ಪ್ರಭಾಸ್ ಹುಟ್ಟುಹಬ್ಬ: ಡಾರ್ಲಿಂಗ್ ಹೊಸ ಚಿತ್ರದ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ಟ ಚಿತ್ರತಂಡ! | Darling

Bbau (52)
Published on

ಹೈದರಾಬಾದ್​: ಟಾಲಿವುಡ್​ ಸ್ಟಾರ್​, ಡಾರ್ಲಿಂಗ್(Darling) ಪ್ರಭಾಸ್​ ಅವರ ಹುಟ್ಟಹಬ್ಬದ(ಅ.23) ಸಂದರ್ಭದಲ್ಲಿ ಅವರ ಹೊಸ ಚಿತ್ರ 'ಫೌಜಿ' (Fauzi) ಘೋಷಣೆಯಾಗಿದೆ.

ಹೌದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಲುಕ್ ಟೀಸರ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಭಾಸ್ ಅವರ ತೀಕ್ಷ್ಣ ನೋಟದ ಫೋಟೋ ಮತ್ತು ಶಸ್ತ್ರಾಸ್ತ್ರಗಳ ಚಿತ್ರ ಕಾಣುತ್ತಿದ್ದು, ಇದು ಡಾರ್ಲಿಂಗ್​ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.

1940ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿ ನಡೆಯುವ ಐತಿಹಾಸಿಕ ಕಥಾವಸ್ತು ಹೊಂದಿದೆ. ಪ್ರಭಾಸ್​ ನಾಯಕ ನಟನಾಗಿರುವ ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಾ ಪ್ರದಾ ಸೇರಿದಂತೆ ಅನೇಕರ ತಾರಬಳಗವಿದೆ.

ಈ ಘೋಷಣೆಯೊಂದಿಗೆ ಪ್ರಭಾಸ್ ಅವರ ಫ್ಯಾನ್ಸ್​ ಸೋಷ್ಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪನ್ಸ್​​ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಇತರ ಚಿತ್ರಗಳಾದ 'ದಿ ರಾಜಾ ಸಾಬ್'ಗೆ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಹಾಡು ಶೀಘ್ರ ರೀಲಿಸ್​ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಘೋಷಿಸಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net