

NTR: 'ಗುಂಟೂರು ಖಾರಂ' ಚಿತ್ರದ ಬಳಿಕ ಒಂದು ವರ್ಷದ ಬಳಿಕ ಮತ್ತೆ ನಿರ್ದೇಶನಕ್ಕೆ ಕೈಹಾಕಿದ ತೆಲುಗಿನ ಡೈರೆಕ್ಟರ್ ತ್ರಿವಿಕ್ರಮ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ಒಂದೊಳ್ಳೆ ಕಥೆಯನ್ನು ಸಿದ್ಧಪಡಿಸಿದ್ದರು. ಇನ್ನೇನು ಸಿನಿಮಾ ಹೆಸರು ಘೋಷಣೆ ಮಾಡಿ ಚಿತ್ರೀಕರಣ ಆರಂಭವಾಗಬೇಕಿತ್ತು. ಆದರೆ, ದಿಢೀರ್ ಅಲ್ಲು ಲೈನ್ ಚೆಂಚ್ ಮಾಡಿದ್ದು, ಅಟ್ಲಿ ಜತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ತ್ರಿವಿಕ್ರಮ್ ಇದೇ ಸಿನಿಮಾವನ್ನು ಜೂನಿಯರ್ ಎನ್ಟಿಆರ್ ಜತೆ ಮಾಡುತ್ತಿದ್ದಾರೆ ಎಂದು ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಹೌದು, ತ್ರಿವಿಕ್ರಮ್ ಮತ್ತು ಅಲ್ಲು ಅರ್ಜುನ್ ಈಗ ಚಿತ್ರಕ್ಕಾಗಿ ಸಿದ್ಧಪಡಿಸಿದ ಕಥೆಯನ್ನು NTR ಜೊತೆ ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಇದು ಆಗದೇ ಇರಬಹುದು ಏಕೆಂದರೆ, ತ್ರಿವಿಕ್ರಮ್ ನಟ ರಾಮ್ ಚರಣ್ ಮತ್ತು ವೆಂಕಟೇಶ್ ಜತೆ ಸರಣಿ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಇವು ಪೂರ್ಣಗೊಂಡ ನಂತರ, ತಾರಕ್ ಜತೆ ಸಿನಿಮಾ ಬರುವ ಸಾಧ್ಯತೆ ಇದೆ. ಇತ್ತ NTR ಪ್ರಶಾಂತ್ ನೀಲ್ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಜತೆಗಿನ ಪ್ರಾಜೆಕ್ಟ್ಗಳನ್ನು ಸಹ ಪೂರ್ಣಗೊಳಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಕೆಲವು ವರ್ಷಗಳ ಹಿಂದೆ, 'ಅರವಿಂದ ಸಮೇತ' ನಂತರ ತ್ರಿವಿಕ್ರಮ್-ಎನ್ಟಿಆರ್ ಮತ್ತೆ ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಅಧಿಕೃತ ಘೋಷಣೆ ಮಾಡಲಾಗಿತ್ತು. ಆದರೆ ಏನೋ ಆಯ್ತೋ ತಿಳಿಯದು ಆ ಯೋಜನೆ ಹಾಗೆಯೇ ಉಳಿಯಿತು. ಇದೀಗ, ಈಗ ಮತ್ತೊಬ್ಬ ಸ್ಟಾರ್ ಹೀರೋ ಒಬ್ಬ ವ್ಯಕ್ತಿ ಮಾಡಬೇಕಾದ ಕಥೆಯೊಂದಿಗೆ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್)