ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ

advocate murder
Published on

ವಿಜಯನಗರ: ಹಾಡಹಗಲೇ ಕೋರ್ಟ್ ಆವರಣದಲ್ಲಿ ವಕೀಲರೊಬ್ಬರನ್ನು ಯುವಕನೊಬ್ಬ ಭೀಕರವಾಗಿ ಕೊಂದಿರುವ ದುರ್ಘಟನೆ ಶನಿವಾರ ಬೆಳಗ್ಗೆ ಜಿಲ್ಲೆಯಲ್ಲಿ ಸಂಭವಿಸಿದೆ.

ವಕೀಲ ಡಾ.ತಾರಿಹಳ್ಳಿ ವೆಂಕಟೇಶ್ ಕೊಲೆಯಾದವರು. ಕೋರ್ಟ್​ ಆವರಣದಲ್ಲೇ ಡಾ.ತಾರಿಹಳ್ಳಿ ವೆಂಕಟೇಶ್ ಅವರನ್ನ ಮನೋಜ್ ಎಂಬ ಯುವಕ ಮಚ್ಚಿನಿಂದ ಕೊಚ್ಚಿಹಾಕಿದ್ದಾನೆ. ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಕೀಲ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

ಡಾ.ತಾರಿಹಳ್ಳಿ ವೆಂಕಟೇಶ್ ವಕೀಲ ಮಾತ್ರವಲ್ಲ ಕಾಂಗ್ರೆಸ್ ಮುಖಂಡರೂ ಆಗಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿ ಮನೋಜ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾನೂನಿನ ಸುವ್ಯವಸ್ಥೆ ಕಾಪಾಡುತ್ತಿದ್ದ ನ್ಯಾಯಾಲಯದ ಆವರಣದಲ್ಲೇ ಕರ್ತವ್ಯನಿರತ ವಕೀಲನನ್ನ ಮಾರಕಾಸ್ತ್ರದಿಂದ ಕೊಲೆ ಮಾಡಿದ್ದನ್ನ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net