ಕೊಹ್ಲಿ ಹೀಗೆ ಮಾಡಿದ್ದು ಇಷ್ಟವಾಗಲಿಲ್ಲ.. ಬೆಡ್​ರೂಮ್ ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ!

virat
Published on

ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ- ನಟಿ ಅನುಷ್ಕಾ ಶರ್ಮಾ ಜೋಡಿಯ ಕ್ರೇಜ್ ಹೇಳತೀರದು. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಕೊಹ್ಲಿ ಕ್ರಿಕೆಟ್ ನಲ್ಲಿ ಸೂಪರ್ ಸ್ಟಾರ್ ಆಗಿದ್ದರೆ, ಅನುಷ್ಕಾ ಸಿನಿಮಾಗಳಲ್ಲಿ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು. ಅನುಷ್ಕಾ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಕ್ರಿಕೆಟ್​ನಲ್ಲಿ ರನ್ ಮೆಷಿನ್ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ ಆಟದ ನಂತರ ತಮ್ಮ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಪಂದ್ಯಗಳು ಇಲ್ಲದಿದ್ದಾಗ ಅವರು ಕುಟುಂಬದೊಂದಿಗೆ ಪ್ರವಾಸಕ್ಕೆ ಹೋಗುತ್ತಾರೆ.

ಇತ್ತೀಚೆಗಷ್ಟೇ ಈ ಜೋಡಿ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅನುಷ್ಕಾ ಶರ್ಮಾ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ಮಲಗುವ ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ.

ನಾವು ಬೇಗ ಮಲಗುತ್ತೇವೆ. ಆದರೆ ಕೊಯ್ಲಿ ಮುಂಜಾನೆ 3 ಗಂಟೆಗೆ ಏಳುತ್ತಾರೆ. ಅದು ನನಗೆ ಇಷ್ಟವಿಲ್ಲ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

ವಾಮಿಕಾ ಹುಟ್ಟಿದ ನಂತರ ಕೊಯ್ಲಿ ದಿನಚರಿ ಬದಲಾಗಿದೆ. ಅವರು ಯಾವುದೇ ಪಾರ್ಟಿಗಳಿಗೆ ಹೋಗುತ್ತಿಲ್ಲ. ವೈಯಕ್ತಿಕ ಜೀವನಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದರು.

ಕೊಹ್ಲಿ ಮತ್ತು ತಾನು ಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಇಷ್ಟಪಡುತ್ತೇವೆ. ಪ್ರತಿಯೊಂದು ಚಿಕ್ಕ ವಿಷಯಗಳಲ್ಲಿಯೂ ಸಂತೋಷವನ್ನು ಕಂಡುಕೊಳ್ಳುತ್ತೇವೆ ಎಂದು ಅನುಷ್ಕಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net