More

    ಕರೊನಾಗೆ ಹೆದರಿ ಬಸ್​ನಲ್ಲೇ ನೇಣುಬಿಗಿದುಕೊಂಡು ಪೊಲೀಸ್ ಕಾನ್ಸ್​ಟೇಬಲ್​ ಆತ್ಮಹತ್ಯೆ

    ಬೆಂಗಳೂರು: ಮಹಾಮಾರಿ ಕರೊನಾ ವೈರಸ್​ಗೆ ಹೆದರಿ ಪೊಲೀಸ್​ ಕಾನ್ಸ್​ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿವಿ ರಾಮನ್ ನಗರದಲ್ಲಿ ನಡೆದಿದೆ.

    ಪೊಲೀಸ್​ ಇಲಾಖೆಯಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಂಡಮ್​ ಆಗಿ ಪರೀಕ್ಷೆ ಮಾಡಲು ಇಲಾಖೆ ನಿರ್ಧರಿಸಿ, ಅದಂರಂತೆ ಪರೀಕ್ಷೆ ಮಾಡಲಾಗಿತ್ತು. 50 ವರ್ಷದ ಕೆಎಸ್​ಆರ್​ಪಿ ಹೆಡ್​ ಕಾನ್ಸ್​ಟೇಬಲ್ ಅವರಿಗೆ ನಿನ್ನೆ ಸಂಜೆಯಷ್ಟೇ ಕರೊನಾ ಪಾಸಿಟಿವ್ ಬಂದಿತ್ತು. ಇದನ್ನೂ ಓದಿ: ಸಚಿವ ಸುಧಾಕರ್ ತಂದೆಗೆ ಕರೊನಾ ಸೋಂಕು ಬೆನ್ನಲ್ಲೇ ಪತ್ನಿ, ಮಗಳಿಗೂ ಮಹಾಮಾರಿ ಕಂಟಕ

    ಈ ಬಗ್ಗೆ ಅವರಿಗೆ ಮಾಹಿತಿ ನೀಡಿ ಇಂದು ಸಿವಿ ರಾಮನ್​ ಆಸ್ಪತ್ರೆಗೆ ಸ್ಥಳಾಂತರ ಮಾಡುವುದಾಗಿ ವಿಷಯ ತಿಳಿಸಿದ್ದರು. ಆದರೆ, ಕರೊನಾಗೆ ಹೆದರಿದ ಪೇದೆ ಕೆಎಸ್​ಆರ್​ಪಿ ಬಸ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಪತ್ನಿ ಹತ್ಯೆಗೈದು ವಿಮಾನದಲ್ಲಿ ಕೋಲ್ಕತಗೆ ತೆರಳಿ ಅತ್ತೆಯನ್ನು ಕೊಂದು ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts