

ಹೈದರಾಬಾದ್: ಆಂಧ್ರದ ನಂದ್ಯಾಲ ಜಿಲ್ಲೆ ಆತ್ಮಕೂರು ಮಂಡಲ ವೆಂಕಟಾಪುರದಲ್ಲಿ ಬೇವಿನ ಮರದಿಂದ ಲೀಟರ್ಗಟ್ಟಲೆ ಹಾಲಿನಂಥ ದ್ರವ ಸುರಿಯುತ್ತಿದೆ. ಈ ಕೌತುಕ ನೋಡಲು ಅಪಾರ ಸಂಖ್ಯೆಯಲ್ಲಿ ಜನಸಾಗರ ಹರಿದು ಬರುತ್ತಿದೆ. ಕೆಲವರು ಮರಕ್ಕೆ ಅರಿಶಿನ, ಕುಂಕುಮ, ತೆಂಗಿನ ಕಾಯಿ ಜೊತೆ ಬಂದು ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಿದ್ದಾರೆ.
ವೆಂಕಟಾಪುರದ ನಡುವ ಇರುವ ಬೇವಿನ ಮರದಲ್ಲಿ ಭಾನುವಾರ(ಜು.29) ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಹಾಲಿನಂಥ ದ್ರವ ತೊಟ್ಟಿಕ್ಕುತ್ತಿತ್ತು. ಮರದ ಮೇಲಿನಿಂದ ಕೆಳಕ್ಕೆ ಬಿಳಿ ದ್ರವ ಜಿನುಗುತ್ತಿದ್ದು, ಇದನ್ನು ಜನ ಗಮನಿಸಿದರು. ಈ ವಿಷಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ ಜನರಿಗೆ ಶರವೇಗದಲ್ಲಿ ಹರಡಿತ್ತು. ಇದರಿಂದಾಗಿ ಅಪಾರ ಸಂಖ್ಯೆಯಲ್ಲಿ ಜನರು ಅಲ್ಲಿ ನೆರೆದು ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಂಡರು. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗಿದೆ.
ಇತ್ತೀಚೆಗಷ್ಟೇ ನಂದ್ಯಾಲ್ ಜಿಲ್ಲೆಯಲ್ಲಿ ನಾಗರಹಾವು ಶಿವಲಿಂಗದ ಸುತ್ತ ತಿರುಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು.