

ಸೊರಬ: ಸೊರಬ ಪಟ್ಟಣದ ಕೆಲವೆಡೆ ವರ್ತಕರು ಹಾಗೂ ಬೀದಿಬದಿ ವ್ಯಾಪಾರಿಗಳು ುಟ್‌ಪಾತ್ ಅತಿಕ್ರಮಿಸಿರುವುದರಿಂದ ಅವು ಇದ್ದರೂ ಉಪಯೋಗಕ್ಕೆ ಇಲ್ಲದಂತಾಗಿದೆ. ವಾಹನಗಳ ದಟ್ಟಣೆಯಿಂದ ಜನರು ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ.
ಸೊರಬ ಪಟ್ಟಣ ಪುರಸಭೆಯಾಗಿ ಎರಡು ವರ್ಷ ಕಳೆದರೂ ುಟ್‌ಪಾತ್ ಸ್ಥಿತಿ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಅತಿಕ್ರಮ ತೆರವುಗೊಳಿಸಲು ಪುರಸಭೆ ಅಧಿಕಾರಿಗಳು ಮುಂದಾಗಿಲ್ಲ.
2011ರಲ್ಲಿ ಸೊರಬ ಮುಖ್ಯರಸ್ತೆ, ಆಂಜನೇಯ ದೇವಸ್ಥಾನದಿಂದ ಮೆಸ್ಕಾಂ ಕಚೇರಿವರೆಗೆ ಹಾಗೂ ಸೊರಬ- ಸಾಗರ ರಸ್ತೆಯ ಅಗ್ನಿಶಾಮಕ ದಳದ ಕಚೇರಿವರೆಗೆ ರಸ್ತೆ ಅಗಲೀಕರಣ ಮಾಡಲಾಗಿತ್ತು. ನಂತರ ಆಂಜನೇಯ ದೇವಸ್ಥಾನದಿಂದ ದಂಡಾವತಿ ಸೇತುವೆವರೆಗೆ ಎರಡು ಹಂತದಲ್ಲಿ ಸೊರಬ ಮುಖ್ಯರಸ್ತೆ ಅಗಲೀಕರಣಗೊಂಡು ಸೊರಬ ಸುಂದರ ಪಟ್ಟಣವಾಗಿತ್ತು. ಆದರೆ ಆಂಜನೇಯ ದೇವಸ್ಥಾನದ ಸರ್ಕಲ್‌ನಿಂದ ಪುರಸಭೆವರೆಗೆ ಪುರಸಭೆ ಕಾಂಪ್ಲೆಕ್ಸ್, ಕೆನರಾ ಬ್ಯಾಂಕ್ ಪಕ್ಕ ಹಾಗೂ ರಂಗನಾಥ ದೇವಸ್ಥಾನದವರೆಗೆ ಅಲ್ಲಲ್ಲಿ ುಟ್‌ಪಾತ್‌ಗಳನ್ನು ಕೆಲ ಅಂಗಡಿ ಮಾಲೀಕರು ವ್ಯಾಪಾರ ಸಾಮಗ್ರಿಗಳನ್ನಿರಿಸಿ ಪಾದಚಾರಿಗಳು ಓಡಾಡದಂತೆ ಮಾಡಿದ್ದಾರೆ. ಹೂವಿನ ಅಂಗಡಿ, ಎಳನೀರು, ತಿಂಡಿ ತಿನಿಸು ಅಂಗಡಿಗಳ ನಾಮಲಕ ಇಟ್ಟಿರುವುದು ಪಾದಚಾರಿಗಳಿಗೆ ಕಿರಿಕಿರಿ ಉಂಟಾಗಿದೆ. ಮತ್ತೆ ಕೆಲವರು ಬೈಕ್‌ಗಳನ್ನು ನಿಲ್ಲಿಸುತ್ತಾರೆ. ಆಂಜನೇಯ ಮತ್ತು ರಾಮದೇವಸ್ಥಾನದ ಬಳಿ ವ್ಯಾಪಾರ ವಹಿವಾಟು ಚೆನ್ನಾಗಿರುವುದರಿಂದ ಸಹಜವಾಗಿ ಈ ಸ್ಥಳದಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ.
