ಕ್ಯಾಮೆರಾ ಇರೋದನ್ನು ಮರೆತು ಲಿಫ್ಟ್​ನಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್​: ವೈರಲ್​ ವಿಡಿಯೋಗೆ ನೆಟ್ಟಿಗರ ತರಾಟೆ! Lovers

Lovers
Published on

Lovers : ಲಿಫ್ಟ್​ನಲ್ಲಿ ಕ್ಯಾಮೆರಾ ಇರುವುದನ್ನು ಮರೆತ ಪ್ರೇಮಿಗಳಿಬ್ಬರು ರೊಮ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ವಿಡಿಯೋದಲ್ಲಿ ಪ್ರೇಮಿಗಳಿಬ್ಬರು ಲಿಫ್ಟ್ ಒಳಗೆ ಚುಂಬಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋವನ್ನು 'ಜೋಕರ್ ಆಫ್ ಇಂಡಿಯಾ' ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಲಿಫ್ಟ್‌ನ ಒಳಗಡೆ ಇದ್ದ ಸಿಸಿಟಿವಿ ಕ್ಯಾಮೆರಾ ಸರೆಹಿಡಿದಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ.

ವಿಡಿಯೋದಲ್ಲಿ ಹದಿಹರೆಯದ ಹುಡುಗ ಮತ್ತು ಇಬ್ಬರು ಹುಡುಗಿಯರು ಲಿಫ್ಟ್‌ ಒಳಗೆ ಎಂಟ್ರಿಯಾಗುವುದರೊಂದಿಗೆ ವಿಡಿಯೋ ಶುರುವಾಗುತ್ತದೆ. ನಂತರ ಓರ್ವ ಹುಡುಗಿ ಮತ್ತು ಹುಡುಗ ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಇನ್ನೊಬ್ಬ ಹುಡುಗಿ ಅದನ್ನು ನೋಡುತ್ತಿರುವ ದೃಶ್ಯವು ಸಹ ವಿಡಿಯೋದಲ್ಲಿದೆ. ಲಿಫ್ಟ್​ ಒಳಗಡೆ ತಮ್ಮ ತಲೆಯ ಮೇಲಿನ ಮೂಲೆಯಲ್ಲಿ ಕ್ಯಾಮೆರಾ ಇರುವುದು ಅರಿವಿಗೆ ಬಾರದೇ ಲಿಫ್ಟ್​ ಒಳಗೆ ಪ್ರೇಮಿಗಳು ರೊಮ್ಯಾನ್ಸ್​ ಮಾಡಿದ್ದಾರೆ.

ಘಟನೆ ನಡೆದ ಸ್ಥಳ ಯಾವುದು ಅಂತ ಸ್ಪಷ್ಟವಾಗಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಓದಿನತ್ತ ಗಮನ ಹರಿಸಬೇಕಾದ ವಯಸ್ಸಿನಲ್ಲಿ ಇಂತಹ ನಡವಳಿಕೆ ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net