

ಬೆಂಗಳೂರು: ಹಲಸೂರು ಗೇಟ್ನ ನಗರ್ತಪೇಟೆಯ ಅಂಗಡಿಯೊಂದರ ಮೇಲೆ 6 ಜನರ ಪೊಲೀಸ್ ತಂಡ ದಾಳಿ ನಡೆಸಿದ್ದರ ಅಸಲಿಯತ್ತು ಸಿಸಿ ಕ್ಯಾಮರಾದಲ್ಲಿ ಬಯಲಾಗಿದೆ.
ಚಿನ್ನಭರಣ ಪಾಲಿಶ್ ಮಾಡುವ ಗೀತಾ ಜುವೆಲ್ಲರಿ ಮಳಿಗೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಕಲಿ ಚಿನ್ನ ಮಾರಾಟ ಮಾಡಲಾಗುತ್ತಿದೆ ಎಂದು ದಾಳಿ ನಡೆಸಿದ ತಂಡವು ಭಾರೀ ಪ್ರಮಾಣದಲ್ಲಿ ವಂಚಿಸಿ ಸಿಕ್ಕಿಬಿದ್ದಿದೆ. ಅಸಲಿಗೆ ಆ ತಂಡ ಪೊಲೀಸ್ ಅಲ್ಲವೇ ಅಲ್ಲ.
ದಾಳಿ ವೇಳೆ ಕೋಲ್ಕತ್ತಾದಲ್ಲಿದ್ದ ಅಂಗಡಿ ಮಾಲೀಕನಿಗೆ ಕರೆ ಮಾಡಿದ ನಕಲಿ ಪೊಲೀಸರು, 'ನಿಮ್ಮ ಅಂಗಡಿ ಮೇಲೆ ರೇಡ್ ಮಾಡಿದ್ದೇವೆ. ದಾಳಿ ವೇಳೆ ಸಿಕ್ಕ ದಾಖಲೆ ಬಗ್ಗೆ ವಿಚಾರಣೆ ಆಗಬೇಕಿದೆ. ಪೊಲೀಸ್ ಠಾಣೆಗೆ ಬನ್ನಿ' ಎಂದಿದ್ದರು. ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಗೀತಾ ಜುವೆಲ್ಲರ್ ಮಾಲೀಕ ಕಾರ್ತಿಕ್, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಳಿ ಬಗ್ಗೆ ವಿಚಾರಿಸಿದಾಗ ಗೊತ್ತಾಯ್ತು ಅದು ನಕಲಿ ಪೊಲೀಸರ ಕೈಚಳಕ ಎಂದು.