More

    ₹ 40 ಕೋಟಿ ಕೊಬ್ಬರಿ ಹಣ ಬಾಕಿ

    | ಸೋರಲಮಾವು ಶ್ರೀಹರ್ಷ ತುಮಕೂರು

    ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿರುವ ಕೊಬ್ಬರಿ ಹಣ ಕೈಸೇರುವುದು ತಡವಾಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಎಂಎಸ್​ಪಿ ಜತೆಗೆ ರಾಜ್ಯ ಸರ್ಕಾರ ಘೊಷಿಸಿರುವ ಕ್ವಿಂಟಾಲ್​ಗೆ 1500ರೂ. ಕೊಬ್ಬರಿ ಪ್ರೋತ್ಸಾಹಧನ ತೆಂಗು ಬೆಳೆಗಾರರ ಕಷ್ಟಕ್ಕಿಲ್ಲದಂತಾಗಿದೆ.

    ಈವರೆಗೂ ರಾಜ್ಯದ 85 ಕೇಂದ್ರಗಳಲ್ಲಿ ಖರೀದಿಯಾಗಿರುವ 35,744 ರೈತರಿಗೆ 40 ಕೋಟಿ ರೂ.ಗಿಂತಲೂ ಹೆಚ್ಚು ಪ್ರೋತ್ಸಾಹಧನವನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಅತೀ ಹೆಚ್ಚು ಖರೀದಿ ನಡೆಯುತ್ತಿರುವ ತುಮಕೂರು ಜಿಲ್ಲೆಯಲ್ಲಿ 8500 ರೈತರಿಗೆ 15.36 ಕೋಟಿ ರೂ. ಹಾಗೂ ಹಾಸನ ಜಿಲ್ಲೆಯಲ್ಲಿ 9000 ರೈತರಿಗೆ 16.50 ಕೋಟಿ ರೂ. ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಇನ್ನು 15 ಜಿಲ್ಲೆಗಳಲ್ಲಿಯೂ ಈವರೆಗೆ ಯಾರಿಗೂ ಪ್ರೋತ್ಸಾಹಧನ ಸಿಕ್ಕಿಲ್ಲ. ತುಮಕೂರು, ಹಾಸನ ಸೇರಿ ರಾಜ್ಯದ 17 ಜಿಲ್ಲೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ನಫೆಡ್, ಕೃಷಿ ಮಾರಾಟ ಮಂಡಳ ಮೂಲಕ ಕೊಬ್ಬರಿ ಖರೀದಿ ಆರಂಭವಾಗಿದ್ದು, ಏ.13ರ ವರೆಗೆ ಮಾರಾಟ ಮಾಡಿರುವ ರೈತರ ಖಾತೆಗಳಿಗೆ ಮಾತ್ರ ಎಂಎಸ್​ಪಿ ಹಣ ಬಂದಿದೆ,

    ಏ.13ರ ನಂತರ ಖರೀದಿಸಿರುವ ಕೊಬ್ಬರಿಗೆ ಎಂಎಸ್​ಪಿ ಹಣ ಕೂಡ ಬಿಡುಗಡೆಯಾಗದೆ ಚಾತಕ ಪಕ್ಷಿಯಂತೆ ಕಾಯು ವಂತಾಗಿದೆ. ಆದರೆ, ರಾಜ್ಯ ಸರ್ಕಾರದ ಘೊಷಿಸಿರುವ 1500 ರೂ. ಪ್ರೋತ್ಸಾಹಧನದ ಬಗ್ಗೆ ಈವರೆಗೂ ರೈತರಿಗೆ ಯಾವುದೇ ಮಾಹಿತಿ ಇಲ್ಲ.ಪ್ರಸ್ತುತ ಕ್ವಿಂಟಾಲ್ ಕೊಬ್ಬರಿಗೆ ಎಂಎಸ್​ಪಿ 12000 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ 1500 ಒಟ್ಟು 13500ರೂ. ಲಭ್ಯವಾಗುತ್ತಿದೆ.

    ಹೆಚ್ಚಾಗುತ್ತಿಲ್ಲ ಬೆಲೆ!: ನಫೆಡ್ ಮೂಲಕ ರೈತರು ಬೆಳೆದ ಶೇ.25ರಷ್ಟು ಕೊಬ್ಬರಿಯನ್ನು ಸರ್ಕಾರವೇ ಖರೀದಿ ಮಾಡುತ್ತಿದೆಯಾದರೂ ಇನ್ನುಳಿದ ಶೇ.75ರಷ್ಟು ಕೊಬ್ಬರಿ ಮುಕ್ತ ಮಾರುಕಟ್ಟೆಯನ್ನೇ ನೆಚ್ಚಿಕೊಂಡಿದೆ. ಈ ವ್ಯಾಪಾರಿ ಮರ್ಮವನ್ನು ಅರಿತಿರುವ ವ್ಯಾಪಾರಿಗಳು ಕೊಬ್ಬರಿಗೆ ಬೇಡಿಕೆಯಿದ್ದರೂ ಮಾರುಕಟ್ಟೆಯಲ್ಲಿ ದರವನ್ನು ಸ್ಥಿರವಾಗಿಟ್ಟುಕೊಂಡಿರುವುದು ರೈತರ ಆತಂಕ ಹೆಚ್ಚಿಸುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿಗೆ 8700ರೂ. ಮಾತ್ರ ಸಿಗುತ್ತಿದ್ದು ನಫೆಡ್ ಆರಂಭವಾದಾಗಲೂ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗದಿರುವುದು ಇತಿಹಾಸದಲ್ಲಿ ಇದೆ ಮೊದಲೆನ್ನಿಸಿದೆ. ಸರ್ಕಾರ ರೈತರು ಬೆಳೆದ ಎಲ್ಲ ಕೊಬ್ಬರಿಯನ್ನು ಮಿತಿಇಲ್ಲದೆ ಖರೀದಿ ಮಾಡಿದರಷ್ಟೇ ಸಮಸ್ಯೆಗೆ ಪರಿಹಾರವಾಗಬಲ್ಲದಾಗಿದೆ.

    ಬೆಂಗಳೂರಿನಲ್ಲಿ ಲಾಂಗ್‌ನಿಂದ ಹೊಡೆದು ರೌಡಿಶೀಟರ್ ಬರ್ಬರ ಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts