ಚಿನ್ನಾಭರಣಕ್ಕಾಗಿ ದುಷ್ಕರ್ಮಿಗಳಿಂದ ಹೀನಾಯ ಕೃತ್ಯ!

murder
Published on

ಮಂಡ್ಯ: ಚಿನ್ನಾಭರಣದ ಆಸೆಗೆ ದುಷ್ಕರ್ಮಿಗಳ ತಂಡವೊಂದು ವೃದ್ಧೆಯನ್ನು ಕೊಲೆ ಮಾಡಿ, ಲಕ್ಷಾಂತರ ರೂ. ಬೆಲೆಬಾಳುವ ಆಭರಣ ದೋಚಿ ಪರಾರಿಯಾಗಿದೆ.

ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿಯ ಕರಿಕ್ಯಾತನಹಳ್ಳಿಯಲ್ಲಿ ಸೋಮವಾರ ತಡರಾತ್ರಿ ಹನುಮೇಗೌಡ ಎಂಬುವರ ಪತ್ನಿ ಜಯಮ್ಮ(70) ಅವರ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳ ತಂಡ ಕೃತ್ಯ ಎಸಗಿದೆ. ಇದನ್ನೂ ಓದಿರಿ ಕರೊನಾಗೆ ಹೆದರಿ ಬಸ್​ನಲ್ಲೇ ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್​ಟೇಬಲ್​ ಆತ್ಮಹತ್ಯೆ

ವೃದ್ಧೆಯನ್ನು ಕೊಂದು ಮಾಂಗಲ್ಯ ಸರ, ಓಲೆ, ಜುಮುಕಿ ಸೇರಿ ಸುಮಾರು‌ 75 ಗ್ರಾಂ ತೂಕದ ಚಿನ್ನಾಭರಣ ದೋಚಿದ್ದಾರೆ. ಮಂಗಳವಾರ ಬೆಳಗ್ಗೆ ಕುಟುಂಬದ ಇತರ ಸದಸ್ಯರಿಗೆ ವಿಷಯ ತಿಳಿದಿದೆ. ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net