ಸೊರಬ ಪಟ್ಟಣದ ವ್ಯಾಪಾರ ಸಾಮಾನ್ಯವಾಗಿ ಗ್ರಾಮೀಣರನ್ನೇ ಅವಲಂಬಿಸಿದೆ. ನಿತ್ಯ ನೂರಾರು ಜನರು ವ್ಯಾಪಾರ, ಬ್ಯಾಂಕ್, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆಂದು ಪಟ್ಟಣಕ್ಕೆ ಬರುವವರು ಬೈಕ್, ಕಾರುಗಳನ್ನು ುಟ್‌ಪಾತ್‌ಗೆ ಹೊಂದಿಕೊಂಡಂತೆ ಪಾರ್ಕಿಂಗ್ ಮಾಡುತ್ತಾರೆ. ಒಂದೆಡೆ ಫುಟ್‌ಪಾತ್ ಮೇಲೆ ಸಾಮಗ್ರಿ ಸಾಲು, ಪಕ್ಕದಲ್ಲಿ ವಾಹನಗಳು ಇರುವುದರಿಂದ ಪಾದಚಾರಿಗಳು ರಸ್ತೆ ಮಧ್ಯದಲ್ಲಿ ಸಾಗಬೇಕಾದ ಅನಿರ್ವಾತೆಯಿದೆ.
ಮಂಗಳವಾರ ಸಂತೆಯಂದು ಹಳೇ ಮಾರುಕಟ್ಟೆ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ರಸ್ತೆ ಮೇಲೆ ಅಂಗಡಿಗಳನ್ನು ತೆರೆಯುತ್ತಾರೆ. ಇನ್ನು ಸೊರಬ- ಸಾಗರ ರಸ್ತೆಯಲ್ಲಿ ಪಿಎಲ್‌ಡಿ ಬ್ಯಾಂಕ್ ಹಾಗೂ ಹಿರೇಶಕುನ ಮಾರಿಕಾಂಬಾ ದೇವಸ್ಥಾನದಿಂದ ಅಗ್ನಿಶಾಮಕ ದಳದ ಕಚೇರಿ ರಸ್ತೆವರೆಗೆ ಡಬಲ್ ರಸ್ತೆಯ ಒಂದು ಭಾಗದ ಮೇಲೆ ಅಲಲ್ಲಿ ಬೈಕ್ ಮತ್ತು ಕಾರುಗಳ ರಿಪೇರಿ ಹಾಗೂ ವಾಹನಗಳನ್ನು ವಾಶ್ ಮಾಡಲಾಗುತ್ತದೆ. ಇಂತಹ ಕೆಲಸಗಳಿಗೆ ಪಟ್ಟಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೇ ಇರುವುದು ಇದಕ್ಕೆ ಕಾರಣ. ಪಟ್ಟಣದ ಬಂಗಾರಪ್ಪ ಕ್ರೀಡಾಂಗಣದ ಬಳಿ ಕೈಗಾರಿಕಾ ಪ್ರದೇಶ ಇದ್ದರೂ ಅಲ್ಲಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಅನಿವಾರ್ಯವಾಗಿ ರಸ್ತೆ ಮತ್ತು ಫುಟ್‌ಪಾತ್‌ಗಳ ಮೇಲೆ ವಾಹನ ರಿಪೇರಿ ಮಾಡಲಾಗುತ್ತಿದೆ.
ಪುರಸಭೆಯಿಂದ ಮೆಸ್ಕಾಂ ಕಚೇರಿವರೆಗೆ ಸುಸಜ್ಜಿತ ುಟ್‌ಪಾತ್ ನಿರ್ಮಿಸಲಾಗಿದೆ. ಸಾರ್ವಜನಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಓಡಾಡಲು ಅನುಕೂಲವಾಗಿದೆ. ಆದರೆ ಇತ್ತೀಚಿಗೆ ಇಲ್ಲಿಯೂ ದಿನದಲ್ಲಿ ಕೆಲವು ಅಂಗಡಿ ಮುಂಗಟ್ಟುಗಳು ತಲೆ ಎತ್ತುತ್ತಿವೆ. ಅವುಗಳಿಗೆ ಈಗಲೇ ಕಡಿವಾಣ ಹಾಕಬೇಕು.
