ಮೆಟ್ರೋದಲ್ಲಿ ರೈತನಿಗೆ ಅಪಮಾನ; ಅರ್ಧಗಂಟೆಯಲ್ಲೇ ಸೆಕ್ಯೂರಿಟಿ ವಜಾ

Untitled-design-2024-02-26T121209.699
Published on

ಬೆಂಗಳೂರು: ರಾಜಾಜಿನಗರ ಮೆಟ್ರೋ ಸಿಬ್ಬಂದಿಗಳು ಬಟ್ಟೆ ಕ್ಲೀನ್​ ಆಗಿಲ್ಲ ಎಂದು ರೈತನನ್ನು ಒಳಗೆ ಬಿಡದೆ ತಡೆದಿದ್ದರು. ಈ ಘಟನೆಯ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೆಟ್ರೋ ಸಿಬ್ಬಂದಿಗಳ ಅತಿರೇಕದ ವರ್ತನೆಗೆ ಕೂಡಲೇ ಬ್ರೇಕ್ ಬೀಳಬೇಕು ಎಂದಿದ್ದೇ ತಡ ಇದೀಗ ಬಿಎಂಆರ್​ಸಿಎಲ್​ ಸೆಕ್ಯೂರಿಟಿಯನ್ನು ಘಟನೆ ನಡೆದ ಅರ್ಧಗಂಟೆಯೊಳಗೆ ವಜಾಗೊಳಿಸಿದೆ.

ಮಾನವೀಯತೆಯನ್ನೇ ಮರೆತು ಬಿಟ್ಟರಾ ನಮ್ಮ‌ ಮೆಟ್ರೋ ಸಿಬ್ಬಂದಿ? ದೇಶದ ಬೆನ್ನೆಲುಬು ರೈತನಿಗೆ ಬೆಂಗಳೂರು ಮೆಟ್ರೋದಲ್ಲಿ ಅವಮಾನ ಮಾಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

ಟಿಫ್ ಟಾಪ್ ಆಗಿ ಡ್ರೆಸ್ ಹಾಕೊಂಡ್ರೆ ಮಾತ್ರ ಮೆಟ್ರೋದೊಳಗೆ ಎಂಟ್ರಿನಾ? ಬಟ್ಟೆ ಕ್ಲೀನ್ ಇಲ್ಲ ಅಂತ ರೈತನನ್ನು ಮೆಟ್ರೋ ಒಳಗೆ ಬಿಡದ ಸಿಬ್ಬಂದಿ. ರಾಜಾಜಿನಗರ ನಮ್ಮ ಮೆಟ್ರೋ ಸಿಬ್ಬಂದಿಯಿಂದ ಅತಿರೇಕದ ವರ್ತನೆ. ಬಡ ರೈತನ ಮೇಲೆ‌ ಸಿಬ್ಬಂದಿಯ ದುರಾಹಂಕಾರದ‌ ವರ್ತನೆ ದೃಶ್ಯ ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net