ಸಾಧು ಮತ್ತು ತೋಳ

ವಿಜಯವಾಣಿ-1-2
Published on

ಅಧ್ಯಯನ ಶೀಲನಾದ ಸಾಧು ಮಹಾತ್ಮನೋರ್ವ, ಗ್ರಂಥಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಿಂದ ಸಂಚರಿಸುತ್ತ ಹಳ್ಳಿಗೆ ಏಕರಾತ್ರಿ, ಪಟ್ಟಣಕ್ಕೆ ಪಂಚರಾತ್ರಿ ಜ್ಞಾನೋಪದೇಶಗೈಯ್ಯುತ್ತ ನಡೆದಿದ್ದ. ಅಡವಿಯಲ್ಲಿ ನಡೆದು ಹೋಗುವಾಗ ಎದುರುಗಡೆ ತೋಳವೊಂದು ಓಡೋಡಿ ಬಂದು ಸಾಧು ಮಹಾತ್ಮನ ಪಾದಕ್ಕೆರಗಿ ಕೇಳಿಕೊಂಡಿತು - ‘ಸ್ವಾಮಿ! ತಾವು ದಯಾನಿಧಿಗಳು, ನನ್ನನ್ನು ರಕ್ಷಿಸಬೇಕು, ಬೇಟೆಗಾರನೊಬ್ಬ ನನ್ನನ್ನು ಬೇಟೆಯಾಡಲು ಹಿಂದಿನಿಂದ ಬರುತ್ತಿದ್ದಾನೆ. ನಾನೀಗ ಅವನ ಕಣ್ಣಿಗೆ ಕಾಣದಂತೆ ತಪ್ಪಿಸಿಕೊಂಡು ಬಂದಿದ್ದೇನೆ. ನನ್ನ ಪ್ರಾಣ ಉಳಿಸಿ ಸ್ವಾಮಿ!’ ಎಂದು ಆರ್ತಸ್ವರದಿಂದ ಬೇಡಿಕೊಂಡಿತು.

‘ಪೊರೆ ಪೊರ್ದಿದರನೆಂದು ಬೆಸಸುವ ಎಂಬ ಬಲ್ಲವರ ವಾಣಿಯಂತೆ ಆ ಸಾಧು ಮಹಾತ್ಮ ಶರಣು ಬಂದವರನ್ನು ಆಪತ್ಕಾಲದಲ್ಲಿ ರಕ್ಷಿಸಬೇಕೆಂದು ಗಿಡದಡಿಯಲ್ಲಿ ತನ್ನ ತಲೆಮೇಲಿದ್ದ ಗ್ರಂಥಗಳ ಗಂಟನ್ನು ಇಟ್ಟು ಗ್ರಂಥಗಳನ್ನಿಡುವ ಚೀಲವನ್ನು ಖಾಲಿ ಮಾಡಿ ಈ ತೋಳಕ್ಕೆ ಹೇಳಿದರು: ‘ನೋಡು! ನೀನು ನನಗೇನೂ ಅಪಾಯ ಮಾಡುವದಿಲ್ಲವೆಂದು ಮಾತು ಕೊಟ್ಟರೆ ಮಾತ್ರ ನಿನ್ನ ರಕ್ಷಣೆ ಮಾಡುತ್ತೇನೆ ಒಪ್ಪಿಗೆಯಾ?’. ತೋಳ ಹೇಳಿತು: ‘ನನ್ನಾಣೆ, ದೇವರಾಣೆ ನಿಮಗೇನೂ ತೊಂದರೆ ಮಾಡುವುದಿಲ್ಲ, ಬೇಗ ರಕ್ಷಣೆ ಕೊಡಿ ಸ್ವಾಮಿ!’. ಕರುಣಾಮಯಿಯಾದ ಸಾಧುಮಹಾತ್ಮ - ಪುಸ್ತಕವನ್ನಿರಿಸುವ ಚೀಲದಲ್ಲಿ ಆ ತೋಳವನ್ನು ಮಲಗಿಸಿ ಅದರ ಮೇಲೆ ಪುಸ್ತಕವನ್ನಿರಿಸಿಕೊಂಡು ಅಧ್ಯಯನ ಮಾಡಹತ್ತಿದ. ಆ ಕಡೆಯಿಂದ ಬೇಟೆಗಾರ ಓಡುತ್ತಾ ಓಡುತ್ತಾ ಸಾಧುಮಹಾತ್ಮನಲ್ಲಿಗೆ ಬಂದೇ ಬಿಟ್ಟ. ತೋಳವೊಂದು ನಿಮ್ಮ ಕಡೆಗೇ ಬಂತು,

ಅದು ಎಲ್ಲಿ ಹೋಯಿತ್ತು ಎಂದು ಪ್ರಶ್ನಿಸಿದ. ಸಾಧು ‘ನನಗೇನು ಗೊತ್ತಿಲ್ಲಪ್ಪಾ! ನಾನು ಸಂಚಾರಿ ಸಂನ್ಯಾಸಿ. ವಿಶ್ರಾಂತಿಗೆ ಕುಳಿತುಕೊಂಡಿದ್ದೇನೆ. ನನ್ನ ಹತ್ತಿರ ಏನೂ ಇಲ್ಲ, ನೋಡಿಕೊ, ಗ್ರಂಥಗಳಷ್ಟೇ ಇವೆ’ ಎಂದು ಉತ್ತರಿಸಿದ. ಆಗ ಆ ಬೇಟೆಗಾರ ಇವನಿಗೇನೂ ಗೊತ್ತಿಲ್ಲ ಎಂದು ಮರಳಿ ಹೊರಟು ಹೋದನು. ಆಗ ತೋಳವು, ಬೇಟೆಗಾರ ಹೋದ, ಕಟ್ಟಿದ ಚೀಲದ ಬಾಯಿ ತೆಗೆ ಎಂದು ಹೇಳಿತು. ಮುಂದೇನಾಯಿತು?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net