ಉಪಯೋಗಕ್ಕೆ ಬಾರದ ಸಿಗ್ನಲ್ ಲೈಟ್: ಪಟ್ಟಣದ ಪುರಸಭೆ, ಆಂಜನೆಯ ಸರ್ಕಲ್, ರಂಗನಾಥ ದೇವಾಲಯದ ಬಳಿ, ಉದ್ರಿ ಹಾಗೂ ಬಂಗಾರ ಧಾಮದ ಸರ್ಕಲ್ ಸೇರಿ ಹಲವೆಡೆ ಒಂದು ತಿಂಗಳ ಹಿಂದಷ್ಟೇ ಸೋಲಾರ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಆದರೆ ಅವುಗಳಲ್ಲಿ ಕೇವಲ ಹಳದಿ ಬಣ್ಣ ಕಾಣುತ್ತದೆ. ಅವುಗಳು ಸಂಚಾರ ನಿಯಂತ್ರಣ ಮತ್ತು ಸಾರಿಗೆ ನಿಯಮಗಳ ಪಾಲನೆಯಲ್ಲಿ ಪರಿಣಾಮ ಬೀರುತ್ತಿಲ್ಲ. ಹಾಗಾಗಿ ವಾಹನ ಚಾಲಕರ‌್ಯಾರೂ ಈ ಸಿಗ್ನಲ್ ಲೈಟ್‌ಗಳ ಕಡೆ ಗಮನಹರಿಸುತ್ತಿಲ್ಲ.
ವಾಹನಗಳ ಸಂಖ್ಯೆ ಹೆಚ್ಚಳ: ವಿವಿಧ ವಾಹನ ಕಂಪನಿಗಳ ಮಾಹಿತಿಯಂತೆ ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಪ್ರತಿವರ್ಷ ಸೊರಬ ತಾಲೂಕಿನಲ್ಲಿ ವಾಹನಗಳ ಖರೀದಿ ಹೆಚ್ಚು. ಪ್ರತಿವರ್ಷ ಪಟ್ಟಣದಲ್ಲಿ ವಾಹನಗಳ ಸಂಚಾರ ಹೆಚ್ಚಿದೆ. ಆದರೆ ಸೊರಬ ಪಟ್ಟಣ ಮಾತ್ರ ವಿಸ್ತಾರವಾಗಲು ಜಾಗವಿಲ್ಲದ ಕಾರಣ ಒಂದೇ ಮುಖ್ಯರಸ್ತೆಯಲ್ಲಿ ಎಲ್ಲ ರೀತಿ ವಾಹನಗಳ ಸಂಚಾರ, ಜನರ ಓಡಾಟದಿಂದ ಜನದಟ್ಟಣೆ ಹೆಚ್ಚಾಗಿ ಸವಾರರು ನಿತ್ಯವು ಪರದಾಡುವಂತಾಗಿದೆ.
ಮನಬಂದಂತೆ ಪಾರ್ಕಿಂಗ್ ನಿಷೇಧವಾಗಲಿ: ಸುಗಮ ಸಂಚಾರ ವ್ಯವಸ್ಥೆಗೆ ಪಟ್ಟಣದ ಒಳಗಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಆಗಬೇಕು. ಪೇಟೆಯ ಆಟೋ ನಿಲ್ದಾಣಕ್ಕೆ ಬೇರೆಡೆ ವ್ಯವಸ್ಥೆ ಮಾಡಬೇಕು. ುಟ್‌ಪಾತ್ ಮೇಲೆ ವ್ಯಾಪಾರಸ್ಥರು ಸಾಮಗ್ರಿ ಇರಿಸಲು ಕಡಿವಾಣ ಹಾಕಬೇಕು. ಬೈಕ್ ಮತ್ತು ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದನ್ನು ನಿಷೇಧಿಸಬೇಕು. ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ಮಾಡಲು ಒಂದೊಂದು ದಿನ ಒಂದು ಬದಿ ನಿಗದಿಪಡಿಸಬೇಕು. ುಟ್‌ಪಾತ್ ಅಂಗಡಿಗಳಿಗೆ ಪ್ರತ್ಯೇಕ ಜಾಗ ಗುರುತಿಸಿ ಸ್ಥಳಾಂತರಿಸುವ ಅಗತ್ಯವಿದೆ.