VIDEO| ವಾರ್​ಗಿತ್ತಿಯರ ವಾರ್​! ಆಸ್ತಿಗಾಗಿ ನಡು ರಸ್ತೆಯಲ್ಲೇ ಜಡೆ ಜಡೆ ಹಿಡಿದು ಹೊಡೆದಾಡಿಕೊಂಡ ನಾರಿಯರು!

fight
Published on

ಚಿತ್ರದುರ್ಗ: ಆಸ್ತಿ ವಿಚಾರಕ್ಕಾಗಿ ದಾಯಾದಿ ಮಹಿಳೆಯರು ಜಗಳ ಆಡಿಕೊಂಡು, ಓರ್ವ ಮಹಿಳೆ ಗಂಭೀರ ಹಲ್ಲೆಗೊಳಗಾಗಿ, ಕೊನೆಯುಸಿರೆಳೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೇ ಸರ್ವೆ ನಂಬರ್​ನಲ್ಲಿ 5 ಜನ ಆಸ್ತಿ ಹಂಚಿಕೊಂಡಿದ್ದರು. ಅದನ್ನು ಅಧಿಕೃತ ಮಾಡಲೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಷ್ಟರೊಳಗೆ ದಾಯಾದಿಗಳು ಜಗಳ ಆರಂಭಿಸಿದ್ದಾರೆ. ಒಂದೇ ಮನೆಯ ಸೊಸೆಯಂದಿರಾದ ಮಂಜಮ್ಮ, ಸುಮಕ್ಕ, ನೀಲಮ್ಮ ಮತ್ತು ವಿಶಾಲಾಕ್ಷಿ ನಡುವೆ ಜಗಳ ನಡೆದಿದೆ. ಮಂಜಮ್ಮನನ್ನು ಉಳಿದ ಮೂವರು ಮಹಿಳೆಯರು ಹಿಡಿದು ಥಳಿಸಿದ್ದಾರೆ.

ಜಗಳದಲ್ಲಿ ಮಂಜಮ್ಮ ತೀವ್ರವಾಗಿ ಗಾಯಾಳುವಾಗಿದ್ದಾರೆ. ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಸುಮಕ್ಕ, ನೀಲಮ್ಮ, ವಿಶಾಲಾಕ್ಷಿ, ಚಿದಾನಂದಪ್ಪ ಎಂಬುವವರ ವಿರುದ್ಧ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net