ಜೇನುಗಣ್ಣಿನ ಸುಂದರಿ ಮೊನಾಲಿಸಾಗೆ ಬಾಲಿವುಡ್ ಸಿನಿಮಾದಿಂದ ಬಂತು ಆಫರ್! ಬದಲಾಗಿ ಹೋಯ್ತು monalisa ಲಕ್..ಅದೃಷ್ಟ ಅಂದ್ರೆ ಇದಲ್ವಾ..

Monalisa
Published on

-ಜೇನು ಕಂಗಳ ಸುಂದರಿಗೆ ಬಂಪರ್ ಆಫರ್.. ಬಾಲಿವುಡ್ ಸಿನಿಮಾದಲ್ಲಿ ಅವಕಾಶ..

ನವದೆಹಲಿ: (Monalisa) ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯೊಬ್ಬಳ ಫೋಟೋಗಳು ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಸುಂದರವಾದ ಜೇನುಗಣ್ಣಗಳು ಮತ್ತು ಸರಳವಾದ ಕೂದಲಿನ ಶೈಲಿಯು ಮಹಾ ಕುಂಭಮೇಳದಲ್ಲಿ ವಿಶೇಷ ಆಕರ್ಷಣೆಯಾಗಿದೆ. ಪ್ರಸ್ತುತ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವ ಹುಡುಗಿ ತನ್ನ ಸೌಂದರ್ಯದಿಂದ ಆಕರ್ಷಿತಳಾದಳು.

ಮೋನಾಲಿಸಾ ಮಧ್ಯಪ್ರದೇಶದ ಇಂದೋರ್‌ನ ಯುವತಿ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಲು ಕುಟುಂಬ ಸಮೇತ ಬಂದಿದ್ದಳು. ಆದರೆ ಈಕೆಯ ಸುಂದರ ರೂಪಕ್ಕೆ ಫಿದಾ ಆಗಿದ್ದ ಕೆಲವರು ಈಕೆಯ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಜನಪ್ರಿಯತೆ ಗಳಿಸಿದ್ದಾರೆ. ಮತ್ತು ಈಗ ಮೋನಾಲಿಸಾ ರೂಪ ಸಂಪೂರ್ಣವಾಗಿ ಬದಲಾಗಿದೆ. ಲೇಟೆಸ್ಟ್ ಮಾಹಿತಿ ಪ್ರಕಾರ ಈ ಹುಡುಗಿಗೆ ಬಾಲಿವುಡ್ ನಿಂದ ಒಳ್ಳೆ ಆಫರ್ ಬಂದಿದೆಯಂತೆ.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಸಿನಿಮಾ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ನಿರ್ದೇಶಕ ಸನೋಜ್ ಮಿಶ್ರಾ ಹುಡುಗಿಯನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

ಸನೋಜ್ ಮಿಶ್ರಾ ಮಾತನಾಡಿ, ಮೋನಾಲಿಸಾಳ ಮುಗ್ಧತೆಗೆ ಸೋತಿದ್ದೇನೆ. ಡೈರಿ ಆಫ್ ಮಣಿಪುರದಲ್ಲಿ ಆಕೆಗೆ ಅವಕಾಶ ನೀಡಲು ಬಯಸಿದ್ದೇನೆ. ಈ ಚಿತ್ರಕ್ಕಾಗಿ ಅಂತಹ ಹುಡುಗಿಯನ್ನು ಹುಡುಕುತ್ತಿದ್ದೇನೆ ಎಂದಿದ್ದಾರೆ.

ರೈತನ ಮಗಳ ಪಾತ್ರಕ್ಕೆ ಮೊನಾಲಿಸಾ ಸೆಟ್ಟೇರಲಿದ್ದಾರೆ. ಶೀಘ್ರದಲ್ಲೇ ಪ್ರಯಾಗ್ರಾಜ್ಗೆ ಹೋಗಿ ಅವರನ್ನು ಭೇಟಿಯಾಗಲಿದ್ದಾರೆ. ಮೋನಾಲಿಸಾಗೆ ನಟನೆ ಕಲಿಸುವುದಾಗಿ ಹೇಳಿದ್ದಾರೆ. ಬಾಲಿವುಡ್ ಸ್ಟಾರ್ ರಾಜ್‌ಕುಮಾರ್ ರಾವ್ ಅವರ ಹಿರಿಯ ಸಹೋದರ ಅಮಿತ್ ರಾವ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net