ಕಪ್ಪೆ ಬಗ್ಗೆ ನಿರ್ಲಕ್ಷ್ಯ ಬೇಡ.. ವಿಷಪೂರಿತ ಕಪ್ಪೆಗಳೂ ಇವೆ! ಮುಟ್ಟಿದರೂ ಸಾಯುತ್ತೀರಿ...

frog
Published on
ಭೂಮಿಯ ಮೇಲೆ ಕಪ್ಪೆಯಂತಹ ಉಭಯಚರಗಳಲ್ಲಿ ಅಂದಾಜು 7,000ಕ್ಕೂ ಹೆಚ್ಚು ಜಾತಿಗಳಿದ್ದು, ಪ್ರಪಂಚದ ಎಲ್ಲ ದೇಶಗಳಲ್ಲಿ ಹರಡಿವೆ. ನಮ್ಮ ದೇಶದಲ್ಲಿ ಅಂದಾಜು 204 ಜಾತಿಗಳಿವೆ. ಅಮೆಜಾನ್ ಕಾಡಿನಲ್ಲಿ ಕೆಲವು ಜಾತಿಯ ಕಪ್ಪೆಗಳು ವಿಷಪೂರಿತ ಕಪ್ಪೆಗಳು. ಅವುಗಳನ್ನು ಮುಟ್ಟಿದರೆ ಮನುಷ್ಯರು ಸಾಯುತ್ತಾರೆ. ಒಂದು ಕಪ್ಪೆಯಲ್ಲಿ ಎಂಟ್ಹತ್ತು ಜನರನ್ನು ಸಾಯಿಸುವಷ್ಟು ವಿಷವಿರುತ್ತದೆ. ಅರ್ಧ ಇಂಚಿನ ಕಪ್ಪೆಯೂ ಇವೆ, ಒಂದು ಅಡಿ ಉದ್ದದ ಕಪ್ಪೆಗಳೂ ಇವೆ.

ಇವುಗಳನ್ನು ಹಲವು ದೇಶಗಳಲ್ಲಿ ಆಹಾರವನ್ನಾಗಿ ಉಪಯೋಗಿಸುತ್ತಾರೆ. ಅಮೆರಿಕ ದೇಶದಲ್ಲಿ ಕಪ್ಪೆಯ ಕಾಲುಗಳಿಗೆ ಬಹಳ ಬೇಡಿಕೆಯಿದ್ದು ನಮ್ಮ ದೇಶದಿಂದ ಅಂದಾಜು ಒಂದು ಕೋಟಿಯಷ್ಟು ಕಪ್ಪೆಗಳನ್ನು ರಫ್ತು ಮಾಡಲಾಗುತ್ತಿದೆ.

ಭೂಮಿಯ ಮೇಲೆ ಕಳೆದ ಇಪ್ಪತ್ತು ಕೋಟಿ ವರ್ಷಗಳಿಂದ ಜೀವಿಸುತ್ತಿರುವ ಕಪ್ಪೆಗಳ ಸಂಖ್ಯೆ ಕ್ಷೀಣಿಸುತ್ತಿದೆ.

ಅಂದಾಜು 500 ವರ್ಷಕ್ಕೆ ಒಂದು ಜಾತಿಯ ಉಭಯಚರಗಳು ನಶಿಸುವುದು ನೈಸರ್ಗಿಕ ಕ್ರಿಯೆ. ಆದರೆ, 1980ನೇ ಇಸವಿಯಿಂದ ಅಂದಾಜು 200 ಜಾತಿಯ ಕಪ್ಪೆಗಳು ಸಂಪೂರ್ಣವಾಗಿ ನಶಿಸಿಹೋಗಿವೆ ಎನ್ನುವುದು ಆತಂಕದ ವಿಷಯವಾಗಿದೆ. ಮೂರನೇ ಒಂದು ಭಾಗ ಅವನತಿಯ ಹಂತವನ್ನು ತಲುಪಿವೆ. ಇದಕ್ಕೆ ಕಾರಣ ಮನುಷ್ಯನಿಂದ ಆಗುತ್ತಿರುವ ನೀರಿನ ಮಾಲಿನ್ಯ, ವಾಯು ಮಾಲಿನ್ಯ, ಹವಾಮಾನ ವೈಪರೀತ್ಯ, ಅವುಗಳ ವಾಸಸ್ಥಾನದ ನಾಶ, ಆಹಾರಕ್ಕಾಗಿ ಮನುಷ್ಯರಿಂದ ಅತಿಯಾದ ಬೇಟೆ ಮುಂತಾದವು. ಜತೆಗೆ, ಚರ್ಮದ ಮೂಲಕ ಉಸಿರಾಡುವುದು ಮತ್ತು ನೀರು ಕುಡಿಯುವುದರಿಂದ, ಗಾಳಿ ಮತ್ತು ನೀರಿನಲ್ಲಿರುವ ಮಲಿನಗಳು ಇವುಗಳ ದೇಹವನ್ನು ಸೇರುತ್ತಿವೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net