ಈ ಮೂರು ರಾಶಿಯವರು ನಿಮ್ಮ ಬಳಿಯಿದ್ದರೆ ಅಲ್ಲಿ ನಗುವಿಗೆ ಯಾವುದೇ ಕೊರತೆ ಇರುವುದಿಲ್ಲ! Zodiac Signs

Zodiac Signs
Published on

Zodiac Signs : ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.

ಅಂದಹಾಗೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಯಾವಾಗಲೂ ನಗುವವರಾಗಿರುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರನ್ನು ಖುಷಿಯಿಂದ ಇರಿಸುತ್ತಾರಂತೆ. ಹಾಗಾದರೆ, ನಗುವನ್ನು ಹರಡುವ ಸ್ವಭಾವದವರು ಯಾವು ರಾಶಿಯಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮಿಥುನ ರಾಶಿ

ಮಿಥುನ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕ ಹಾಸ್ಯಪ್ರಜ್ಞೆಯನ್ನು ಹೊಂದಿರುತ್ತಾರೆ. ಅವರು ಚುರುಕುಬುದ್ಧಿಯವರೂ ಮತ್ತು ಉತ್ಸಾಹಭರಿತರೂ ಆಗಿರುತ್ತಾರೆ. ಆದ್ದರಿಂದ, ಅವರ ಸುತ್ತಮುತ್ತಲಿನ ಪ್ರದೇಶಗಳು ಯಾವಾಗಲೂ ಸಂತೋಷದಿಂದ ತುಂಬಿರುತ್ತವೆ. ಈ ರಾಶಿಯವರ ಮಾತುಗಳಲ್ಲಿ ದುಃಖಕ್ಕೆ ರಾಮಬಾಣವಿದೆ ಎಂದು ಇತರರು ಭಾವಿಸುತ್ತಾರೆ. ಇತರರನ್ನು ಖುಷಿಯಾಗಿ ಇರಿಸುತ್ತಾರೆ ಅನ್ನೋ ಕಾರಣಕ್ಕೆ ಅವರನ್ನು ಇಷ್ಟಪಡದವರೇ ಇಲ್ಲ. ಈ ರಾಶಿಯವರು ಅತ್ಯಂತ ನೀರಸ ವಿಷಯವನ್ನು ಸಹ ಮೋಜಿನಿಂದ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತಮ್ಮ ಹಾಸ್ಯಪ್ರಜ್ಞೆಯಿಂದ ಕಷ್ಟಕರ ಸಂದರ್ಭಗಳನ್ನು ಹಗುರವಾಗಿ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಜನರು ಇತರರನ್ನು ಹೇಗೆ ಮೆಚ್ಚಿಸಬೇಕೆಂದು ತಿಳಿದಿದ್ದಾರೆ. ಅವರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಗುವಿಗೆ ಯಾವುದೇ ಕೊರತೆ ಇರುವುದಿಲ್ಲ. ಈ ರಾಶಿಯವರು ಬೇರೆಯವರ ಗಮನ ಸೆಳೆಯಲು ಸರಿಯಾದ ಸ್ಥಳಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯನ್ನು ಬಳಸುತ್ತಾರೆ. ಅವರ ನಾಟಕೀಯ ಕೌಶಲ್ಯ ಮತ್ತು ಕಥೆ ಹೇಳುವ ಸಾಮರ್ಥ್ಯಗಳು ತಮ್ಮ ಸುತ್ತಮುತ್ತಲಿನವರನ್ನು ಯಾವಾಗಲೂ ಸಂತೋಷವಾಗಿರಿಸುತ್ತದೆ.

ಮೇಷ ರಾಶಿ

ಮೇಷ ರಾಶಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಧೈರ್ಯಶಾಲಿ ಮತ್ತು ಉತ್ಸಾಹಭರಿತರು. ಅವರಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಂಡಿತವಾಗಿಯೂ ಮೋಜಿನ ಕೊರತೆ ಇರುವುದಿಲ್ಲ. ಅವರಿಗೆ ತಮ್ಮ ಹಾಸ್ಯಪ್ರಜ್ಞೆಯ ಅರಿವಿಲ್ಲದಿದ್ದರೂ ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಮನಸ್ಸಿನಲ್ಲಿರುವುದನ್ನು ನೇರವಾಗಿ ಹೇಳುವುದರಿಂದ ಇತರರಿಗೆ ಅದು ತಮಾಷೆಯಾಗಿರುತ್ತದೆ. ಈ ರಾಶಿಯವರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಆದ್ದರಿಂದ ಅವರು ಜೀವನದಲ್ಲಿ ಯಾರನ್ನೂ ಎಂದಿಗೂ ಮೋಸಗೊಳಿಸುವುದಿಲ್ಲ. ಈ ರಾಶಿಯವರು ಇತರರಿಗೆ ಸಂತೋಷವನ್ನು ಮಾತ್ರ ತರುತ್ತಾರೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net