

Mahakumbh Mela: ಮಹಾ ಕುಂಭಮೇಳವು ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಜನವರಿ 13 ರಿಂದ ಪ್ರಯಾಗ್ ರಾಜ್ನಲ್ಲಿ ಆರಂಭವಾದ ಈ ಅದ್ದೂರಿ ಆಚರಣೆಗೆ ಅಪಾರ ಸಂಖ್ಯೆಯ ಭಕ್ತರು, ಸಾಧುಗಳು ಮತ್ತು ಅಘೋರರು ಪಾಲ್ಗೊಂಡಿದ್ದಾರೆ. ಈ ವೇಳೆ ಕುಂಭಮೇಳದ ಸಂಭ್ರಮದಲ್ಲಿ ಹುಡುಗಿಯೊಬ್ಬಳು ವಿಶೇಷ ಆಕರ್ಷಣೆಯಾಗಿದ ಮೊನಾಲಿಸಾ ಬೊಸ್ಲೆ ಇದೀಗ ಕುಂಭಮೇಳ ತೊರೆಯುವುದಾಗಿ ಹೇಳಿದ್ದಾಳೆ.
ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕಾಣುತ್ತಿರುವ ಮೊನಾಲಿಸಾ ಬೊಸ್ಲೆ ಹುಡುಗಿಯ ವಿಡಿಯೋಗಳು ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿವೆ. ಇದೀಗ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಏಕೆಂದರೆ ಅವರು ಏಜಕಾಏಕಿ ಖ್ಯಾತಿಯಿಂದ ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಮೊನಾಲಿಸಳ ತಂದೆ ತನ್ನ ಕೆಲಸವನ್ನು ಮುಂದುವರೆಸದಿರಲು ಮತ್ತು ಸುರಕ್ಷತೆಗಾಗಿ ಮನೆಗೆ ತೆರಳುವಂತೆ ಹೇಳಿದ್ದಾರೆ ಎನ್ನಲಾಗಿದೆ. ಈಗಾಗಿ ಮೊನಾಲಿಸ ಕುಂಭಮೇಳ ತೊರೆಯುತ್ತಿದ್ದಾಳೆ.
ಇನ್ನು ಈ ಬಗ್ಗೆ ಸ್ವತ ಮೊನಾಲಿಸಾ ಹೇಳಿಕೊಂಡಿದ್ದಾಳೆ ಎನ್ನಲಾಗಿದ್ದು, ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಗಾಗಿ ನಾನು ಇಂದೋರ್ಗೆ ಹಿಂತಿರುಗಬೇಕಾಗಿದೆ. ಸಾಧ್ಯವಾದರೆ, ಮುಂದಿನ ಮಹಾ ಕುಂಭಕ್ಕೆ ನಾನು ಹಿಂತಿರುಗುತ್ತೇನೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್)