ಆಹಾರ ಕಿಟ್​ಗಾಗಿ ಬಂದು ಕಾಲ್ತುಳಿತಕ್ಕೆ ಸಿಕ್ಕರು

davanagere food kits
Published on

ದಾವಣಗೆರೆ: ಆಹಾರ ಕಿಟ್​ ಪಡೆಯಲು ಬಂದಿದ್ದ ಜನತೆ ನಾ ಮುಂದು, ತಾ ಮುಂದು ಎಂಬಂತೆ ಒಮ್ಮೆಲೆ ನುಗ್ಗಿದ್ದರಿಂದ ವೃದ್ಧರು, ಮಹಿಳೆಯರು ತುಳಿತಕ್ಕೊಳಗಾದರು.

ಜಗಳೂರು ಪಟ್ಟಣದ ತರಳಬಾಳು ಕೇಂದ್ರದ ಮುಖ್ಯದ್ವಾರದಲ್ಲಿ ಮಂಗಳವಾರ ಅರಸಿಕೆರೆ ಹೋಬಳಿ ಕಲ್ಲುಗಣಿ ಕ್ರಷರ್ ಮಾಲೀಕರು ಆಹಾರ ಕಿಟ್​ಗಳನ್ನು ನೀಡಿದ್ದರು. ಇದನ್ನು ಪಡೆಯಲು ಬಂದಿದ್ದ ಸುತ್ತಮುತ್ತಲ ಸಾರ್ವಜನಿಕರ ನಡುವೆ ನೂಕುನುಗ್ಗಲು ಏರ್ಪಟ್ಟಿತು.

ಆಹಾರ್​ ಕಿಟ್​ ವಿತರಿಸಲು ಸಂಸದ ಜಿ.ಎಂ.ಸಿದ್ದೇಶ್ವರ್ ಮತ್ತು ಶಾಸಕ ಎಸ್.ವಿ. ರಾಮಚಂದ್ರ ಅವರ ಬರುವಿಕೆ ತಡವಾಗಿದ್ದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲರಾದರು. ಒಮ್ಮೆಲೆ ಗೇಟ್ ತೆರೆದಿದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಗೇಟ್​ ಮುಂದೆ ಆರಂಭದಲ್ಲಿ ನಿಂತಿದ್ದ ವೃದ್ಧರು ಕಾಲ್ತುಳಿತಕ್ಕೆ ಸಿಕ್ಕರು. ಸ್ಥಳದಲ್ಲೇ ಇದ್ದ ಕೆಲವರು ಮಧ್ಯ ಪ್ರವೇಶಿಸಿ ಅವರನ್ನು ರಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net