

ಉತ್ತರಪ್ರದೇಶ: ಅಯೋಧ್ಯೆ(Ayodhya)ರಾಮಜನ್ಮಭೂಮಿ ಮಂದಿರದ ಆಧ್ಯಾತ್ಮಿಕ ಕೇಂದ್ರವಾಗಿ ಪ್ರಪಂಚದ ಭಕ್ತರನ್ನು ಆಕರ್ಷಿಸುತ್ತದೆ. ಇನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಣ್ಣ ಶೀತಕಾಲದ ಸಂದರ್ಭಗಳನ್ನು ಇದೀಗ ಗಮನದಲ್ಲಿಟ್ಟುಕೊಂಡು, ಅಯೋಧ್ಯೆಯ ರಾಮ ಮಂದಿರದ ದರ್ಶನ ಮತ್ತು ಆರತಿ ಸಮಯಗಳನ್ನು ಬದಲಾಯಿಸಿದೆ.
ಭಕ್ತರಿಗೆ ಸೌಕರ್ಯವಾಗುವಂತೆ ಮತ್ತು ಅನುಕೂಲವಾಗುವಂತೆ ಎಲ್ಲಾ ಪ್ರಮುಖ ವಿಧಿಗಳನ್ನು ಅರ್ಧ ಗಂಟೆಯಷ್ಟು ಮುಂದೂಡಲಾಗಿದ್ದು, ಈ ಬದಲಾವಣೆಗಳು 2025ರ ಅ.23ರಿಂದ (ಇಂದಿನಿಂದ) ಜಾರಿಗೆ ಬಂದಿವೆ ಎಂದು ಟ್ರಸ್ಟ್ ತಿಳಿಸಿದೆ.
ಹೊಸ ದರ್ಶನ ಸಮಯಸೂಚಿ(ಹೊಸ ಸಮಯ)
ಮಂದಿರ ತೆರವು ಮತ್ತು ದರ್ಶನ ಆರಂಭ : ಬೆಳಗ್ಗೆ 7 ಗಂಟೆಗೆ
ದರ್ಶನ ಮುಂದುವರಿಕೆ: ಸಂಜೆ 6ರವರೆಗೆ
ಮಧ್ಯಾಹ್ನ ವಿರಾಮ: ಮಧ್ಯಾಹ್ನ 12 ರಿಂದ ರಿಂದ 1 ಗಂಟೆಯವರೆಗೆ (ಭೋಗ ಆರತಿ ಸಮಯ)
ಹೊಸ ಆರತಿ ಸಮಯಸೂಚಿ ಮಂಗಳ ಆರತಿ: ಬೆಳಗ್ಗೆ 4.20 ಶ್ರೃಂಗಾರ ಆರತಿ:ಬೆಳಿಗ್ಗೆ 6.30 ಭೋಗ ಆರತಿ: ಮಧ್ಯಾಹ್ನ 12ಕ್ಕೆ ಶಯನ ಆರತಿ: ಸಂಜೆ 6.30
ಭಕ್ತರು ಈ ಸಮಯಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ದರ್ಶನ ಮತ್ತು ಆರತಿ ಸಮಯದಲ್ಲಿ ಶಿಸ್ತು ಮತ್ತು ಶಾಂತಿ ಕಾಯ್ದುಕೊಳ್ಳಿ.
ಮಧ್ಯಾಹ್ನದ ವಿರಾಮದ ಸಮಯದಲ್ಲಿ ದರ್ಶನ ನಿಲ್ಲುತ್ತದೆ, ಆದರೆ ಆರತಿ ಮತ್ತು ಭೋಜನ ವಿಧಿಗಳಿಗಾಗಿ ಮಾತ್ರ.
ಈ ಬದಲಾವಣೆಗಳು ಶೀತಕಾಲದಲ್ಲಿ ಭಕ್ತರಿಗೆ ಸುಗಮ ದರ್ಶನವನ್ನು ಖಚಿತಪಡಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.(ಏಜೆನ್ಸೀಸ್)