ಮಹಿಳೆಯ ಮೈಮುಟ್ಟಿದ ಕಾಮುಕ... ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ!

arrested
Published on

ಬೆಂಗಳೂರು: ತನ್ನಷ್ಟಕ್ಕೆ ತಾನು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಬಳಿಗೆ ಬೈಕ್​ನಲ್ಲಿ ಬಂದ 18 ವರ್ಷದ ಯುವಕನೊಬ್ಬ ಆಕೆಯ ಮೈಮುಟ್ಟಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

ಗಂಗಾನಗರ ನಿವಾಸಿ 40 ವರ್ಷದ ಮಹಿಳೆಯು ಜೂ. 20ರ ಮಧ್ಯಾಹ್ನ 12ರ ಸುಮಾರಿನಲ್ಲಿ ದಿನಸಿ ಸಾಮಗ್ರಿ ಖರೀದಿಸಿ, ಗಿಡ್ಡಪ್ಪ ಬ್ಲಾಕ್​ ದೃವ ಅಪಾರ್ಟ್​ಮೆಂಟ್​ ಬಳಿ ರಸ್ತೆಬದಿ ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ಸ್ಕೂಟರ್​ನಲ್ಲಿ ಬಂದ ಆರೋಪಿ ಲಕ್ಷ್ಮಯ್ಯ ಬ್ಲಾಕ್​ ನಿವಾಸಿ ಸಂತೋಷ್ (18), ಮಹಿಳೆಯ ಮೈಮುಟ್ಟಿ ಅನುಚಿತವಾಗಿ ವರ್ತಿಸಿ ಪರಾರಿಯಾಗಿದ್ದ. ಇದನ್ನೂ ಓದಿರಿ ರಾಜವಂಶಸ್ಥ ಯದುವೀರ್ ವಿರುದ್ಧವೇ ತಿರುಗಿಬಿದ್ದ ಸಂಘಟನೆಗಳು!

ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ತನಿಖೆ ಕೈಗೊಂಡ ಆರ್​.ಟಿ. ನಗರ ಪೊಲೀಸರು ಘಟನಾ ಸ್ಥಳದ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದರು. ಆರೋಪಿಯ ಮುಖಚಹರೆ ಹಾಗೂ ಸ್ಕೂಟರ್​ ನಂಬರ್​ ಸೆರೆಯಾಗಿತ್ತು. ಅದನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಈ ಹಿಂದೆಯೂ ಕೃತ್ಯ ಎಸಗಿರುವ ಶಂಕೆ ಇದೆ. ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net