ಇಲ್ಲೊಂದು ವಿಚಿತ್ರ ಸಂಪ್ರದಾಯ; ಮದುವೆಗೆ ಬರುವವರೆಲ್ಲಾ ವಧುವನ್ನು ಚುಂಬಿಸುತ್ತಾರಂತೆ!: ಎಲ್ಲಿ ಗೊತ್ತೆ! | Strange Tradition

dk - 2025-03-28T085107.256
Published on

Strange Tradition : ಜಗತ್ತಿನಲ್ಲಿ ಪ್ರತಿಯೊಂದು ದೇಶವು ತನ್ನದೇ ಆದ ವಿಭಿನ್ನ ಆಚರಣೆಗಳನ್ನು ಒಳಗೊಂಡಿರುತ್ತವೆ. ಈ ಆಚರಣೆ ಮತ್ತು ಪದ್ಧತಿಗಳನ್ನು ಮೊದಲಿಂದಲೂ ಪಾಲಿಸಿಕೊಂಡು ಬಂದಿರುತ್ತವೆ. ಈಗೆ ಸ್ವೀಡನ್​ ದೇಶದಲ್ಲಿ ಮದುವೆಗೆ ಸಂಬಂಧಿಸಿದ ಪದ್ಧತಿ, ಸಂಪ್ರದಾಯಗಳು ತುಸು ವಿಚಿತ್ರವೆನಿಸುತ್ತದೆ.

ಹೌದು, ಭಾರತದಲ್ಲಿ, ಮದುವೆಯಲ್ಲಿ ವರನ ಪಾದರಕ್ಷೆಗಳನ್ನು ಕದಿಯುವ ಆಚರಣೆ ಇದೆ. ಅದೇ ರೀತಿ, ಅಪರಿಚಿತರು ವಧುವಿಗೆ ಮುತ್ತಿಡುವ ಪದ್ಧತಿ ಇರುವ ಸ್ವೀಡನ್​ ದೇಶದಲ್ಲಿದೆ. ಅದರ ಬಗ್ಗೆ ತಿಳಿದುಕೊಳ್ಳೋಣ.

ವಧು-ವರರು ಪರಸ್ಪರ ಚುಂಬಿಸುವುದಿಲ್ಲ

ಸ್ವೀಡನ್‌ನಲ್ಲಿ ನಡೆಯುವ ಕ್ರಿಶ್ಚಿಯನ್ ವಿವಾಹಗಳಲ್ಲಿ ಒಂದು ಆಚರಣೆ ಇದೆ, ಅದು ತುಂಬಾ ವಿಚಿತ್ರವಾಗಿದೆ. ಇಲ್ಲಿ ಮದುವೆಯ ಸಮಯದಲ್ಲಿ ವಧು-ವರರು ಪರಸ್ಪರ ಚುಂಬಿಸುವುದಿಲ್ಲ.ಇಲ್ಲಿ ವರನ ಸ್ನೇಹಿತರು ವಧುವಿಗೆ ಮುತ್ತಿಡುತ್ತಾರೆ. ಈ ಸಂಪ್ರದಾಯದಲ್ಲಿ, ವಧುವಿನ ಸ್ನೇಹಿತರು ಸಹ ವರನಿಗೆ ಚುಂಬಿಸುತ್ತಾರೆ. ಇದು ಇಲ್ಲಿ ನಡೆಯುವ ಒಂದು ವಿಶಿಷ್ಟ ಆಚರಣೆಯಾಗಿದೆ.

ಈ ಆಚರಣೆಯಲ್ಲಿ ಭಾವಿ ವಧುವನ್ನು ಬಿಟ್ಟುಹೋಗುತ್ತಾನೆ. ಬಳಿಕ ವಧುವನ್ನು ಅವರು ಸ್ನೇಹಿತರು ಸೇರಿದಂತೆ ಸಂಬಂಧಿಸಿಕರು , ಯುವಕರು ಅವಿವಾಹಿತ ವಧುವಿಗೆ ಎಲ್ಲರು ಚುಂಬಿಸುತ್ತಾರೆ. ಅದೇ ರೀತಿ ಇಲ್ಲಿನ ವರನಿಗೆ ಸಹ ಯುವತಿಯರು ಮುತ್ತಿಡುತ್ತಾರೆ. ಅಲ್ಲಿ, ವಿವಾಹಿತ ಪುರುಷರು ಮತ್ತು ಮಹಿಳೆಯರು ಈ ಆಚರಣೆಯನ್ನು ಮಾಡುವುದಿಲ್ಲ, ಬದಲಿಗೆ ಮದುವೆಯಾಗದವರು ಮಾತ್ರ ವಧು-ವರರನ್ನು ಚುಂಬಿಸುತ್ತಾರೆ.

ಈ ಸಂಪ್ರದಾಯ ಅನುಸರಿಸುವುದೇಕೆ..?

ದಂಪತಿಗಳ ಜೀವನ ಸಂತೋಷವಾಗಿರಲು ಅಲ್ಲಿನ ಜನರು ಈ ಸಂಪ್ರದಾಯ ಅನುಸರಿಸುತ್ತಾರೆ ಎಂದು ನಂಬಲಾಗಿದೆ. ಈ ಸಂಪ್ರದಾಯ ನಿಮಗೆ ವಿಚಿತ್ರವೆನಿಸಬಹುದು. ಆದರೆ, ಅಲ್ಲಿ ಇಂದಿಗೂ ಈ ಪದ್ಧತಿಯನ್ನು ಎಲ್ಲರು ಅನುಸರಿಸತ್ತಾರೆ. ಅಲ್ಲದೆ, ಅಲ್ಲಿ ವರನ ಕುಟುಂಬವೂ ಇದಕ್ಕೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ ಅಥವಾ ವಧುವಿನ ಕುಟುಂಬವೂ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net