ಚೂರಿ ಹಿಡಿದು ಮನೆಗೆ ನುಗ್ಗಿ ಮಹಿಳೆಯನ್ನ ಕಟ್ಟಿ ಹಾಕಿದ್ರು... ಸೈರನ್​ ಶಬ್ದ, ಕಲ್ಲುತೂರಾಟಕ್ಕೆ ತಪ್ಪಿತು ದುರಂತ !

robbery
Published on

ಚಿಕ್ಕಮಗಳೂರು: ನಗರದ ಎಐಟಿ ಸರ್ಕಲ್ ಸಮೀಪದ ಇಂದು ಬೆಳಗ್ಗೆ ಸಿನಿಮಾ ಸ್ಟೈಲ್​ನಲ್ಲಿ ಚಾಕು-ಚೂರಿ ಹಿಡಿದು ಬಂದ ಕಳ್ಳರಿಬ್ಬರು ಸಿಕ್ಕಿಬಿದ್ದದ್ದೇ ರೋಚಕ.

ಚಾಕು-ಚೂರಿ ಹಿಡಿದು ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡರ ಮನೆಗೆ ನುಗ್ಗಿದ ಮುಸುಕುಧಾರಿಗಳಿಬ್ಬರು ಮನೆಯ ಮಹಿಳೆಯನ್ನ ಕಟ್ಟಿಹಾಕಿ ದರೋಡೆ ಮಾಡುತ್ತಿದ್ದರು. ಅಷ್ಟರಲ್ಲಿ ಮಹಿಳೆಯ ಮಗ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ದರೋಡೆ ಯತ್ನ ಬಯಲಾಗಿದೆ. ಕೂಡಲೇ ಆತ ಸ್ಥಳೀಯರನ್ನ ಕೂಗಿಕೊಂಡಿದ್ದು, ಹತ್ತಿರ ಬಂದರೆ ಚುಚ್ಚುವಂತೆ ಕೈಯಲ್ಲೇ ಚೂರಿ ಹಿಡಿದುಕೊಂಡು ಕಳ್ಳರಿಬ್ಬರೂ ಹೊರ ಬಂದು ಬೈಕ್​ ಹತ್ತಿ ಎಸ್ಕೇಪ್​ ಆಗಲು ಮುಂದಾದರು. ಇದನ್ನೂ ಓದಿರಿ ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ

ಅಷ್ಟರಲ್ಲಿ ಸ್ಥಳಕ್ಕೆ ಸೈರನ್​ ಕೂಗಿಕೊಂಡು ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುತ್ತಿದ್ದಂತೆ ಬೈಕ್​ ಬಿಟ್ಟು ಚೂರಿ ಹಿಡಿದುಕೊಂಡೇ ಎಸ್ಕೇಪ್​ ಆಗಲು ಕಾಲ್ಕಿತ್ತರು. ದರೋಡೆಕೋರರನ್ನ ಹಿಂಬಾಲಿಸಿದ ಸ್ಥಳೀಯರು ಕಲ್ಲು ತೂರಾಟ ನಡೆಸಿದರು. ಬೆನ್ನುಬಿದ್ದ ಪೊಲೀಸರು ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದರೋಡೆಕೋರರು ತಪ್ಪಿಸಿಕೊಳ್ಳಲು ಹೋಗಿ ಸಿಕ್ಕಿಬಿದ್ದ ದೃಶ್ಯ ವೈರಲ್​ ಆಗಿದೆ. ಹಾಡಹಗಲೇ ದರೋಡೆಗೆ ಯತ್ನಿಸಿರುವ ಪ್ರಕರಣ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net