ಯುಪಿಎಸ್‌ಸಿ ಆಕಾಂಕ್ಷಿಗಳ ಮೃತ್ಯು: ದುರ್ಘಟನೆಯ ಹಿಂದಿನ ದೃಶ್ಯಗಳ ವಿಡಿಯೋ ವೈರಲ್

ias 2
Published on

ನವದೆಹಲಿ: ದೆಹಲಿಯಲ್ಲಿ ಭಾರಿ ಮಳೆಗೆ ಹಳೆಯ ರಾಜೇಂದ್ರನಗರದ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ನ ನೆಲಮಾಳಿಗೆಗೆ ಭಾರಿ ಪ್ರಮಾಣದ ನೀರು ನುಗ್ಗಿ ಮೂವರು ನಾಗರಿಕ ಆಡಳಿತ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಕೋಚಿಂಗ್​ ಸೆಂಟರ್​ನ ಕಟ್ಟಡಕ್ಕೆ ನೀರು ನುಗ್ಗುತ್ತಿರುವ ಮತ್ತು ನೆಲಮಾಳಿಗೆ ಸೇರಿ ವಿವಿಧೆಡೆಯಿಂದ ಅಲ್ಲಿದ್ದವರು ತಪ್ಪಿಸಿಕೊಂಡು ಬರುತ್ತಿರುವ ದೃಶ್ಯದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವೀಡಿಯೋದಲ್ಲಿ ಪ್ರವಾಹದ ನೀರು ನೆಲಮಾಳಿಗೆಯನ್ನು ಪ್ರವೇಶಿಸುತ್ತಿದ್ದಂತೆ, ವಿದ್ಯಾರ್ಥಿಗಳು ಮೆಟ್ಟಿಲುಗಳ ಮೂಲಕ ನೀರಿನಿಂದ ಹೊರಬರುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳು ಬೇಗನೆ ಒಳಗೆ ಬಂದರು. ಒಬ್ಬ ವ್ಯಕ್ತಿ ಬೇಗ ಹೊರಗೆ ಬರಲು ಸೂಚಿಸುತ್ತಾನೆ.ಒಳಗೆ ಬೇರೆ ಯಾರಾದರೂ ಇದ್ದಾರೆಯೇ? ಎಂಬ ಪ್ರಶ್ನೆಯೂ ಈ ವಿಡಿಯೋದಲ್ಲಿ ಕಂಡುಬರುತ್ತದೆ. ವಿದ್ಯಾರ್ಥಿಗಳು ಹೊರಬರುವ ಮುನ್ನವೇ ಪ್ರವಾಹದ ನೀರು ವಿದ್ಯಾರ್ಥಿಗಳನ್ನು ಸುತ್ತುವರೆದಿದೆ ಎಂದು ಪೊಲೀಸರು ಹೇಳಲಾಗುತ್ತಿದೆ.

ಶನಿವಾರ(ಜು.27) ಸಂಜೆ ಸುರಿದ ಭಾರಿ ಮಳೆಗೆ ಐಎಎಸ್​ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ತಾನಿಯಾ ಸೋನಿ (25), ಶ್ರಿಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (25) ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net