ರಷ್ಯಾ-ಉಕ್ರೇನ್ ಯುದ್ಧ: ಹರಿಯಾಣ ಯುವಕ ಬಲಿ

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದ್ದು, ಈ ಯುದ್ಧದಲ್ಲಿ ಭಾಗವಹಿಸಿದ್ದ ಹರಿಯಾಣದ ಕೈತಾಲ್ ಜಿಲ್ಲೆ ಮಾತೋರ್ ಗ್ರಾಮದ ರವಿ ಮೌನ್ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚೀನಾದಲ್ಲಿ ವೀಡಿಯೋ ಮಾಡಿ ಟ್ರೋಲ್​ ಆಗುತ್ತಿರುವ ಭಾರತೀಯ ಇನ್ಫ್ಲೂಯೆನ್ಸರ್..!

ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಈ ವಿಷಯವನ್ನು ಪ್ರಕಟಿಸಿದೆ. ರವಿ ಸಾವಿನ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ.

ಕಳೆದ ಐದು ತಿಂಗಳಿನಿಂದ ರಶ್ಯದಲ್ಲಿರುವ ರವಿ ಎಲ್ಲಿದ್ದಾರೆ ಎಂಬುದೇ ತಿಳಿಯದ ಕಾರಣ ಹರಿಯಾಣದಲ್ಲಿರುವ ರವಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ, ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸಲು ರವಿಯನ್ನು ರಷ್ಯಾ ಸೇನೆ ಒತ್ತಾಯಿಸಿದೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ.

ರವಿ ಅವರ ತಾಯಿ ಡಿಎನ್‌ಎ ವರದಿಯನ್ನು ಕಳುಹಿಸಿದರೆ, ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ಅವರ ಕುಟುಂಬ ಸದಸ್ಯರಿಗೆ ತಿಳಿಸಿದೆ. ಆದರೆ ರವಿ ಅವರ ತಾಯಿ ಈಗಾಗಲೇ ನಿಧನರಾಗಿದ್ದಾರೆ. ರವಿ ಅವರ ತಂದೆ ಕೂಡ ತೀವ್ರ ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷೆ ನಡೆಸಿ ವರದಿ ಸಲ್ಲಿಸಲು ಸಿದ್ಧ ಎಂದು ರವಿ ಸಹೋದರ ಅಜಯ್ ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದಾರೆ. ಈ ಸಂಬಂಧ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಜುಲೈ 27ರಂದು ಈ ಮೇಲ್ ಮೂಲಕ ಮಾಹಿತಿ ನೀಡಲಾಗಿತ್ತು.

ಈ ವರ್ಷ ಜನವರಿ 23 ರಂದು ರವಿ ಗ್ರಾಮದ ಐವರು ಸ್ನೇಹಿತರೊಂದಿಗೆ ಉದ್ಯೋಗ ಅರಸಿ ರಷ್ಯಾಕ್ಕೆ ತೆರಳಿದ್ದರು ಎನ್ನಲಾಗಿದೆ. ಹರಿಯಾಣದಲ್ಲಿ ತಮ್ಮ ಜಮೀನು ಮಾರಾಟ ಮಾಡಿ ಬಂದ ಹಣದಲ್ಲಿ ರವಿಯನ್ನು ರಷ್ಯಾಕ್ಕೆ ಕಳುಹಿಸಿದ್ದೇವೆ ಎಂದು ಕುಟುಂಬಸ್ಥರು ವಿವರಿಸಿದ್ದಾರೆ. ಆದರೆ ರವಿಗೆ ರಷ್ಯಾದಲ್ಲಿ ಡ್ರೈವರ್ ಕೆಲಸ ಕೊಡಿಸುವುದಾಗಿ ಏಜೆಂಟ್ ಭರವಸೆ ನೀಡಿದ್ದನ್ನು ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ನೆನಪಿಸಿಕೊಂಡಿದ್ದಾರೆ.

ಉಕ್ರೇನ್‌ನೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಭಾಗವಹಿಸುವಂತೆ ರಷ್ಯಾದ ಸೇನೆಯು ರವಿಯ ಮೇಲೆ ಒತ್ತಡ ಹೇರಿದೆ. ಈ ಯುದ್ಧದಲ್ಲಿ ಭಾಗವಹಿಸದಿದ್ದರೆ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ. ಹೀಗಾಗಿ ಯುದ್ಧದಲ್ಲಿ ರವಿ ಭಾಗವಹಿಸಿದ್ದರು ಎಂದು ರವಿ ಕುಟುಂಬಸ್ಥರು ನೋವಿನಿಂದ ಹೇಳಿದರು. ಮತ್ತೊಂದೆಡೆ, ರವಿ ಅವರ ಮೃತದೇಹವನ್ನು ಆದಷ್ಟು ಬೇಗ ಮನೆಗೆ ತರುವಂತೆ ಅವರ ಕುಟುಂಬ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.

ಯುಪಿಎಸ್ಸಿ ಆಕಾಂಕ್ಷಿಗಳ ಮೃತ್ಯು: ಲೋಕಸಭೆಯಲ್ಲಿ ಚರ್ಚೆಗೆ ಕಾಂಗ್ರೆಸ್ ಸಜ್ಜು!

Share This Article

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…

Chanakya Niti: ದಾಂಪತ್ಯ ಜೀವನ ಸುಂದರವಾಗಿರಲು 4 ವಿಷಯಗಳನ್ನು ಅನುಸರಿಸಿ….

ಬೆಂಗಳೂರು:  ವಿದ್ವಾಂಸರಲ್ಲಿ ಚಾಣಕ್ಯರು ( Chanakya Niti ) ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ…

Tamarind Juice : ಹುಣಸೆ ಹಣ್ಣಿನ ರಸದ ಅದ್ಭುತ ಪ್ರಯೋಜನಗಳಿವು…

ಬೆಂಗಳೂರು:  ಹುಣಸೆಹಣ್ಣು ಭಾರತೀಯ ಪಾಕಪದ್ಧತಿಯಲ್ಲಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಹುಣಸೆಹಣ್ಣು ಸ್ವಲ್ಪ ಸಿಹಿ ಮತ್ತು ಸ್ವಲ್ಪ…