಾಸ ಹಾಗೂ ಸಂಪರ್ಕದ ವಿವರಗಳನ್ನು ಕೊಡುವುದೇ ಇಲ್ಲ

    . ಅಭ್ಯರ್ಥಿ ಜತೆ ವಾಟ್ಸ್​ಆಪ್​ನಲ್ಲಿ ಮಾತಾಡು ತ್ತಾರೆ. ಹೀಗಾಗಿ ಕರೆ ವಿವರ ಪತ್ತೆ ಕಷ್ಟ

    . ಅಸ್ತಿತ್ವದಲ್ಲಿಲ್ಲದ ಕಂಪನಿ ಸೃಷ್ಟಿಸಿ, ಆ ಹೆಸರಲ್ಲೇ ಆನ್​ಲೈನ್ ಇಂಟರ್​ವ್ಯೂ ಮಾಡಿ ಮೋಸ

    . ಹೇಳಿದ ಕಂಪನಿಯಲ್ಲಿ ಉದ್ಯೋಗ ಸಿಕ್ಕಿದೆ ಎಂದು ನಕಲಿ ಆಫರ್ ಲೆಟರ್ ಕೊಟ್ಟು ವಂಚನೆ

    . ಶುಲ್ಕ, ಸೇವೆಯ ರೂಪದಲ್ಲಿ ಲಕ್ಷಾಂತರ ರೂ. ಪಡೆದು, ನಂತರ ನಾಪತ್ತೆಯಾಗುವುದು

    . ಸುಳ್ಳು ಹೇಳಿ ವಿದೇಶಕ್ಕೆ ಕಳುಹಿಸುವುದು. ಅಕ್ರಮ ಪ್ರವೇಶ ಹೆಸರಲ್ಲಿ ಆ ದೇಶದಲ್ಲಿ ಬಂಧನಕ್ಕೀಡಾಗುವಂತೆ ಮಾಡುವುದು

    . ಇಲ್ಲೊಂದು ಉದ್ಯೋಗದ ಆಫರ್ ಲೆಟರ್ ಕೊಟ್ಟು ಅಲ್ಲಿಗೆ ಹೋದ ನಂತರ ಇನ್ಯಾವುದೋ ಕೆಲಸ ಕೊಡಿಸುವುದು

    ಅತ್ಯಂತ ಕಷ್ಟಕರ ಹಾಗೂ ಜೀವಕ್ಕೆ ಅಪಾಯಕಾರಿಯಂತಹ ಪರಿಸ್ಥಿತಿಗಳಲ್ಲಿ ಉದ್ಯೋಗ ಮಾಡಲು ಕಾರ್ವಿುಕರಿಗೆ ಏಜೆಂಟ್​ಗಳು ತಿಳಿಸಿದ್ದಾರೆ.

    ಅಸಲಿ ಆಫರ್ ಹೀಗಿರುತ್ತೆ

    1. ವಿದೇಶಿ ಉದ್ಯೋಗದಾತ, ನೇಮಕಾತಿ ಏಜೆಂಟ್ ಮತ್ತು ಉದ್ಯೋಗಿ ಸಹಿಯೊಂದಿಗೆ ಉದ್ಯೋಗ ಒಪ್ಪಂದ ಪತ್ರ ಇರುತ್ತೆ

    2. ಒಪ್ಪಂದ ಪತ್ರದಲ್ಲಿ ಕೆಲಸ, ಕೆಲಸದ ಅವಧಿ ಮತ್ತು ವೇತನದ ಬಗ್ಗೆ ಟಮ್ರ್್ಸ ಆಂಡ್ ಕಂಡೀಷನ್ಸ್ ನಮೂದಾಗಿರುತ್ತೆ

    3.  ಪ್ರವಾಸಿ ವೀಸಾ ಹೊರತುಪಡಿಸಿ ಉದ್ಯೋಗಿಯ, ವರ್ಕ್ ವೀಸಾದಡಿ ವಿದೇಶ ಪ್ರಯಾಣಕ್ಕೆ ಅನುಮತಿ ಇರುತ್ತದೆ

    4.  ಸಾಮಾನ್ಯವಾಗಿ ವಿದೇಶಿ ಪ್ರತಿಷ್ಠಿತ ಕಂಪನಿಗಳು, ವಿಮಾನ ದರ, ಬೋರ್ಡಿಂಗ್/ಲಾಡ್ಜಿಂಗ್ ಮತ್ತು ವಿಮಾ ರಕ್ಷಣೆಯ ವೆಚ್ಚವನ್ನು ತಾವೇ ನೀಡುತ್ತವೆ

    ಅಸಲಿ, ನಕಲಿ ಪತ್ತೆ ಹೇಗೆ?

    1. ವಿದೇಶದಲ್ಲಿ ಉದ್ಯೋಗ ಬಯಸುವವರು ನೋಂದಾಯಿತ ನೇಮಕಾತಿ ಏಜೆಂಟ್ (ಆರ್​ಎ) ಬಳಿಯಲ್ಲೇ ಸೇವೆ ಪಡೆಯಬೇಕು

    2. ಪ್ರತಿಯೊಬ್ಬ ನೋಂದಾಯಿತ ಆರ್​ಎಗೆ ಪ್ರತ್ಯೇಕ ಪರವಾನಗಿ ನಂಬರ್ ವಿತರಿಸಲಾಗಿದೆ. ಅದನ್ನು ಕಚೇರಿಯಲ್ಲಿ ಪ್ರದರ್ಶಿಸಿರಬೇಕು

    3. ಆರ್​ಎ ನೋಂದಣಿಯಾಗಿದೆಯೇ ಇಲ್ಲವೇ ಎಂದು ತಿಳಿಯಲು ಡಿಡಿಡಿ.ಛಿಞಜಿಜ್ಟಚಠಿಛಿ.ಜಟಡ.ಜ್ಞಿ ವೆಬ್​ಸೈಟ್​ಗೆ ಹೋಗಿ ಲೀಸ್ಟ್ ಆಫ್ ಆಕ್ಟೀವ್ ಆರ್​ಎ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ವಿವರ ಸಿಗುತ್ತದೆ

    4. 30 ಸಾವಿರ ಹಾಗೂ ಶೇ.18 ಜಿಎಸ್​ಟಿ ಶುಲ್ಕ ಮಾತ್ರ ಪಡೆದು ಅದಕ್ಕೆ ಕಡ್ಡಾಯವಾಗಿ ಏಜೆಂಟ್ ರಸೀದಿ ಕೊಡಬೇಕು

    5. ಇದಲ್ಲದೆ ಬೇರೆ ರೀತಿ ವಿದೇಶಕ್ಕೆ ಹೋದರೆ ಹೇಳಿದ ಉದ್ಯೋಗ ಇಲ್ಲದಿರುವುದು, ಆರ್ಥಿಕ ವಂಚನೆ, ಕಷ್ಟದ ಪರಿಸ್ಥಿತಿಯ ಜೀವನ ಎದುರಿಸಬೇಕಾಗುತ್ತದೆ

    ಆರತಿ ಕೃಷ್ಣ ಸಲಹೆ ಏನು?

    1. ವಿದೇಶಿ ವ್ಯವಹಾರಗಳ ಸಚಿವಾಲಯ ವೆಬ್​ಸೈಟ್ ಹಾಗೂ ಅನಿವಾಸಿ ಭಾರತೀಯ ಸಮಿತಿಗೆ ಕರೆ ಮಾಡಿ ಏಜೆನ್ಸಿ ಬಗ್ಗೆ ಪರಿಶೀಲಿಸಿ

    2. ಈವರೆಗೆ ಏಜೆನ್ಸಿಯಿಂದ ಎಷ್ಟು ಜನ ವಿದೇಶಕ್ಕೆ ಉದ್ಯೋಗಕ್ಕಾಗಿ ಹೋಗಿದ್ದಾರೆ. ಅವರ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಬೇಕು

    3. ನೋಂದಣಿಯಾಗಿರುವ ಕೆಲ ಏಜೆನ್ಸಿಗಳು ಸಹ ಮೋಸ ಮಾಡಿದ್ದು, ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಅವುಗಳ ಬಗ್ಗೆಯೂ ಎಚ್ಚರ ವಹಿಸಬೇಕು

    4. ಕೆಲಸಕ್ಕಾಗಿ ಕಾಂಬೋಡಿಯಾಗೆ ಹೋಗಿ ಸಿಲುಕಿಕೊಂಡಿದ್ದ ಮೂವರನ್ನು ಸುರಕ್ಷಿತವಾಗಿ ಕರೆತರಲಾಯಿತು

    5. 5 ವರ್ಷಗಳ ಹಿಂದೆ ಗಲ್ಪ್ ರಾಷ್ಟ್ರಗಳಲ್ಲೂ ಇದೇ ರೀತಿಯ ಮೋಸ ನಡೆಯುತ್ತಿತ್ತು. ಈಗ ಪುನಃ ಆರಂಭವಾಗಿರುವ ಮಾಹಿತಿ ಇದೆ


    ಮೊದಲು ಯಾವುದು ನಕಲಿ, ಯಾವುದು ಅಸಲಿ ಏಜೆನ್ಸಿ ಎಂಬುದನ್ನು ತಿಳಿದುಕೊಳ್ಳಬೇಕು. ಅನಿವಾಸಿ ಭಾರತೀಯ ಸಮಿತಿ (ಕರ್ನಾಟಕ) ಹಾಗೂ ಕೇಂದ್ರದ ವಿದೇಶಿ ವ್ಯವಹಾರಗಳ ಸಚಿವಾಲಯದ ಮೂಲಕ ನೋಂದಾಯಿತ ಏಜೆನ್ಸಿಗಳ ವಿವರ ಸಿಗುತ್ತದೆ. ಈವರೆಗೆ ಪತ್ತೆಯಾಗಿರುವ ವಂಚಕ ಏಜೆನ್ಸಿಗಳ ಪಟ್ಟಿಯನ್ನು ತಯಾರಿಸಿ, ಅದನ್ನು ಬಹಿರಂಗಪಡಿಸುವ ಮುಖೇನ ಜಾಗೃತಿ ಮೂಡಿಸಲು ಅನಿವಾಸಿ ಭಾರತೀಯ ಸಮಿತಿ ಸಿದ್ಧತೆ ನಡೆಸಿದೆ. ಸದ್ಯ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು, ತೆರವುಗೊಂಡ ಕೂಡಲೇ ಈ ಕೆಲಸ ಮಾಡಲಾಗುತ್ತದೆ.

