ಮದುವೆ ಗಂಡಿನ ಕಡೆಯಿಂದ ಹುಡುಗಿ ತಂದೆಗೆ ಸಿಕ್ಕಿತು 6.50 ಲಕ್ಷ ರೂ.; ಇದು ವಧು ದಕ್ಷಿಣೆಯಲ್ಲ! ಮತ್ತೇನು?

Marriage
Published on

ಮಧ್ಯಪ್ರದೇಶ: ವಿಜ್ರಂಭಣೆಯಿಂದಲೇ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಯಾರೂ ಊಹಿಸದ ಘಟನೆ ನಡೆದಿದೆ. ವಧು-ವರರ ಕುಟುಂಬಸ್ಥರ ನಡುವೆ ವಾಗ್ದಾಳಿ ಆರಂಭವಾಗಿದೆ. ಬಂದಿದ್ದ ಕುಟುಂಬಸ್ಥರಿಗೆ ಏನಿದು ಎಂಬ ಗೊಂದಲ!

ಹೌದು, ರಾಮ್ಸಿಯಾ ಗುಪ್ತಾ ಎಂಬಾತನಿಗೆ ಜ್ಯೋತಿ ಎಂಬಾಕೆಯೊಂದಿಗೆ ಜೂನ್.22ರಂದು ಮದುವೆ ನಿಶ್ಚಯಿಸಲಾಗಿತ್ತು. ಆರಂಭದಲ್ಲಿ ಕಾರ್ಯಕ್ರಮವೆಲ್ಲಾ ಸುಸೂತ್ರವಾಗಿ ನೆರವೇರಿದ್ದು, ಅಂತಿಮವಾಗಿ ನಾಟಕೀಯ ತಿರುವು ಪಡೆದುಕೊಂಡಿದೆ. ಏಕಾಏಕಿ ವಧುವಿನ ಮನೆಯವರು ಹುಡುಗನಿಗೆ ಈ ಹಿಂದೆ ಬೇರೆ ವಿವಾಹವಾಗಿದೆ. ಈ ವಿಚಾರ ಮುಚ್ಚಿಟ್ಟು ಮತ್ತೊಂದು ಮದುವೆಯಾಗಲು ಯತ್ನಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ನ್ಯಾಯಾಲಯದ ಮೂಲಕ ಮಗ ಈ ಹಿಂದೆ ಮದುವೆ ಆಗಿರುವುದು ಆತನ ತಂದೆಗೂ ಗೊತ್ತಿದೆ. ಇದನ್ನು ನಮ್ಮಿಂದ ಮುಚ್ಚಿಟ್ಟಿದ್ದಾರೆ ಎಂದು ಹುಡುಗಿ ಕಡೆಯವರು ಆರೋಪಿಸಿದ್ದಾರೆ. ಈ ವೇಳೆ ಮದುವೆ ಗಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಕೊನೆಗೆ ಒಂದಷ್ಟು ಮಾತುಕತೆಯ ಮೂಲಕ ಜಗಳ ಇತ್ಯರ್ಥವಾಗಿದೆ. ಈ ವೇಳೆ ವಿವಾಹ ಕಾರ್ಯಕ್ರಮಕ್ಕಾಗಿ ಈವರೆಗೆ ಸುಮಾರು 6 ಲಕ್ಷ ರೂಪಾಯಿಯಷ್ಟು ಖರ್ಷು ಮಾಡಿದ್ದೇನೆ ಎಂದು ವಧುವಿನ ತಂದೆ ಅಳಲು ತೋಡಿಕೊಂಡಿದ್ದಾನೆ.

ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಂದ!

ಜಗಳ ಕಂಡು ಮದುವೆಗೆ ಬಂದಿದ್ದವರು ಕೊತ್ವಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದ್ದಾರೆ. ಆದರೆ ಆರಂಬದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸರು ವಧು-ವರರ ತಂದೆಯನ್ನು ಕರೆಸಿ ಸಮಜಾಯಿಷಿ ನೀಡಿದ ಬಳಿಕ ವಿವಾದ ಅಂತ್ಯಗೊಂಡಿದೆ. ಬಳಿಕ 100 ರೂ. ಸ್ಟಾಂಪ್ ಪೇಪರ್​ನಲ್ಲಿ ನೋಟರಿ ಮಾಡಿ ಒಪ್ಪಂದ ಮಾಡಿಕೊಂಡಿದ್ದಾರೆ.

ಮದುವೆಗಾಗಿ ಹುಡುಗಿ ಕಡೆಯವರು ಖರ್ಚು ಮಾಡಿರುವ ಒಟ್ಟು 6 ಲಕ್ಷದ 50 ಸಾವಿರ ರೂಪಾಯಿಯನ್ನು ಹುಡುಗನ ಕಡೆಯವರು ವಧುವಿನ ತಂದೆಗೆ ಮರುಪಾವತಿ ಮಾಡಬೇಕು ಎಂದು ಸ್ಟ್ಯಾಂಪ್ ಪೇಪರ್ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಳಿಕ ಎರಡೂ ಕುಟುಂಬಗಳ ನಡುವಿನ ಗಲಾಟೆ ಇತ್ಯರ್ಥವಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net