ಮಹಿಳಾ ವೈದ್ಯೆಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಮೂಲದ ವೈದ್ಯ..!

Doctor
Published on

ವಾಷಿಂಗ್ಟನ್​: ಭಾರತೀಯ ಮೂಲದ ವೈದ್ಯರೊಬ್ಬರು ಗುಂಡು ಹಾರಿಸಿ ಮಹಿಳಾ ವೈದ್ಯರೊಬ್ಬರನ್ನು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಘಟನೆಯು ಅಮೆರಿಕದ ಟೆಕ್ಸಾಸ್​ನಲ್ಲಿ ಮಂಗಳವಾರ ನಡೆದಿರುವುದಾಗಿ ವರದಿಯಾಗಿದೆ. ಭಾರತೀಯ ಮೂಲದ ಶಿಶುವೈದ್ಯ ಭರತ್​ ಕುಮಾರ್​ ನಾರುಮಂಚಿ (43) ಅವರು ಇತ್ತೀಚೆಗಷ್ಟೇ ಕ್ಯಾನ್ಸರ್​ ಚಿಕಿತ್ಸೆಗೆ ಒಳಗಾಗಿದ್ದರ. ಅಲ್ಲದೆ, ಹೆಚ್ಚಿನ ದಿನ ಬದುಕುವುದಿಲ್ಲ ಎಂದು ಹೇಳಿದ್ದರು. ಅಂದಿನಿಂದ ಅವರು ಮಾನಸಿಕವಾಗಿ ಕುಗ್ಗಿದ್ದರು.

ಭರತ್​ರನ್ನು ಅವರು ಕೆಲಸ ಮಾಡುವ ಆಸ್ಟಿನ್​ನಲ್ಲಿರುವ ಚಿಲ್ಡ್ರನ್​ ಮೆಡಿಕಲ್​ ಗ್ರೂಪ್​ ಹಾಸ್ಪಿಟಲ್​ನಲ್ಲಿ ದಾಖಲಿಸಲಾಗಿತ್ತು. ಮಂಗಳವಾರ ಸಂಜೆ 4.30ರ ಸುಮಾರಿಗೆ ಭರತ್​ ಬಳಿ ಗನ್​ ಇರುವುದು ಆಸ್ಪತ್ರೆಯಲ್ಲಿ ಗೊತ್ತಾಗಿದೆ. ಅಲ್ಲದೆ, ಅವರೊಂದಿಗೆ ಕೆಲಸ ಮಾಡುವ ಕ್ಯಾಥರಿನ್ ಲಿಂಡ್ಲಿ ಡಾಟ್ಸನ್​ ವೈದ್ಯೆ ಸೇರಿದಂತೆ ಇತರರನ್ನು ಗುರಿಯಾಗಿಸಿಕೊಂಡು ಭರತ್​ ಬೆದರಿಕೆ ಹಾಕಿದ್ದಾರೆ.

ಇದರಿಂದ ಆಸ್ಪತ್ರೆಯಲ್ಲಿ ಸುಮಾರು 6 ಗಂಟೆಗಳ ಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿ ಭಯಭೀತಗೊಂಡ ಜನರು ಅಲ್ಲಿಂದ ಕಾಲ್ಕಿತ್ತಿದ್ದರೆ. ಆದರೆ, ಕ್ಯಾಥರಿನ್​ ಮೇಲೆ ಭರತ್​ ಗುಂಡು ಹಾರಿಸಿ ಕೊಂದಿದ್ದಾರೆ. ಇದಾದ ಬಳಿಕ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಕೊಲೆಗೆ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net