    | ಡಾ.ಆರತಿ ಕೃಷ್ಣ, ಉಪಾಧ್ಯಕ್ಷೆ, ಅನಿವಾಸಿ ಭಾರತೀಯ ಸಮಿತಿ

    ನೌಕರಿ ಹೆಸರಲ್ಲಿ ವಂಚನೆ ಸರ್ಕಾರಿ ಉದ್ಯೋಗಿ ಸೆರೆ

    ಬೆಂಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಸರ್ಕಾರಿ ಮಹಿಳಾ ಉದ್ಯೋಗಿ ಸೇರಿ ಇಬ್ಬರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಸಿಐಡಿ ಘಟಕದಲ್ಲಿ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಬಿ.ಎಸ್. ಅನಿತಾ(42) ಹಾಗೂ ರಾಮಚಂದ್ರ ಭಟ್(56) ಬಂಧಿತರು. ಆರ್​ಪಿಸಿ ಲೇಔಟ್ ನಿವಾಸಿಗಳಾದ ಆರೋಪಿಗಳ ವಿರುದ್ಧ ಚಿಕ್ಕಮಗಳೂರಿನ ಕಲ್ಯಾಣನಗರದ ನಿವಾಸಿ ಸುನಿಲ್ ಎಂಬುವವರು ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021ರಲ್ಲಿ ಸ್ನೇಹಿತ ಮಂಜುನಾಥ್ ಮೂಲಕ ಸುನಿಲ್​ಗೆ ರಾಮಚಂದ್ರ ಭಟ್ ಪರಿಚಯವಾಗಿತ್ತು. ತನಗೆ ಬೆಂಗಳೂರಿನ ಸಿಐಡಿ ಘಟಕ ಸೆಕ್ಷನ್ ಸೂಪರಿಂಟೆಂಡೆಂಟ್ ಆಗಿರುವ ಅನಿತಾ ಪರಿಚಯವಿದೆ.

    ವಿದೇಶಿ ನೌಕರಿ ನಂಬಿಸಿ ಪರಾರಿ!

    ಅವರಿಗೆ ಕೆಪಿಎಸ್​ಸಿ ಹಾಗೂ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಹಲವು ಪ್ರಭಾವಿ ವ್ಯಕ್ತಿಗಳ ಸಂಪರ್ಕವಿದೆ. ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ’ ಎಂದು ರಾಮಚಂದ್ರ ಭಟ್ ನಂಬಿಸಿದ್ದ. ಪ್ರತಿಯಾಗಿ ಅನಿತಾ ಕೇಳಿದಷ್ಟು ಹಣವನ್ನು ಹೊಂದಿಸಿ ಕೊಡಬೇಕೆಂದು ತಿಳಿಸಿದ್ದ. ಸುನೀಲ್ ಅವರನ್ನು ಸಿಐಡಿ ಕಚೇರಿಗೆ ಕರೆದೊಯ್ದಿದ್ದ ರಾಮಚಂದ್ರ ಭಟ್, ಅನಿತಾಳನ್ನು ಅಲ್ಲೇ ಭೇಟಿ ಮಾಡಿಸಿದ್ದ. ಇದೇ ವೇಳೆ ತನ್ನ ಕಚೇರಿ, ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ ಅನಿತಾ, ಕೆಪಿಎಸ್​ಸಿ ಮೂಲಕ ಪಿಡಬ್ಲು್ಯಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಕೊಡಿಸುವುದಾಗಿ ಹೇಳಿದ್ದರು. ಅದಕ್ಕಾಗಿ 40 ಲಕ್ಷ ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಸುನೀಲ್, 2021ರ ಡಿಸೆಂಬರ್ ಹಾಗೂ 2022ರ ಫೆಬ್ರವರಿಯಲ್ಲಿ ಆರೋಪಿಗಳಿಗೆ ಹಂತಹಂತವಾಗಿ 40 ಲಕ್ಷ ರೂ. ನೀಡಿದ್ದರು. ಆದರೆ, ನಂತರದಲ್ಲಿ ಸುನೀಲ್ ಅವರಿಗೆ ಯಾವುದೇ ಸರ್ಕಾರಿ ಕೆಲಸ ಕೊಡಿಸಿರಲಿಲ್ಲ. ಹಣ ವಾಪಸ್ ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ವಿಜಯನಗರ ಠಾಣೆಗೆ ಸುನಿಲ್ ದೂರು ನೀಡಿದ್ದರು. ಇದೇ ಮಾದರಿಯಲ್ಲಿ ಇನ್ನೂ ಕೆಲವರಿಂದ ಸುಮಾರು 2 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಧಾನಿ ಮೋದಿ ಬಳಿ ಇರೋದು 52 ಸಾವಿರ ರೂಪಾಯಿ ನಗದು, ಬಿಡಿಗಾಸಿನ ಸ್ಥಿರಾಸ್ತಿಯೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts